PMKFPO Yojana: ಕೋಟ್ಯಾಂತರ ರೈತ ಬಾಂಧವರಿಗೆ ಬಹುದೊಡ್ಡ ಉಡುಗೊರೆ ನೀಡಿದ PM ಮೋದಿ! ಖಾತೆ ಸೇರಲಿವೆ 15 ಲಕ್ಷ ರೂ.

PM Kisan FPO Yojana: ದೇಶದ ಕೋಟ್ಯಾಂತರ ರೈತ ಬಾಂಧವರಿಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದರ ಅಡಿ ಸರ್ಕಾರ ರೈತರಿಗೆ 15 ಲಕ್ಷ ರೂ ಧನ ಸಹಾಯ ನೀಡಲಿದೆ. ಇದಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Dec 25, 2022, 09:42 PM IST
  • ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಬಂಬಾಟ್ ಸುದ್ದಿಯೊಂದು ಪ್ರಕಟವಾಗಿದೆ.
  • ಸರ್ಕಾರ ಮತ್ತೊಮ್ಮೆ ನಿಮಗೆ ದೊಡ್ಡ ಲಾಭವನ್ನು ನೀಡಲಿದೆ.
  • ಆದರೆ, ಈ ಬಾರಿ ನೀವು ದೊಡ್ಡ ಪಡೆಯಲಿದ್ದೀರಿ
PMKFPO Yojana: ಕೋಟ್ಯಾಂತರ ರೈತ ಬಾಂಧವರಿಗೆ ಬಹುದೊಡ್ಡ ಉಡುಗೊರೆ ನೀಡಿದ PM ಮೋದಿ! ಖಾತೆ ಸೇರಲಿವೆ 15 ಲಕ್ಷ ರೂ. title=
PM Kisan FPO Yojana Latest Update

PM Kisan FPO Yojana 2022: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಬಂಬಾಟ್ ಸುದ್ದಿಯೊಂದು ಪ್ರಕಟವಾಗಿದೆ. ಸರ್ಕಾರ ಮತ್ತೊಮ್ಮೆ ನಿಮಗೆ ದೊಡ್ಡ ಲಾಭವನ್ನು ನೀಡಲಿದೆ. ಆದರೆ, ಈ ಬಾರಿ ನೀವು ದೊಡ್ಡ ಪಡೆಯಲಿದ್ದೀರಿ ಕೇಂದ್ರದ ಮೋದಿ ಸರ್ಕಾರ ರೈತರ ಆದಾಯ ಹೆಚ್ಚಿಸಲು ಈ ಬಾರಿ ದೊಡ್ಡ ಹೆಜ್ಜೆ ಇಟ್ಟಿದೆ. ವಾಸ್ತವದಲ್ಲಿ, ಈ ಹಿಂದೆ ಕಿಸಾನ್ ಯೋಜನೆಯಡಿ 6,000 ರೂ.ಗಳನ್ನು ನೀಡುತ್ತಿದ್ದ ಸರ್ಕಾರವು ಈಗ ಹೊಸ ಕೃಷಿ ಉದ್ಯಮವನ್ನು ಪ್ರಾರಂಭಿಸಲು ರೈತರಿಗೆ 15 ಲಕ್ಷ ರೂ.ಗಳ ವರೆಗೆ ಧನಸಹಾಯ ಒದಗಿಸಲಿದೆ.

ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಇಲ್ಲಿದೆ
>> ಇದಕ್ಕಾಗಿ ನೀವು ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
>> ಅಲ್ಲಿ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಇದರ ನಂತರ 'ನೋಂದಣಿ' ಆಯ್ಕೆಗೆ ಹೋಗಿ.
>> ನೋಂದಣಿ ಫಾರ್ಮ್ ನಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ.
>> ಈಗ ನಿಮ್ಮ ಖಾತೆಯ ಪಾಸ್‌ಬುಕ್ ಅಥವಾ ರದ್ದುಪಡಿಸಿದ ಚೆಕ್ ಮತ್ತು ಐಡಿ ಪ್ರೂಫ್ ಅನ್ನು ಸ್ಕ್ಯಾನ್ ಮಾಡಿ ಮತ್ತು ಅದನ್ನು ಅಪ್‌ಲೋಡ್ ಮಾಡಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ಕಿಸಿ.

ಇದನ್ನೂ ಓದಿ-Online Banking: ನೀವೂ ಕೂಡ ಸ್ಟೇಟ್ ಬ್ಯಾಂಕಿನ ಈ ಸೇವೆ ಬಳಸುತ್ತೀರಾ? ತಕ್ಷಣ ಎಚ್ಚೆತ್ತುಕೊಳ್ಳಿ!

ಲಾಗಿನ್ ಮಾಡುವ ವಿಧಾನ ಇಲ್ಲಿದೆ
>> ರಾಷ್ಟ್ರೀಯ ಕೃಷಿ ಮಾರುಕಟ್ಟೆಯ ಅಧಿಕೃತ ವೆಬ್‌ಸೈಟ್‌ನಲ್ಲಿ FPO ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಈಗ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
>> ಈಗ ಲಾಗಿನ್ ಫಾರ್ಮ್ ತೆರೆಯುತ್ತದೆ. ಅದರಲ್ಲಿ ಬಳಕೆದಾರ ಹೆಸರು ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
>> ಈ ರೀತಿ ನೀವು ಲಾಗಿನ್ ಆಗಬಹುದು 

ಇದನ್ನೂ ಓದಿ-Nitin Gadkari: ವಾಹನ ಪ್ರಿಯರಿಗೆ ಬಂಬಾಟ್ ಮಾಹಿತಿ ನೀಡಿದ ಕೇಂದ್ರ ಹೆದ್ದಾರಿ ಸಚಿವ ನಿತೀನ್ ಗಡ್ಕರಿ

ರೈತರಿಗೆ ಈಗ ಹೆಚ್ಚಿನ ಲಾಭ ಸಿಗಲಿದೆ
>> ಪಿಎಂ ಕಿಸಾನ್ ಎಫ್‌ಪಿಒ ಯೋಜನೆಯಡಿ, ರೈತರಿಗೆ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ.
>> ಇದರಿಂದ ರೈತ ಬಾಂಧವರು ಸುಲಭವಾಗಿ ತಮ್ಮ ಹೊಸ ಉದ್ಯಮ ಆರಂಭಿಸಲು ಅವಕಾಶ ಸಿಗಲಿದೆ.
>> ಈ ಯೋಜನೆಯಡಿ ಸರ್ಕಾರ ರೈತ ಉತ್ಪಾದಕ ಸಂಸ್ಥೆಗೆ 15 ಲಕ್ಷ ರೂ.ಧನಸಹಾಯ ಒದಗಿಸುತ್ತದೆ.
>> ಇದರ ಲಾಭ ಪಡೆಯಲು 11 ರೈತರು ಸೇರಿ ಸಂಸ್ಥೆ ಅಥವಾ ಉದ್ಯಮ ರಚಿಸಬೇಕು.
>> ತನ್ಮೂಲಕ ಕೃಷಿಗೆ ಸಂಬಂಧಿಸಿದ ಉಪಕರಣಗಳು ಅಥವಾ ರಸಗೊಬ್ಬರಗಳು, ಬೀಜಗಳು ಅಥವಾ ಔಷಧಿಗಳನ್ನು ಖರೀದಿಸಲು ಅನುಕೂಲವಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News