Post Office Investment Plan: ಕರೋನಾವೈರಸ್ ಹರಡುವುದನ್ನು ತಡೆಗಟ್ಟಲು ಜಾರಿಗೆ ತರಲಾಗಿದ್ದ ಲಾಕ್ಡೌನ್ನಿಂದಾಗಿ ಇಡೀ ಪ್ರಪಂಚದ ಆರ್ಥಿಕತೆ ಕೆಟ್ಟ ಹಂತ ತಲುಪಿದೆ. ಹೂಡಿಕೆದಾರರು ತಮ್ಮ ಹಣವನ್ನು ಹೂಡಿಕೆ ಮಾಡುವುದರಿಂದ ಹಿಂದೆ ಸರಿಯುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಸುರಕ್ಷಿತ ಹೂಡಿಕೆಯನ್ನು ಬಯಸಿದರೆ ಪೋಸ್ಟ್ ಆಫೀಸ್ನ ಈ ಯೋಜನೆ ನಿಮಗೆ ಹೆಚ್ಚು ಉತ್ತಮವಾಗಿದೆ ಎಂದು ಸಾಬೀತುಪಡಿಸಬಹುದು.
ಸಣ್ಣ ಹೂಡಿಕೆದಾರರು ಪೋಸ್ಟ್ ಆಫೀಸ್ (Post office)ನ ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಅಂಚೆ ಕಚೇರಿಯಲ್ಲಿ ಅಂತಹ ಕೆಲವು ಯೋಜನೆಗಳಿವೆ, ಇದರಲ್ಲಿ ನಿಮ್ಮ ಹೂಡಿಕೆಯ ಮೊತ್ತ ದ್ವಿಗುಣಗೊಳ್ಳುತ್ತದೆ. ಪೋಸ್ಟ್ ಆಫೀಸ್ನ ಅಂತಹ ಯೋಜನೆಗಳಲ್ಲಿ ಒಂದು ಕಿಸಾನ್ ವಿಕಾಸ್ ಪತ್ರ (Kisan Vikas Patra Scheme). ಈ ಯೋಜನೆಯಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ.
ನಿಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲವಾಗಿಸುವ Post Officeನ 4 ಪ್ರಮುಖ ಉಳಿತಾಯ ಯೋಜನೆಗಳಿವು
ಅಂಚೆ ಕಚೇರಿಯ ಈ ಯೋಜನೆಗೆ ಕಿಸಾನ್ ವಿಕಾಸ್ ಪತ್ರ (Kisan vikas Patra – KVP) ಯೋಜನೆ ಎಂದು ಹೆಸರಿಡಲಾಗಿದೆ. ಇದು ಭಾರತ ಸರ್ಕಾರ ಹೊರಡಿಸಿರುವ ಒಂದು ಬಾರಿ ಹೂಡಿಕೆ ಯೋಜನೆಯಾಗಿದೆ. ಇದು ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕುಗಳಲ್ಲಿ ಕಂಡುಬರುತ್ತದೆ. ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಯಲ್ಲಿ ಹೂಡಿಕೆದಾರರು ಮುಕ್ತಾಯದ ಅವಧಿಯ ನಂತರ ಹೂಡಿಕೆ ಮಾಡಿದ ಮೊತ್ತಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಪಡೆಯುತ್ತಾರೆ. ಇದರಲ್ಲಿ ಕನಿಷ್ಠ 1000 ರೂಪಾಯಿಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯನ್ನು ವಿಶೇಷವಾಗಿ ರೈತರಿಗಾಗಿ ಪರಿಚಯಿಸಲಾಗಿದ್ದು ಇದರಿಂದ ಅವರು ತಮ್ಮ ಹಣವನ್ನು ದೀರ್ಘಾವಧಿಯ ಆಧಾರದ ಮೇಲೆ ಉಳಿಸಬಹುದು. ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ ಪ್ರಕಾರ ಈ ಯೋಜನೆಯ ಮುಕ್ತಾಯ ಅವಧಿಯು ಅಂದರೆ ಮೆಚ್ಯುರಿಟಿ ಅವಧಿ 124 ತಿಂಗಳುಗಳು (10 ವರ್ಷಗಳು 4 ತಿಂಗಳುಗಳು).
ಬಡ್ಡಿದರ ಎಷ್ಟು?
ನೀವು ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಿದರೆ, ಈ ಮೊತ್ತವು 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಎರಡನೇ ತ್ರೈಮಾಸಿಕ ಅಂದರೆ ಸೆಪ್ಟೆಂಬರ್ 30 ರವರೆಗೆ ಬಡ್ಡಿದರವನ್ನು ಶೇಕಡಾ 6.9 ಕ್ಕೆ ನಿಗದಿಪಡಿಸಲಾಗಿದೆ. ನೀವು 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಅವಧಿ ಮುಗಿದ ನಂತರ ಈ ಮೊತ್ತವು 2 ಲಕ್ಷ ರೂ.ಗೆ ಹೆಚ್ಚಾಗುತ್ತದೆ.
ಅಂಚೆ ಕಚೇರಿಯಲ್ಲಿ ಡಿಎಲ್ನಿಂದ ಪ್ಯಾನ್ ಕಾರ್ಡ್ವರೆಗೆ ಅರ್ಜಿ ಸಲ್ಲಿಸಲು ಇದು ಸುಲಭ ವಿಧಾನ
ಸಾಲ ಸೌಲಭ್ಯವೂ ಲಭ್ಯವಿದೆ:-
ನೀವು ಸಾಲ ತೆಗೆದುಕೊಳ್ಳಲು ಬಯಸಿದರೆ ನೀವು ತುಂಬಾ ಸುಲಭವಾದ ಷರತ್ತುಗಳೊಂದಿಗೆ ಸಾಲವನ್ನು ಪಡೆಯುತ್ತೀರಿ. ಇದಕ್ಕೆ ನೀವು ಕಡಿಮೆ ಬಡ್ಡಿಯನ್ನೂ ಪಾವತಿಸಬೇಕಾಗುತ್ತದೆ. ಆದ್ದರಿಂದ ನೀವು ಆರ್ಥಿಕವಾಗಿ ತೊಂದರೆಯಲ್ಲಿದ್ದರೆ ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ನಿಮ್ಮ ಹಣಕಾಸಿನ ತೊಂದರೆಗಳನ್ನು ನಿವಾರಿಸಲು ಅದರ ಮೇಲೆ ಸಾಲ ಪಡೆಯಬಹುದು.