PM Kisan Yojana: 11ನೇ ಕಂತಿನ ಬಳಿಕ ಪಿಎಂ ಕಿಸಾನ್ ಯೋಜನೆಯ ಲಾಭಾರ್ಥಿಗಳಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ

PM Kisan Yojana: ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತಿನ ಬಿಡುಗಡೆಯ ಬಳಿಕ ಇದೀಗ ಸರ್ಕಾರ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದ್ದು, ನೀವೂ ಕೂಡ ಈ ರೈತ ಯೋಜನೆಯ ಫಲಾನುಭವಿಗಳಾಗಿದ್ದರೆ, ಕೂಡಲೇ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ. ಈ ಕುರಿತಾದ ಇತ್ತೀಚಿನ ಅಪ್ಡೇಟ್ ಏನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Jun 18, 2022, 03:21 PM IST
  • ಪಿಎಂ ಕಿಸಾನ್ ಸಮ್ಮಾನ್ ನಿಧಿಯ 11ನೇ ಕಂತು ಈಗಾಗಲೇ ಬಿಡುಗಡೆಯಾಗಿದೆ.
  • ಇದರ ಜೊತೆಗೆ ಇದೀಗ ಸರ್ಕಾರ ರೈತರಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದೆ.
  • eKYC ಗಡುವನ್ನು ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ.
PM Kisan Yojana: 11ನೇ ಕಂತಿನ ಬಳಿಕ ಪಿಎಂ ಕಿಸಾನ್ ಯೋಜನೆಯ ಲಾಭಾರ್ಥಿಗಳಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ title=
PM Kisan Samman Nidhi

PM Kisan Yojana: ನೀವು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭಾವಿಗಲಾಗಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. 11ನೇ ಕಂತಿನ ಹಣ ಬಿಡುಗಡೆಯ ಬಳಿಕ ಇದೀಗ ಕೇಂದ್ರ ಸರ್ಕಾರ ರೈತರಿಗೆ ಮತ್ತೊಂದು ದೊಡ್ಡ ಸೌಲಭ್ಯ ನೀಡುತ್ತಿದೆ. ನೀವೂ ಸಹ ಈ ಯೋಜನೆಯಡಿಯಲ್ಲಿ ekyc ಅನ್ನು ಇದುವರೆಗೆ ಮಾಡಿಸಿಲ್ಲ ಎಂದಾದಲ್ಲಿ, ಈ ಸುದ್ದಿ ನಿಮಗೆ ತುಂಬಾ ನೆಮ್ಮದಿಯನ್ನು ನೀಡಲಿದೆ.

ಕೇಂದ್ರ ಸರ್ಕಾರದ ಘೋಷಣೆ
ಯೋಜನೆಯ ಪ್ರಯೋಜನಗಳನ್ನು ಪಡೆಯಲು ಕೇಂದ್ರ ಸರ್ಕಾರವು ಈಗ ಕಡ್ಡಾಯ eKYC ಗಡುವನ್ನು ವಿಸ್ತರಿಸಿದೆ. ಈ ಮಾಹಿತಿಯನ್ನು ಪಿಎಂ ಕಿಸಾನ್ ಪೋರ್ಟಲ್ (pmkisan.gov.in) ನಲ್ಲಿ ನೀಡಲಾಗಿದೆ. ಪಿಎಂ ಕಿಸಾನ್ ವೆಬ್‌ಸೈಟ್‌ನಲ್ಲಿನ ಫ್ಲಾಶ್ ಮಾಡಲಾಗಿರುವ ಮಾಹಿತಿಯ ಪ್ರಕಾರ, 'ಎಲ್ಲಾ PMKISAN ಫಲಾನುಭವಿಗಳಿಗೆ eKYC ಗಡುವನ್ನು 31 ಜುಲೈ 2022 ರವರೆಗೆ ವಿಸ್ತರಿಸಲಾಗಿದೆ'. ಮೊದಲು ಅದರ ಗಡುವು ಮೇ 31, 2022 ಆಗಿತ್ತು.

ಇ-ಕೆವೈಸಿ ಇಲ್ಲದೆ ಹಣ ಲಭ್ಯವಾಗುವುದಿಲ್ಲ
ಇ-ಕೆವೈಸಿ ಇಲ್ಲದೆ ನಿಮ್ಮ ಕಂತು ಬಿಡುಗಡೆಯಾಗದೆ ಇರುವ ಸಾಧ್ಯತೆ ಇದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11ನೇ ಕಂತು ಕೂಡ ಬಿಡುಗಡೆಯಾಗಿದೆ. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ, ರೈತರು ಕಿಸಾನ್ ಕಾರ್ನರ್‌ನಲ್ಲಿ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಎಂದು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ರೈತರು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್, ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದ ನೀವು ಮನೆಯಲ್ಲಿ ಕುಳಿತು ಈ ಕೆಲಸವನ್ನು ಮಾಡಬಹುದು.

ಇದನ್ನೂ ಓದಿ-SBI ಗ್ರಾಹಕರಿಗೆ ಭಾರಿ ಸಂತಸದ ಸುದ್ದಿ, FD ಬಡ್ಡಿ ದರಗಳಲ್ಲಿ ಹೆಚ್ಚಳ

ಹೇಗೆ ಮಾಡಬೇಕು?
1. ಆಧಾರ್ ಆಧಾರಿತ OTP ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿ 'EKYC' ಆಯ್ಕೆಯನ್ನು ಕ್ಲಿಕ್ ಮಾಡಬೇಕು
2. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ CSC ಕೇಂದ್ರಗಳನ್ನು ಸಂಪರ್ಕಿಸಿ.
3. ನಿಮ್ಮ ಮೊಬೈಲ್, ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ನೀವು ಅದನ್ನು ಮನೆಯಿಂದಲೇ ಪೂರ್ಣಗೊಳಿಸಬಹುದು.
4. ಇದಕ್ಕಾಗಿ, ನೀವು ಮೊದಲು https://pmkisan.gov.in/ ಪೋರ್ಟಲ್‌ಗೆ ಭೇಟಿ ನೀಡಿ.
5. ಬಲಭಾಗದಲ್ಲಿ ನೀಡಲಾಗಿರುವ ಟ್ಯಾಬ್ ಗಳಲ್ಲಿ, ಮೇಲ್ಭಾಗದಲ್ಲಿ ನೀವು ಇ-ಕೆವೈಸಿ ಬರೆದಿರುವುದನ್ನು ಗಮನಿಸಬಹುದು. ಅದರ ಮೇಲೆ ಕ್ಲಿಕ್ ಮಾಡಿ ನೀಡಲಾಗುವ ಸೂಚನೆಗಳನ್ನು ಅನುಸರಿಸಿ.

ಇದನ್ನೂ ಓದಿ-Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಇದರ ಹೊರತಾಗಿ, ಅಲ್ಲಿಯೇ ನಿಮ್ಮ ಕಂತಿನ ಸ್ಥಿತಿಯನ್ನು ನೀವು ಸುಲಭವಾಗಿ ಪರಿಶೀಲಿಸಬಹುದು. ಅದಕ್ಕಾಗಿ ನೀವು ಬೇರೆ ಎಲ್ಲಿಗೂ ಕೂಡ ಹೋಗಬೇಕಾಗಿಲ್ಲ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News