Post office Jan Dhan Account: ನೀವು ಪೋಸ್ಟ್ ಆಫೀಸ್‌ನಲ್ಲಿ ಜನ್ ಧನ್ ಖಾತೆ (Post office Jan Dhan Account) ತೆರೆದರೆ ನಿಮಗೆ 2 ಲಕ್ಷ ರೂ.ಗಳ ಲಾಭ ಸಿಗುತ್ತದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ, ದೇಶದ ನಾಗರೀಕರು ಬ್ಯಾಂಕ್‌ಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶೂನ್ಯ ಬ್ಯಾಲೆನ್ಸ್‌ನಲ್ಲಿ ಖಾತೆ ತೆರೆಯಬಹುದಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಅಡಿಯಲ್ಲಿ ತೆರೆಯಲಾದ ಖಾತೆಗಳಲ್ಲಿ ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಈ ಖಾತೆಯಲ್ಲಿ ಲಭ್ಯವಿರುವ ಆಕರ್ಷಕ ವೈಶಿಷ್ಟ್ಯಗಳು ಯಾವುವು ಮತ್ತು ಈ ಖಾತೆಯನ್ನು ಹೇಗೆ ತೆರೆಯುವುದು ಎಂಬುದನ್ನು ತಿಳಿಯುವುದು ಮುಖ್ಯ. ಈ ಖಾತೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಪ್ರಯೋಜನವನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿದ ಜನರು ಮಾತ್ರ ಪಡೆಯುತ್ತಾರೆ ಎಂಬುದು ಸಹ ಗಮನಿಸಬೇಕಾದ ಸಂಗತಿ.
ಜನ್ ಧನ್ ಖಾತೆ ತೆರೆಯಲು ಬೇಕಾಗುವ ಅಗತ್ಯ ದಾಖಲೆಗಳು:
ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಅಥವಾ ಚಾಲನಾ ಪರವಾನಗಿ ಅಥವಾ ಪ್ಯಾನ್ ಕಾರ್ಡ್, ಮತದಾರರ ಕಾರ್ಡ್, NREGA ಜಾಬ್ ಕಾರ್ಡ್, ಪ್ರಾಧಿಕಾರದಿಂದ ನೀಡಲಾದ ಪತ್ರ ಇವುಗಳಲ್ಲಿ ಯಾವುದಾದರೂ ದಾಖಲೆಯನ್ನು ಬಳಸಬಹುದು. ಗೆಜೆಟೆಡ್ ಮೂಲಕ ನೀಡಿದ ಪತ್ರವು ಜನ್ ಧನ್ ಖಾತೆಯನ್ನು (Jan Dhan Account) ತೆರೆಯಲು ಅಗತ್ಯವಾಗಿರುತ್ತದೆ.
ಇದನ್ನೂ ಓದಿ- PM Jan dhan Account: ಖಾತೆಯಲ್ಲಿ ಹಣ ಇಲ್ಲದೇ ಇದ್ದರೂ 10,000 ರೂ.ಗಳನ್ನು ಹಿಂಪಡೆಯಬಹುದು, ತಕ್ಷಣವೇ ಈ ಖಾತೆಯನ್ನು ತೆರೆಯಿರಿ
ನಿಮ್ಮ ಹೊಸ ಜನ್ ಧನ್ ಖಾತೆಯನ್ನು ತೆರೆಯಲು ನೀವು ಬಯಸಿದರೆ, ನೀವು ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದು ಅಥವಾ ಅಂಚೆ ಕಚೇರಿಗೆ (Post office Jan Dhan Account) ಹೋಗಬಹುದು, ನಂತರ ಹೊಸ ಜನ್ ಧನ್ ಖಾತೆಯನ್ನು ತೆರೆಯಲು ನೀವು ಒಂದು ಅರ್ಜಿಯನ್ನು ಭರ್ತಿ ಮಾಡಬೇಕು. ಇದರಲ್ಲಿ, ಹೆಸರು, ಮೊಬೈಲ್ ಸಂಖ್ಯೆ, ಬ್ಯಾಂಕ್ ಶಾಖೆಯ ಹೆಸರು, ಅರ್ಜಿದಾರರ ವಿಳಾಸ, ನಾಮನಿರ್ದೇಶಿತ, ಉದ್ಯೋಗ ಮತ್ತು ವಾರ್ಷಿಕ ಆದಾಯ ಮತ್ತು ಅವಲಂಬಿತರ ಸಂಖ್ಯೆ, SSA ಕೋಡ್ ಅಥವಾ ವಾರ್ಡ್ ಸಂಖ್ಯೆ, ಗ್ರಾಮ ಕೋಡ್ ಅಥವಾ ಪಟ್ಟಣ ಕೋಡ್ ಇತ್ಯಾದಿ ಅಗತ್ಯ ಮಾಹಿತಿಗಳನ್ನು ಒದಗಿಸಬೇಕು.
ಒಂದೊಮ್ಮೆ ನೀವು ಈಗಾಗಲೇ ಖಾತೆಯನ್ನು ಹೊಂದಿದ್ದರೆ ನಿಮ್ಮ ಹಳೆಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಪರಿವರ್ತಿಸಬಹುದು. ಇದಕ್ಕಾಗಿ ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ರೂಪೇ ಕಾರ್ಡ್‌ಗಾಗಿ (Rupay Card) ಅರ್ಜಿ ಸಲ್ಲಿಸಬೇಕು ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಜನ್ ಧನ್ ಯೋಜನೆಗೆ ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ- EPFO ಚಂದಾದಾರರಿಗೆ ಮಹತ್ವದ ಸುದ್ದಿ! ಉದ್ಯೋಗಿಗಳು ತಮ್ಮ ಇಕ್ವಿಟಿ ಹೂಡಿಕೆ ನಿರ್ಧರಿಸಬಹುದೇ? ಇಲ್ಲಿದೆ ವಿವರ
ಜನ್ ಧನ್ ಖಾತೆಯ ಪ್ರಯೋಜನಗಳು:
>> 6 ತಿಂಗಳ ನಂತರ ಓವರ್ ಡ್ರಾಫ್ಟ್ ಸೌಲಭ್ಯ
>> 2 ಲಕ್ಷರೂ. ವರೆಗೆ ಅಪಘಾತ ವಿಮಾ ರಕ್ಷಣೆ
>> 30,000 ವರೆಗಿನ ಲೈಫ್ ಕವರ್, ಇದು ಅರ್ಹತಾ ಷರತ್ತುಗಳ ಪೂರೈಕೆಗೆ ಒಳಪಟ್ಟು ಫಲಾನುಭವಿಯ ಮೃತ್ಯುವಿಯ ವೇಳೆ ಲಭ್ಯವಿದೆ.
>> ಠೇವಣಿಯ ಮೇಲೆ ಬಡ್ಡಿಯನ್ನು ಗಳಿಸಲಾಗುತ್ತದೆ.
>> ಖಾತೆಯೊಂದಿಗೆ ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಸಹ ಒದಗಿಸಲಾಗುವುದು.
>> ಜನ್ ಧನ್ ಖಾತೆ ತೆರೆಯುವವರಿಗೆ ರೂಪೇ ಡೆಬಿಟ್ ಕಾರ್ಡ್ (Debit Card) ನೀಡಲಾಗುತ್ತದೆ, ಅದರಿಂದ ಖಾತೆದಾರರು ತಮ್ಮ ಖಾತೆಯಿಂದ ಹಣ ತೆಗೆಯಬಹುದು ಅಥವಾ ಖರೀದಿ ಮಾಡಬಹುದು.
>> ಜನ್ ಧನ್ ಖಾತೆಯ ಮೂಲಕ ವಿಮೆ, ಪಿಂಚಣಿ ಉತ್ಪನ್ನಗಳನ್ನು ಖರೀದಿಸುವುದು ಸುಲಭ.
>> ಒಂದು ವೇಳೆ ಜನ್ ಧನ್ ಖಾತೆ ಇದ್ದರೆ, ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಂಧನ್ ನಂತಹ ಯೋಜನೆಗಳಲ್ಲಿ ಪಿಂಚಣಿಗಾಗಿ ಖಾತೆಯನ್ನು ತೆರೆಯುವುದು ಸುಲಭವಾಗಿದೆ.
>> ದೇಶಾದ್ಯಂತ ಹಣ ವರ್ಗಾವಣೆಯ ಸೌಲಭ್ಯ
>> ಸರ್ಕಾರದ ಯೋಜನೆಗಳ ಲಾಭ ನೇರವಾಗಿ ಖಾತೆಗೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.