ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ಕೇಂದ್ರವು ʼಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿʼ ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡುವ ನಿರೀಕ್ಷೆಯಿದೆ. ಈ ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಪ್ರಮುಖ ಘೋಷಣೆ ನಿರೀಕ್ಷಿಸದಿದ್ದರೂ, ಈ ವರ್ಷ ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ಶೇ.50ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ವರ್ಷಕ್ಕೆ 6,000 ರೂ.ನಿಂದ 9,000 ರೂ.ಗೆ ಹೆಚ್ಚಿಸಬಹುದು ಎಂದು ವರದಿಯಾಗಿದೆ. 2024ರ ಕೇಂದ್ರ ಬಜೆಟ್‌ನಲ್ಲಿ ನಿರೀಕ್ಷಿತ 3 ಪ್ರಮುಖ ಸಾಮಾಜಿಕ ವಲಯದ ಘೋಷಣೆಗಳ ಪೈಕಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಮೊತ್ತದ ಹೆಚ್ಚಳವು ಒಂದು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.
ಇದನ್ನೂ ಓದಿ: 9ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ
ಕಳೆದ ವರ್ಷದ ಬಜೆಟ್ ಪ್ರಕಾರ, ಪಿಎಂ ಕಿಸಾನ್ ಯೋಜನೆಯ ವೆಚ್ಚವು 60,000 ಕೋಟಿ ರೂ. ಆಗಿತ್ತು. ಈ ವರ್ಷ ಶೇ.50ರಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಕಲ್ಯಾಣ ಯೋಜನೆಗಳ ಹೊರತಾಗಿ ಖಾಸಗಿ ವಲಯದ ಹೂಡಿಕೆಯು ವಲಯಗಳಾದ್ಯಂತ ಇನ್ನೂ ಹೆಚ್ಚಾಗದ ಕಾರಣ, ಕೇಂದ್ರವು ಬಂಡವಾಳ ವೆಚ್ಚದ ಒತ್ತಡ ಮುಂದುವರಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
ರಸ್ತೆಗಳು, ಬಂದರು ಮತ್ತು ವಿದ್ಯುತ್ ಸ್ಥಾವರಗಳ ಮೇಲಿನ ವೆಚ್ಚಕ್ಕೆ ಆದ್ಯತೆ ನೀಡುವ ಮೂಲಕ ಕೇಂದ್ರ ಸರ್ಕಾರವು ಕಳೆದ 3 ವರ್ಷಗಳಲ್ಲಿ ವಾರ್ಷಿಕ ಬಂಡವಾಳ ವೆಚ್ಚವನ್ನು ಸುಮಾರು 3ನೇ ಒಂದು ಭಾಗದಷ್ಟು ಹೆಚ್ಚಿಸಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ವಲಯಗಳು ಉತ್ತೇಜನ ಕಾಣುವ ನಿರೀಕ್ಷೆಯಿದೆ.
ಬಜೆಟ್‌ಗೂ ಮುನ್ನ ಸರ್ವಪಕ್ಷ ಸಭೆ
2024ರ ಮಧ್ಯಂತರ ಬಜೆಟ್ ಮಂಡನೆಗೆ ಮುನ್ನ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಸರ್ವಪಕ್ಷ ಸಭೆ ಕರೆದಿದ್ದಾರೆ. ವಿವಿಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಬಯಸುವ ವಿಷಯಗಳನ್ನು ಹೈಲೈಟ್ ಮಾಡುವುದರ ಬಗ್ಗೆ ಚರ್ಚಿಸಲಾಗುತ್ತದೆ. ಪ್ರತಿಯೊಂದು ಅಧಿವೇಶನಕ್ಕೂ ಮುನ್ನ ಸರ್ವಪಕ್ಷದ ನಾಯಕರ ಸಹಕಾರ ಪಡೆಯುವುದು ವಾಡಿಕೆಯಾಗಿದೆ. ಫೆಬ್ರವರಿ 1ರಂದು ನಿರ್ಮಲಾ ಸೀತಾರಾಮನ್ ಅವರು ಕೇವಲ ಮಧ್ಯಂತರ ಬಜೆಟ್ ಮಾತ್ರ ಮಂಡಿಸಲಿದ್ದಾರೆ. ಲೋಕಸಭಾ ಚುನಾವಣೆ ಮತ್ತು ಹೊಸ ಕ್ಯಾಬಿನೆಟ್ ನೇಮಕದ ನಂತರ ಮುಂಬರುವ ಹಣಕಾಸು ವರ್ಷದ ಸಂಪೂರ್ಣ ಕೇಂದ್ರ ಬಜೆಟ್ ಮಂಡಿಸಲಾಗುತ್ತದೆ.
ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ NDA ಸರ್ಕಾರ: ನಿತೀಶ್ ಕುಮಾರ್ ಜೊತೆ ಸಚಿವರಾಗಿ 8 ಮಂದಿ ಪ್ರಮಾಣವಚನ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.