PM Kisan: ಪಿಎಂ ಕಿಸಾನ್ 12ನೇ ಕಂತಿಗೂ ಮುನ್ನ ಸರ್ಕಾರದಿಂದ ಸಿಹಿಸುದ್ದಿ, 8 ಸಾವಿರ ಲಾಭ!

ರಾಜ್ಯದಲ್ಲಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಲು 62 ಜಿಲ್ಲೆಗಳಲ್ಲಿ 2,100 ಹೊಸ ರಾಜ್ಯ ಕೊಳವೆ ಬಾವಿಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಯುಪಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.

Written by - Puttaraj K Alur | Last Updated : Aug 31, 2022, 04:01 PM IST
  • ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯ 12ನೇ ಕಂತಿಗೂ ಮುನ್ನವೇ ಸರ್ಕಾರದಿಂದ ಮಹತ್ವದ ನಿರ್ಧಾರ
  • ರಾಜ್ಯದಲ್ಲಿ ನೀರಾವರಿ ಸಾಮರ್ಥ್ಯ ಹೆಚ್ಚಿಸಲು 62 ಜಿಲ್ಲೆಗಳಲ್ಲಿ 2,100 ಹೊಸ ಕೊಳವೆ ಬಾವಿ ಸ್ಥಾಪನೆ
  • ರೈತರಿಗಾಗಿ ಈ ನಿರ್ಧಾರ ತೆಗೆದುಕೊಂಡ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ
PM Kisan: ಪಿಎಂ ಕಿಸಾನ್ 12ನೇ ಕಂತಿಗೂ ಮುನ್ನ ಸರ್ಕಾರದಿಂದ ಸಿಹಿಸುದ್ದಿ, 8 ಸಾವಿರ ಲಾಭ! title=
‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’

ನವದೆಹಲಿ: ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ಯ 12ನೇ ಕಂತು ಖಾತೆಗೆ ಬರುವ ಮುನ್ನವೇ ಸರ್ಕಾರ ರೈತರಿಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ರೈತರಿಗಾಗಿ ಈ ನಿರ್ಧಾರಗಳನ್ನು ಉತ್ತರಪ್ರದೇಶದ ಯೋಗಿ ಸರ್ಕಾರ ತೆಗೆದುಕೊಂಡಿದೆ. ರಾಜ್ಯದಲ್ಲಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸಲು 62 ಜಿಲ್ಲೆಗಳಲ್ಲಿ 2,100 ಹೊಸ ರಾಜ್ಯ ಕೊಳವೆ ಬಾವಿಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಯುಪಿ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದಲ್ಲದೇ ರೈತರನ್ನು ಗಮನದಲ್ಲಿಟ್ಟುಕೊಂಡು ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

839 ಕೋಟಿ ರೂ. ವೆಚ್ಚವಾಗಲಿದೆ

ಕಡಿಮೆ ಮಳೆಯಾಗುವ ಪ್ರದೇಶಗಳ ರೈತರಿಗೆ ಟೋರಿಯಾ ಬೀಜಗಳನ್ನು ಉಚಿತವಾಗಿ ವಿತರಿಸಲು ಯುಪಿ ಕ್ಯಾಬಿನೆಟ್ ನಿರ್ಧರಿಸಿದೆ. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ಕುರಿತು ಮಾಹಿತಿ ನೀಡಿದ ಕೃಷಿ ಸಚಿವ ಸೂರ್ಯ ಪ್ರತಾಪ್ ಶಾಹಿ, ‘ಸರ್ಕಾರದ ಈ ಯೋಜನೆಗೆ 839 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಈ ಯೋಜನೆಯು ಈ ವರ್ಷ ಪ್ರಾರಂಭವಾಗಲಿದ್ದು, 2023-24ರ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Ganesh Chaturthi: ದೇಶದ ಜನತೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಸೇರಿ ಗಣ್ಯರ ಶುಭಾಶಯ

50 ಹೆಕ್ಟೇರ್ ಭೂಮಿಗೆ ನೀರಾವರಿ

ರಾಜ್ಯದ ಕೃಷಿ ಸಚಿವರು ಕೊಳವೆ ಬಾವಿಯಿಂದ 50 ಹೆಕ್ಟೇರ್ ಭೂಮಿಗೆ ನೀರುಣಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರದ ಈ ಯೋಜನೆಯಿಂದ 1 ಲಕ್ಷದ 5 ಸಾವಿರ ಹೆಕ್ಟೇರ್ ಭೂಮಿಗೆ ನೀರಾವರಿ ಸಾಮರ್ಥ್ಯ ಹೆಚ್ಚಲಿದೆ. ನೀರಾವರಿಯಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಈ ಉಪಕ್ರಮವನ್ನು ಕೈಗೊಂಡಿದೆ. ಮುಂಗಾರು ಮಳೆಯ ದುರ್ಬಲತೆಯನ್ನು ಗಮನದಲ್ಲಿಟ್ಟುಕೊಂಡು 2 ಲಕ್ಷ ಸಾಸಿವೆ ಕಾಳುಗಳ ಮಿನಿ ಕಿಟ್‌ಗಳನ್ನು ಉಚಿತವಾಗಿ ವಿತರಿಸಲು ಸಂಪುಟ ನಿರ್ಧರಿಸಿದೆ ಎಂದು ಸೂರ್ಯ ಪ್ರತಾಪ್ ಶಾಹಿ ಹೇಳಿದ್ದಾರೆ.

ಕೃಷಿ ಸಚಿವರ ಪ್ರಕಾರ, ರಾಜ್ಯದಲ್ಲಿ 4,000 ಕ್ವಿಂಟಾಲ್ ರಾಗಿಬೀಜ ವಿತರಿಸಲಾಗುವುದು. ಈ ಕಾಮಗಾರಿಗೆ 4 ಕೋಟಿ 57 ಲಕ್ಷ 60 ಸಾವಿರ ರೂ. ಬೇಕಾಗುತ್ತದೆ. ಈ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ಇದರಿಂದ ರಾಜ್ಯದಲ್ಲಿ 4 ಲಕ್ಷ ಕ್ವಿಂಟಲ್ ಹೆಚ್ಚುವರಿ ಸಾಸಿವೆ ಉತ್ಪಾದನೆಯಾಗಲಿದ್ದು, ಇದರಿಂದ ಒಬ್ಬ ರೈತನಿಗೆ 8 ಸಾವಿರ ರೂ.ಲಾಭ ದೊರೆಯಲಿದೆ ಎಂದು ಮಾಹಿತಿ ನೀಡಿದರು. ಶೇ.30ರಷ್ಟು ಬೀಜಗಳನ್ನು ರೈತ ಮಹಿಳೆಯರಿಗೆ ವಿತರಿಸಲಾಗುವುದು. ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆದ್ಯತೆ ನೀಡಲಾಗುವುದು ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: Jio-Airtel-Vi-BSNLಗಿಂತಲೂ ಅಗ್ಗ!: 49 ರೂ.ಗೆ 180 ದಿನಗಳ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಸೌಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News