ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾಮಾನ್ಯ ಜನರ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಬೆಲೆ ಏರಿಕೆಯಿಂದ ಎಲ್ಲರೂ ತೊಂದರೆಗೊಳಗಾಗಿದ್ದಾರೆ. ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 100 ರೂ.ಗಿಂತ ಹೆಚ್ಚಾಗಿದೆ.
ತೈಲ ಮಾರುಕಟ್ಟೆ ಕಂಪನಿಗಳು ಸತತ ಆರನೇ ದಿನವಾದ ಇಂದು (ಭಾನುವಾರ) ಅಂದರೆ ಅಕ್ಟೋಬರ್ 10 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel Prices)ಯನ್ನು ಹೆಚ್ಚಿಸಿವೆ. ಅಲ್ಲದೆ, ಡೀಸೆಲ್ ಬೆಲೆ 33 ಪೈಸೆಗಳಿಂದ 35 ಪೈಸೆಗಳಿಗೆ ಏರಿಕೆಯಾಗಿದೆ, ಪೆಟ್ರೋಲ್ ಬೆಲೆ 26 ರಿಂದ 30 ಪೈಸೆಗಳಷ್ಟು ಹೆಚ್ಚಾಗಿದೆ. ಮುಂಬೈನಲ್ಲಿ ಮೊದಲ ಬಾರಿಗೆ ಡೀಸೆಲ್ ಬೆಲೆ 100 ರ ಗಡಿ ದಾಟಿದೆ.
ಇದನ್ನೂ ಓದಿ : Arecanut Price: ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ಧಾರಣೆ ತಿಳಿಯಿರಿ
ದೆಹಲಿಯಲ್ಲಿ ಪೆಟ್ರೋಲ್ ಬೆಲೆ 104.14 ರೂ.ಗಳಾಗಿದ್ದರೆ ಡೀಸೆಲ್ ಬೆಲೆ(Diesel Prices) ಪ್ರತಿ ಲೀಟರ್ ಗೆ 92.82 ರೂ. ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 110.12 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 100.66 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 104.80 ರೂಪಾಯಿಗಳು ಮತ್ತು ಡೀಸೆಲ್ ಬೆಲೆ 95.93 ರೂಪಾಯಿಗಳು. ಅದೇ ಸಮಯದಲ್ಲಿ, ಚೆನ್ನೈನಲ್ಲಿ ಪೆಟ್ರೋಲ್ ಲೀಟರ್‌ಗೆ 101.53 ರೂ. ಮತ್ತು ಡೀಸೆಲ್ ಲೀಟರ್‌ಗೆ 97.26 ರೂ. ಆಗಿದೆ.
ದೇಶದ ಪ್ರಮುಖ ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ದೆಹಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 92.82 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 104.14 ರೂ.
ಮುಂಬೈ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 100.66 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 110.12 ರೂ.
ಕೋಲ್ಕತಾ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 95.93 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 104.80 ರೂ.
ಚೆನ್ನೈ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 97.26 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 101.53 ರೂ.
ಪೆಟ್ರೋಲ್ ಬೆಲೆ ಈ ರಾಜ್ಯಗಳಲ್ಲಿ 100 ರ ಗಡಿಯಲ್ಲಿ
ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ(Karnataka), ಒಡಿಶಾ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಅತ್ಯಧಿಕವಾಗಿದೆ.
ಇದನ್ನೂ ಓದಿ : MG ZS: ಈ ಎಲೆಕ್ಟ್ರಿಕ್ ಕಾರು ಒಂದೇ ಚಾರ್ಜ್ ನಲ್ಲಿ 440 ಕಿಮೀ ಓಡುತ್ತದೆ
ನಿಮ್ಮ ನಗರದಲ್ಲಿ ಬೆಲೆ ಎಷ್ಟು?
ನೀವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು SMS ಮೂಲಕವೂ ತಿಳಿದುಕೊಳ್ಳಬಹುದು. ಇಂಡಿಯನ್ ಆಯಿಲ್(Indian Oil) ವೆಬ್‌ಸೈಟ್ ಪ್ರಕಾರ, ನೀವು ಆರ್‌ಎಸ್‌ಪಿ ಮತ್ತು ನಿಮ್ಮ ನಗರ ಕೋಡ್ ಅನ್ನು ಬರೆದು 9224992249 ಸಂಖ್ಯೆಗೆ ಕಳುಹಿಸಬೇಕು. ಪ್ರತಿ ನಗರದ ಕೋಡ್ ವಿಭಿನ್ನವಾಗಿದೆ, ಅದನ್ನು ನೀವು ಐಒಸಿಎಲ್ ವೆಬ್‌ಸೈಟ್‌ನಿಂದ ಪಡೆಯುತ್ತೀರಿ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಬದಲಾಗುತ್ತವೆ. ಹೊಸ ದರಗಳು ಬೆಳಿಗ್ಗೆ 6 ಗಂಟೆಯಿಂದ ಅನ್ವಯವಾಗುತ್ತವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಇತರ ವಸ್ತುಗಳನ್ನು ಸೇರಿಸಿದ ನಂತರ, ಅದರ ಬೆಲೆ ಬಹುತೇಕ ದ್ವಿಗುಣಗೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ