Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ

ಪಂಚ ರಾಜ್ಯಗಳ ಚುನಾವಣೆ ಮುಕ್ತಾಯದ ಬಳಿಕ ಇದುವರೆಗೆ ತೈಲದರದಲ್ಲಿ ಲೀಟರ್‌ಗೆ 8 ರೂ.ಗಳಷ್ಟು ಹೆಚ್ಚಿಸಲಾಗಿದೆ.

Written by - Puttaraj K Alur | Last Updated : Apr 3, 2022, 07:14 AM IST
  • ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮತ್ತೆ ಏರಿಕೆ
  • ಕಳೆದ 13 ದಿನಗಳಲ್ಲಿ 11 ಬಾರಿ ಏರಿಕೆಯಾದ ತೈಲದರ
  • ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರು
Petrol-diesel price: ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ, 13 ದಿನಗಳಲ್ಲಿ 11 ಬಾರಿ ಏರಿಕೆ title=
ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ

ನವದೆಹಲಿ: ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ದೇಶದ ಜನತೆಗೆ ಪ್ರತಿದಿನ ತೈಲಬೆಲೆ ಏರಿಕೆ(Fuel Price Hike) ಬಿಸಿ ತಟ್ಟುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಇಂದು ಪ್ರತಿ ಲೀಟರ್‌ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ಕಳೆದ 13 ದಿನಗಳಲ್ಲಿ 11 ಬಾರಿ ತೈಲ ಬೆಲೆ ಏರಿಕೆ ಮಾಡಲಾಗಿದೆ.

ಪ್ರತಿದಿನವೂ ಪೈಸೆಗಳ ಲೆಕ್ಕದಲ್ಲಿ ತೈಲಬೆಲೆ(Fuel Prices)ಯನ್ನು ಹೆಚ್ಚಿಸಲಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದೆ. ಪಂಚ ರಾಜ್ಯಗಳ ಚುನಾವಣೆ ಮುಕ್ತಾಯದ ಬಳಿಕ ಇದುವರೆಗೆ ತೈಲದರದಲ್ಲಿ ಲೀಟರ್‌ಗೆ 8 ರೂ.ಗಳಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ: PNG: ಈಗ ಅಡುಗೆ ಕೋಣೆ ತಲುಪುವ ಪಿಎನ್‌ಜಿ ಕೂಡ ದುಬಾರಿ; ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ

ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‍(Petrol Price) ಅತಿಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ 118.41 ರೂ. ಆದರೆ, ಡೀಸೆಲ್(Diesel Price) ಲೀಟರ್‌ಗೆ 102 ರೂ. ದರದಲ್ಲಿ ಮಾರಾಟವಾಗುತ್ತಿದೆ. ಒಂದು ಕಡೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ದುಬಾರಿಯಾಗಿದ್ದರೆ, ಇತ್ತ ದಿನದಿಂದ ದಿನಕ್ಕೆ ತೈಲಬೆಲೆಯಲ್ಲಿ ಏರಿಕೆಯಾಗುತ್ತಿರುವುದು ದೇಶದ ಜನರಿಗೆ ದೊಡ್ಡ ಹೊರೆಯಾಗುತ್ತಿದೆ. ಬೆಲೆ ಏರಿಕೆ(Price Hike)ಯ ಬಿಸಿಯಿಂದ ಸಾರಿಗೆ ವೆಚ್ಚ, ಹೋಟೆಲ್ ತಿಂಡಿ ದರ ಸೇರಿದಂತೆ ಪ್ರತಿಯೊಂದರ ಮೇಲೂ ನೇರ ಪರಿಣಾಮ ಬೀರುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರ

ದೆಹಲಿ ಪೆಟ್ರೋಲ್ 103.41 ರೂ., ಡೀಸೆಲ್ ಲೀಟರ್‌ಗೆ 94.67 ರೂ.

ಮುಂಬೈ ಪೆಟ್ರೋಲ್ 118.41 ರೂ., ಡೀಸೆಲ್ ಲೀಟರ್‌ಗೆ 102  ರೂ.

ಚೆನ್ನೈ ಪೆಟ್ರೋಲ್ 108.96 ರೂ., ಡೀಸೆಲ್ ಲೀಟರ್‌ಗೆ 99.04 ರೂ.

ಕೋಲ್ಕತ್ತಾ ಪೆಟ್ರೋಲ್ 113.03 ರೂ., ಡೀಸೆಲ್ 97.82 ರೂ.

ಬೆಂಗಳೂರು ಪೆಟ್ರೋಲ್ 108.99 ರೂ., ಡೀಸೆಲ್ 92.83 ರೂ.

ಇದನ್ನೂ ಓದಿ: Royal Enfield Electric: ಶೀಘ್ರದಲ್ಲಿಯೇ ರಾಯಲ್ ಎನ್ಫಿಲ್ದ್ ನಿಂದ Royal Enfield ಇಲೆಕ್ಟ್ರಿಕ್ ಬಿಡುಗಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News