PM Kisan ರೈತರಿಗೆ ಸಿಹಿ ಸುದ್ದಿ : ಈ ದಿನಾಂಕದಂದು 11ನೇ ಕಂತಿನ ಹಣ ನಿಮ್ಮ ಖಾತೆಗೆ!

11ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ಮೇ ತಿಂಗಳಲ್ಲೇ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.

Written by - Channabasava A Kashinakunti | Last Updated : Apr 22, 2022, 01:26 PM IST
  • ಮೇ 3 ರಂದು 11 ನೇ ಕಂತು ಬಿಡುಗಡೆಯಾಗುವ ನಿರೀಕ್ಷೆ!
  • ನಿಧಿ ವರ್ಗಾವಣೆ ಪ್ರಕ್ರಿಯೆ ಆರಂಭ!
  • 11 ನೇ ಕಂತಿಗೆ ಇ-ಕೆವೈಸಿ ಮಾಡುವುದು ಅವಶ್ಯಕ
PM Kisan ರೈತರಿಗೆ ಸಿಹಿ ಸುದ್ದಿ : ಈ ದಿನಾಂಕದಂದು 11ನೇ ಕಂತಿನ ಹಣ ನಿಮ್ಮ ಖಾತೆಗೆ! title=

PM Kisan Samman Nidhi Yojana 11th Installment : ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (ಪಿಎಂ ಕಿಸಾನ್) 11 ನೇ ಕಂತಿನ ಹಣಕ್ಕೆ ಕಾಯುತ್ತಿದ್ದ 12 ಕೋಟಿ 50 ಲಕ್ಷ ಫಲಾನುಭವಿಗಳಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. 11ನೇ ಕಂತು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆಯಾಗಲಿದೆ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ಮೇ ತಿಂಗಳಲ್ಲೇ ಕಂತಿನ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಮೇ 3 ರಂದು 11 ನೇ ಕಂತು ಬಿಡುಗಡೆಯಾಗುವ ನಿರೀಕ್ಷೆ!

11 ನೇ ಕಂತು ನಿಮ್ಮ ಖಾತೆಗೆ ಶೀಘ್ರದಲ್ಲೇ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಅರ್ಹ ರೈತರ ವರ್ಗಾವಣೆಯ ವಿನಂತಿಗೆ (ಆರ್‌ಎಫ್‌ಟಿ) ರಾಜ್ಯ ಸರ್ಕಾರಗಳು ಸಹಿ ಹಾಕಿವೆ. ಮಾಧ್ಯಮ ವರದಿಗಳ ಪ್ರಕಾರ, ಅಕ್ಷಯ ತೃತೀಯ ಅಂದರೆ ಮೇ 3 ರಂದು ಪ್ರಧಾನಿ ಮೋದಿ ಅವರೇ ಕಂತನ್ನು ಬಿಡುಗಡೆ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷವೂ ಮೇ 15 ರಂದು ಕಂತು ಬಿಡುಗಡೆಯಾಗಿದ್ದರಿಂದ ಇದನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : ಮೇ ತಿಂಗಳಲ್ಲಿ ಒಟ್ಟು 13 ದಿನ ಬ್ಯಾಂಕ್ ರಜೆ, ಇಲ್ಲಿದೆ ಪಟ್ಟಿ

ನೀವು ಈ ಸ್ಟೇಟಸ್ ನೋಡಿದರೆ ಕಂತು ಶೀಘ್ರದಲ್ಲೇ ಬಿಡುಗಡೆ ಆಗಲಿದೆ

ನಿಮ್ಮ ಕಂತುಗಳಲ್ಲಿ ಪ್ರಸ್ತುತ ಅಪ್‌ಡೇಟ್ ಏನೆಂದರೆ ನಿಮ್ಮ ಪಿಎಂ ಕಿಸಾನ್ ಖಾತೆಯನ್ನು ನೀವು ಪರಿಶೀಲಿಸಬೇಕು. ನಿಮ್ಮ ಪಿಎಂ ಕಿಸಾನ್ ಖಾತೆಯಲ್ಲಿ 11ನೇ ಕಂತಿಗೆ ರಾಜ್ಯದಿಂದ Rft ಸಹಿ ಮಾಡಿರುವುದನ್ನು ನೀವು ನೋಡಿದರೆ, 11 ನೇ ಕಂತು ಶೀಘ್ರದಲ್ಲೇ ನಿಮ್ಮ ಖಾತೆಗೆ ಜಮಾ ಆಗಲಿದೆ. 

ನಿಧಿ ವರ್ಗಾವಣೆ ಪ್ರಕ್ರಿಯೆ ಆರಂಭ!

ಪಿಎಂ ಕಿಸಾನ್ ಖಾತೆಯ ಸ್ಟೇಟಸ್ ಪರಿಶೀಲಿಸಿದಾಗ, ರಾಜ್ಯವಾರು ಅನುಮೋದನೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಬರೆದಿರುವುದನ್ನು ನೀವು ನೋಡಿದರೆ, ನಿಮ್ಮ ಖಾತೆಯಲ್ಲಿ ರಾಜ್ಯ ಸರ್ಕಾರದ ಅನುಮೋದನೆಯು ಇನ್ನೂ ಬಾಕಿ ಉಳಿದಿದೆ. FTO ಅನ್ನು ರಚಿಸಲಾಗಿದೆ ಮತ್ತು ಪಾವತಿ ದೃಢೀಕರಣವು ಬಾಕಿ ಉಳಿದಿದೆ ಎಂದು ಬರೆದಿದ್ದರೆ, ಹಣ ವರ್ಗಾವಣೆಯ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದರ್ಥ.

11 ನೇ ಕಂತಿಗೆ ಇ-ಕೆವೈಸಿ ಮಾಡುವುದು ಅವಶ್ಯಕ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 11 ನೇ ಕಂತಿಗೆ, ಇ-ಕೆವೈಸಿ ಅನ್ನು ಸರ್ಕಾರವು ಕಡ್ಡಾಯಗೊಳಿಸಿದೆ ಎಂದು ನಾವು ನಿಮಗೆ ಹೇಳೋಣ. ಇ-ಕೆವೈಸಿ ನಡೆಸುವ ಕೊನೆಯ ದಿನಾಂಕವನ್ನು ಸರ್ಕಾರವು ಮೇ 31 ಕ್ಕೆ ವಿಸ್ತರಿಸಿದೆ. ಈ ಯೋಜನೆಯಲ್ಲಿ ಸರ್ಕಾರವು ಪ್ರತಿ ವರ್ಷ 6000 ರೂಪಾಯಿಗಳನ್ನು ರೈತರ ಖಾತೆಗೆ ಕಳುಹಿಸುತ್ತದೆ. ಈ ಮೊತ್ತವನ್ನು 2000-2000 ರ ಮೂರು ಕಂತುಗಳಲ್ಲಿ ಕಳುಹಿಸಲಾಗುತ್ತದೆ. ಇದರಲ್ಲಿ ಸುಮಾರು 12.5 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : Arecanut Today Price: ಅಡಿಕೆ ಧಾರಣೆ ನಾಗಾಲೋಟ, ಇಲ್ಲಿದೆ ಇಂದಿನ ದರ ಪಟ್ಟಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News