PM Kisan: ದೇಶದ ಲಕ್ಷಾಂತರ ರೈತರಿಗೊಂದು ಬಿಗ್ ಶಾಕ್! ಲಿಸ್ಟ್ ಜಾರಿಗೊಳಿಸಿದ ಸರ್ಕಾರ!

PM Kisan Scheme Update: ಒಂದು ವೇಳೆ ನೀವೂ ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭಾವಿಗಳಾಗಿದ್ದರೆ, ನೀವು ಸರ್ಕಾರಕ್ಕೆ ರೂ.2000 ಮರುಪಾವತಿಸಬೇಕಾಗಲಿದೆ!  

Written by - Nitin Tabib | Last Updated : Sep 8, 2022, 09:38 PM IST
  • ರೈತರು ತಮ್ಮ ಡೇಟಾವನ್ನು ಪೋರ್ಟಲ್‌ನಲ್ಲಿ ಆದಷ್ಟು ಬೇಗ ಅಪ್‌ಲೋಡ್ ಮಾಡಿ,
  • ಅವರ ಖಾತೆಗೆ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
  • ಸರಕಾರದಿಂದ ರೈತರಿಗೆ 2000 ಸಾವಿರ ರೂ.ಗಳ ಒಟ್ಟು ಮೂರು ಕಂತುಗಳನ್ನು ಈ ಯೋಜನೆಯ ಅಡಿ ಪಾವತಿಸಲಾಗುತ್ತದೆ.
PM Kisan: ದೇಶದ ಲಕ್ಷಾಂತರ ರೈತರಿಗೊಂದು ಬಿಗ್ ಶಾಕ್! ಲಿಸ್ಟ್ ಜಾರಿಗೊಳಿಸಿದ ಸರ್ಕಾರ! title=
PM Kisan Samman Nidhi Update

PM Kisan Scheme: ಪ್ರಧಾನಿ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆದ ಲಕ್ಷಾಂತರ ರೈತರ ಪಾಲಿಗೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ಈ ಸರ್ಕಾರದ ಯೋಜನೆಯ ಲಾಭವನ್ನು ಪಡೆಯುತ್ತಿದ್ದರೆ, ಇದೀಗ ನೀವು ಅನರ್ಹರಾಗಿದ್ದಾರೆ 2000 ರೂಪಾಯಿಗಳನ್ನು ಹಿಂದಿರುಗಿಸಬೇಕಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಯುಪಿಯ ಸುಮಾರು 21 ಲಕ್ಷ ಅನರ್ಹ ಫಲಾನುಭವಿಗಳು ಸರ್ಕಾರದ ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ.

ಹಣವನ್ನು ಏಕೆ ಹಿಂತಿರುಗಿಸಬೇಕು?
ಉತ್ತರ ಪ್ರದೇಶದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆಯಲ್ಲಿ ಸುಮಾರು 21 ಲಕ್ಷ ರೈತರು ಅನರ್ಹರು ಎಂದು ತಿಳಿದುಬಂದಿದೆ. ಈ ಜನರು ಈ ಯೋಜನೆಯಡಿ ಇದುವರೆಗೆ ನೀಡಿದ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಬೇಕಾಗುತ್ತದೆ. ಸರ್ಕಾರದ ಈ ಯೋಜನೆಯ ಲಾಭವನ್ನು ತಪ್ಪಾದ ರೀತಿಯಲ್ಲಿ ಪಡೆದವರು ಈ ಹಣವನ್ನು ಹಿಂದಿರುಗಿಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ-TVS New Bike Launch: ಸೈಲೆಂಟ್ ಆಗಿ ಮಾರುಕಟ್ಟೆಗೆ ಎರಡು ಬೈಕ್ ಬಿಡುಗಡೆ ಮಾಡಿದ ಟಿವಿಎಸ್

ಈ ತಿಂಗಳ ಅಂತ್ಯದೊಳಗೆ ಹಣ ಬರಲಿದೆ
ಇದರೊಂದಿಗೆ, ಪಿಎಂ ಕಿಸಾನ್‌ನ 12 ನೇ ಕಂತು ಈ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆದರೆ ಈ ಕಂತಿನ ಹಣವನ್ನು ಕೇವಲ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ ಜನರ ಖಾತೆಗೆ ಮಾತ್ರ ವರ್ಗಾಯಿಸಲಾಗುವುದು ಎನ್ನಲಾಗಿದ್ದು, ಇದರೊಂದಿಗೆ ಅರ್ಹ ಫಲಾನುಭವಿಗಳ ಪರಿಶೀಲನೆ ಕೂಡ ನಡೆಯಲಿದೆ. 

ಇದನ್ನೂ ಓದಿ-Ration Card : ಸರ್ಕಾರದ ಈ ನಡೆಯಿಂದ ಹೆಚ್ಚಿದ 'ಪಡಿತರ ಚೀಟಿದಾರರ' ಸಮಸ್ಯೆ, 70 ಲಕ್ಷ ಕಾರ್ಡ್ ರದ್ದು!

2000 ರೂಪಾಯಿಗಳ ಒಟ್ಟು 3 ಕಂತುಗಳು ಲಭಿಸುತ್ತವೆ
ರೈತರು ತಮ್ಮ ಡೇಟಾವನ್ನು ಪೋರ್ಟಲ್‌ನಲ್ಲಿ ಆದಷ್ಟು ಬೇಗ ಅಪ್‌ಲೋಡ್ ಮಾಡಿ, ಅವರ ಖಾತೆಗೆ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಸರಕಾರದಿಂದ ರೈತರಿಗೆ 2000 ಸಾವಿರ ರೂ.ಗಳ ಒಟ್ಟು ಮೂರು ಕಂತುಗಳನ್ನು ಈ ಯೋಜನೆಯ ಅಡಿ ಪಾವತಿಸಲಾಗುತ್ತದೆ. ಈ ಯೋಜನೆಯಡಿ, ಪ್ರತಿ ಅರ್ಹ ರೈತರಿಗೆ ಮೂರು ಕಂತುಗಳಲ್ಲಿ ಒಟ್ಟು 6000 ಹಣ ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News