Plastic Ban: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ! ಮೋದಿ ಸರ್ಕಾರದ ಆಕ್ಷನ್ ಪ್ಲಾನ್ ಇಲ್ಲಿದೆ

Single Use Plastic Ban: ಜುಲೈ 1 ರಿಂದ ದೇಶಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎನ್ನಲಾಗಿದೆ. ಇದಕ್ಕಾಗಿ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಯಾವುದೇ ಅಂಗಡಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ತಯಾರಿಸಿದ ವಸ್ತುಗಳು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.  

Written by - Nitin Tabib | Last Updated : Jun 18, 2022, 09:59 PM IST
  • ಜುಲೈ 1 ರಿಂದ ದೇಶಾದ್ಯಂತ ಸಿಂಗಲ್ ಯೂಸ್ ಪ್ಲಾಸ್ಟಿಕ್ ಮೇಲೆ ನಿಷೇಧ
  • ಯಾರಾದರು ಬಳಸಿದರೆ ಅಂತಹವರ ಅಂಗಡಿಯ ಲೈಸನ್ಸ್ ರದ್ದು
  • ನಿಷೇಧಕ್ಕೆ ಒಳಗಾಗುವ ಉತ್ಪನ್ನಗಳ ಪಟ್ಟಿ ಇಲ್ಲಿದೆ
Plastic Ban: ಜುಲೈ 1 ರಿಂದ ದೇಶಾದ್ಯಂತ ಪ್ಲಾಸ್ಟಿಕ್ ಬಳಕೆ ನಿಷೇಧ! ಮೋದಿ ಸರ್ಕಾರದ ಆಕ್ಷನ್ ಪ್ಲಾನ್ ಇಲ್ಲಿದೆ  title=
Single Use Plastic Ban

Single Use Plastic Ban: ದೇಶದಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ವಿರುದ್ಧ ಸರ್ಕಾರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಒಮ್ಮೆ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಕಟ್ಟುನಿಟ್ಟಿನ ನಿಯಮಗಳನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಹೀಗಾಗಿ ಜುಲೈ 1 ರಿಂದ ಯಾರಾದರು ಸಿಂಗಲ್ ಯೂಸ್  ಪ್ಲಾಸ್ಟಿಕ್ ಅನ್ನು ಮಾರಾಟ ಮಾಡಿದರೆ ಅಥವಾ ಬಳಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಪಿಸಿಬಿ ಸ್ಪಷ್ಟವಾಗಿ ಹೇಳಿದೆ.

ಜುಲೈ 1 ರಿಂದ ಸಿಂಗಲ್ ಯೂಸ್ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ
ಇದಕ್ಕಾಗಿ ಸಿಪಿಸಿಬಿ ಒಮ್ಮೆ ಬಳಕೆಯ ಪ್ಲಾಸ್ಟಿಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜುಲೈ 1 ರಿಂದ ಅಬ್ವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎನ್ನಲಾಗಿದೆ. ಈ ಎಲ್ಲಾ ಉತ್ಪನ್ನಗಳಿಗೆ ಪರ್ಯಾಯವಾಗಿ 200 ಕಂಪನಿಗಳು ಬೇರೆ ಉತ್ಪನ್ನಗಳನ್ನು ತಯಾರಿಸುತ್ತಿವೆ ಮತ್ತು ಇದಕ್ಕಾಗಿ ಅವು ತಮ್ಮ ಪರವಾನಗಿಯನ್ನು ನವೀಕರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ-Good News: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಜುಲೈ 1 ರಿಂದ ಈ ಉತ್ಪನ್ನಗಳ ಮೇಲೆ ನಿಷೇಧ
- ಪ್ಲಾಸ್ಟಿಕ್ ಕಡ್ಡಿಯನ್ನೋಳಗೊಂಡ ಇಯರ್ ಬಡ್ಸ್,
- ಪ್ಲಾಸ್ಟಿಕ್ ಸ್ಟಿಕ್ ಗಳಿಂದ ತಯಾರಿಸಲಾದ ಆಕಾಶ ಬುಟ್ಟಿಗಳು
- ಪ್ಲಾಸ್ಟಿಕ್ ಧ್ವಜಗಳು
- ಕ್ಯಾಂಡಿ ಸ್ಟಿಕ್
- ಐಸ್ ಕ್ರೀಮ್ ಸ್ಟಿಕ್
- ಥರ್ಮಾಕೋಲ್
- ಪ್ಲಾಸ್ಟಿಕ್ ಫಲಕಗಳು
- ಪ್ಲಾಸ್ಟಿಕ್ ಕಪ್
- ಪ್ಲಾಸ್ಟಿಕ್ ಪ್ಯಾಕಿಂಗ್ ವಸ್ತು
- ಪ್ಲಾಸ್ಟಿಕ್‌ನಿಂದ ಮಾಡಿದ ಆಮಂತ್ರಣ ಪತ್ರಗಳು
- ಸಿಗರೇಟ್ ಪ್ಯಾಕೆಟ್‌ಗಳು
- ಪ್ಲಾಸ್ಟರ್ ಮತ್ತು PVC ಬ್ಯಾನರ್‌ಗಳು (100 ಮೈಕ್ರಾನ್‌ಗಳಿಗಿಂತ ಕಡಿಮೆ)

ಇದನ್ನೂ ಓದಿ-PM Kisan Yojana: 11ನೇ ಕಂತಿನ ಬಳಿಕ ಪಿಎಂ ಕಿಸಾನ್ ಯೋಜನೆಯ ಲಾಭಾರ್ಥಿಗಳಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ

ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು
ಸಿಪಿಸಿಬಿ ಅಂಗೀಕರಿಸಿದ ಆದೇಶದ ಪ್ರಕಾರ, ಯಾವುದೇ ಅಂಗಡಿಯಲ್ಲಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಸಿದರೆ, ಅಂತಹ ಅಂಗಡಿಗಳ ಟ್ರೇಡ್ ಲೈಸನ್ಸ್ ಅನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ. ಮತ್ತೆ ಪರವಾನಗಿ ಪಡೆಯಲು ಅಂಗಡಿ ಮಾಲೀಕರು ದಂಡ ಪಾವತಿಸುವುದರ ಜೊತೆಗೆ ಲೈಸನ್ಸ್ ಗಾಗಿ ಮರು ಅರ್ಜಿಯನ್ನು ಸಲ್ಲಿಸಬೇಕು ಎನ್ನಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News