PM Kisan ಲಾಭಾರ್ಥಿಗಳಿಗೊಂದು ಬಿಗ್ ಅಪ್ಡೇಟ್, ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಸರ್ಕಾರ

PM Kisan Latest Update: ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸರ್ಕಾರ ರೈತರ ಖಾತೆಗೆ ನೇರ ವರ್ಗಾವಣೆಯ ಮೂಲಕ 12ನೇ ಕಂತಿನ ರೂ.2000 ಜಾರಿಗೊಳಿಸಿದೆ. ಆದರೆ, ಇನ್ಮುಂದೆ ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಲಾಭಾರ್ಥಿಗಳ ಸ್ಥಿತಿ ಪರಿಶೀಲನೆಯ ವ್ಯವಸ್ಥೆಯನ್ನು ಸರ್ಕಾರ ಬದಲಾಯಿಸಿದೆ.  

Written by - Nitin Tabib | Last Updated : Nov 1, 2022, 03:50 PM IST
  • ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ಅವರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ
  • ಕೇಂದ್ರದ ಮೋದಿ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಈ ಯೋಜನೆಯಡಿ ದೇಶಾದ್ಯಂತ ಸುಮಾರು 12 ಕೋಟಿ ರೈತರಿಗೆ ಸರ್ಕಾರದಿಂದ ಪ್ರತಿ ವರ್ಷ 6 ಸಾವಿರ ರೂ. ಹಣ ವರ್ಗಾಯಿಸಲಾಗುತ್ತದೆ.
PM Kisan ಲಾಭಾರ್ಥಿಗಳಿಗೊಂದು ಬಿಗ್ ಅಪ್ಡೇಟ್, ಈ ವ್ಯವಸ್ಥೆಯಲ್ಲಿ ಬದಲಾವಣೆ ತಂದ ಸರ್ಕಾರ title=
PM Kisan Update

PM Kisan Changes: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್ ಯೋಜನೆ) ಸ್ಥಿತಿ ಪರಿಶೀಲನೆಯ ವ್ಯವಸ್ಥೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆಯನ್ನು ತಂದಿದೆ. ಯೋಜನೆಯ ಫಲಾನುಭವಿ ರೈತರು ಇನ್ನು ಮುಂದೆ ಆಧಾರ್ ಕಾರ್ಡ್‌ನೊಂದಿಗೆ ಫಲಾನುಭವಿಯ ಸ್ಥಿತಿಯನ್ನು ಪರಿಶೀಲಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಸರ್ಕಾರ ರೈತರ ಖಾತೆಗೆ ನೇರ ವರ್ಗಾವಣೆ ಲಾಭದ ಮೂಲಕ 12ನೇ ಕಂತಿನ 2000 ರೂ. ಜಾರಿಗೊಳಿಸಿದೆ. ಈಗ ಪಿಎಂ ಕಿಸಾನ್‌ನ ಪೋರ್ಟಲ್‌ನಲ್ಲಿ ಫಲಾನುಭವಿಯ ಸ್ಥಿತಿಯನ್ನು ನೋಡುವ ವ್ಯವಸ್ಥೆಯನ್ನು ಸಹ ಬದಲಾಯಿಸಲಾಗಿದೆ.

ಎಲ್ಲ ರೈತರ ಖಾತೆಗೆ ಹಣ ಬಂದಿಲ್ಲ
ಹೊಸ ನಿಯಮದ ಪ್ರಕಾರ, ಸ್ಥಿತಿಯನ್ನು ಪರಿಶೀಲಿಸಲು ನೀವು ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ಬಳಸಬೇಕಾಗಲಿದೆ. ಪ್ರಧಾನಿ ಮೋದಿಯವರು ಇತ್ತೀಚೆಗೆ ವರ್ಗಾವಣೆ ಮಾಡಿದ ಹಣ ಎಲ್ಲ ರೈತರ ಖಾತೆಗೆ ಬಂದಿಲ್ಲ. ಅಂತಹ ಜನರು ದಾಖಲೆಗಳು ಸರಿಯಾಗಿದ್ದರೆ, ಅವರು ಕಂತು ಮೊತ್ತಕ್ಕಾಗಿ 30 ನವೆಂಬರ್ 2022 ರವರೆಗೆ ಕಾಯಬಹುದು. ಇದಲ್ಲದೇ ಸಂದೇಹವಿರುವವರು ತಮ್ಮ ಫಲಾನುಭವಿಗಳ ಸ್ಥಿತಿಯನ್ನು ಪರಿಶೀಲಿಸಬಹುದು. ಇದರೊಂದಿಗೆ ನೀವು ಫಲಾನುಭವಿಯೇ ಅಥವಾ ಇಲ್ಲವೇ ಎಂಬುದನ್ನು ದೃಢಪಡಿಸಬೇಕು.

ಇದನ್ನೂ ಓದಿ-Digital currency: ಇಂದಿನಿಂದಲೇ ಭಾರತದ ಮೊದಲ ಡಿಜಿಟಲ್ ರೂಪಾಯಿ ಆರಂಭ

ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ
>> ಮೊದಲು ನೀವು pmkisan.gov.in ಪೋರ್ಟಲ್‌ಗೆ ಹೋಗಿ.
>> ಬಳಿಕ ಅಲ್ಲಿ ಫಾರ್ಮರ್ ಕಾರ್ನರ್ ವಿಭಾಗಕ್ಕೆ ಹೋಗುವ ಮೂಲಕ, ಫಲಾನುಭವಿ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
>> ಹೊಸ ಪುಟ ತೆರೆದಾಗ, ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ನೋಂದಣಿ ಸಂಖ್ಯೆಯನ್ನು ನಮೂದಿಸಿ.
>> ಈಗ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ಭರ್ತಿ ಮಾಡಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಮತ್ತು ಫಲಾನುಭವಿ ಸ್ಥಿತಿಯನ್ನು ಪರಿಶೀಲಿಸಿ.

ಇದನ್ನೂ ಓದಿ-GPF New Rule: ಸರ್ಕಾರಿ ನೌಕರರಿಗೊಂದು ಮಹತ್ವದ ಸುದ್ದಿ, ತಪ್ಪದೆ ಓದಿ

ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಮತ್ತು ಅವರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರದ ಮೋದಿ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಯೋಜನೆಯಡಿ ದೇಶಾದ್ಯಂತ ಸುಮಾರು 12 ಕೋಟಿ ರೈತರಿಗೆ ಸರ್ಕಾರದಿಂದ ಪ್ರತಿ ವರ್ಷ 6 ಸಾವಿರ ರೂ. ಹಣ ವರ್ಗಾಯಿಸಲಾಗುತ್ತದೆ. ಈ ಹಣವನ್ನು ರೈತರ ಖಾತೆಗೆ ರೂ.2000ರ ಮೂರು ಕಂತುಗಳಲ್ಲಿ ವರ್ಗಾಯಿಸಲಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News