Fuel Prices: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Fuel Prices: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಸತತ ಎರಡು ದಿನಗಳಿಂದ 80 ಪೈಸೆ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಶುಕ್ರವಾರ ಮತ್ತೆ 80 ಪೈಸೆ ಏರಿಕೆಯಾಗಿದೆ. ಈ ಹೊಸ ಬೆಲೆಗಳು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.

Written by - Yashaswini V | Last Updated : Mar 25, 2022, 07:56 AM IST
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ
  • ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಹೊಸ ದರಗಳು ಜಾರಿಗೆ
  • 4 ದಿನಗಳಲ್ಲಿ ಒಟ್ಟು 2.40 ರೂ. ಏರಿಕೆ ಕಂಡ ತೈಲ ದರ
Fuel Prices: ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ title=
Petrol Diesel Prices

Fuel Prices:  ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇದೆ. ಸತತ ಎರಡು ದಿನಗಳಿಂದ 80 ಪೈಸೆ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಅಂದರೆ ಶುಕ್ರವಾರ ಮತ್ತೆ 80 ಪೈಸೆ ಏರಿಕೆಯಾಗಿದೆ. ಈ ಹೊಸ ಬೆಲೆಗಳು ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬಂದಿವೆ.

ಸಾರ್ವಜನಿಕ ವಲಯದ ಪೆಟ್ರೋಲಿಯಂ ಮಾರುಕಟ್ಟೆ ಕಂಪನಿಗಳು ಹೊರಡಿಸಿರುವ ಬೆಲೆ ಅಧಿಸೂಚನೆಯ ಪ್ರಕಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್‌ಗೆ 97.01 ರೂ.ನಿಂದ 97.81 ರೂ.ಗೆ ಏರಿಕೆಯಾಗಿದೆ. ಅದೇ ಸಮಯದಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 88.27 ರಿಂದ 89.07 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ- Weird Experiment ! ಬೈಕ್ ನಲ್ಲಿ ಪೆಟ್ರೋಲ್ ಬಳಸುವ ಬದಲು ಮದ್ಯ ಹಾಕಿದರೆ ಏನಾಗುತ್ತದೆ?

ನಾಲ್ಕು ದಿನಗಳಲ್ಲಿ ಇಷ್ಟು ಹೆಚ್ಚಳಕಂಡ ಪೆಟ್ರೋಲ್-ಡೀಸೆಲ್ :
ಕಳೆದ ಎರಡು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ (Diesel Price) 1.60 ರೂಪಾಯಿ ಏರಿಕೆಯಾಗಿತ್ತು. ಇದೀಗ ಮೂರನೇ ಬಾರಿಗೆ 80 ಪೈಸೆ ಏರಿಕೆಯಾದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ 2.40 ರೂ. ಗಳಷ್ಟು ದುಬಾರಿಯಾಗಿದೆ. 

ಇದನ್ನೂ ಓದಿ- LPG Cylinder Price Hike: ಪೆಟ್ರೋಲ್-ಡೀಸೆಲ್ ನಂತರ ಎಲ್‌ಪಿಜಿ ಬೆಲೆಯಲ್ಲಿ ಭಾರೀ ಏರಿಕೆ, ಹೊಸ ಬೆಲೆ ಇಂದಿನಿಂದ ಅನ್ವಯ!

ಗಮನಿಸಬೇಕಾದ ಅಂಶವೆಂದರೆ ಮಂಗಳವಾರ (ಮಾರ್ಚ್ 22) ಮತ್ತು ಬುಧವಾರ (ಮಾರ್ಚ್ 23) ರಂದು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 80 ಪೈಸೆ ಏರಿಕೆಯಾಗಿತ್ತು. ಆದರೆ, ಗುರುವಾರ (ಮಾರ್ಚ್ 24) ತೈಲ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News