Ayodhya: ನೀವು ಅಯೋಧ್ಯೆಗೆ ತೆರಳಲು ಯೋಚಿಸುತ್ತಿದ್ದರೆ ಪೇಟಿಎಂ (Paytm), ಅಯೋಧ್ಯೆಯ ರಾಮಮಂದಿರಕ್ಕೆ ಹೋಗುವ ಭಕ್ತರಿಗೆ ಭರ್ಜರಿ ಆಫರ್ ಪ್ರಕಟಿಸಿದೆ. ಈಗ ನೀವು ಅಯೋಧ್ಯೆಗೆ ತೆರಳಲು ವಿಮಾನ ಅಥವಾ ಬಸ್ ಟಿಕೆಟ್ ಅನ್ನು ಬುಕ್ ಮಾಡಿ ಮತ್ತು ನಿಮ್ಮ ಸಂಪೂರ್ಣ ಹಣವನ್ನು ಮರಳಿ ಪಡೆಯಬಹುದು.
ಹೌದು, ಪೇಟಿಎಂ (Paytm)ನ ಈ ವಿಶೇಷ ಕೊಡುಗೆಯಲ್ಲಿ, ನೀವು ಬಸ್ ಮತ್ತು ಫ್ಲೈಟ್ ಬುಕಿಂಗ್ನಲ್ಲಿ 100% ವರೆಗೆ ಕ್ಯಾಶ್ಬ್ಯಾಕ್ ಪಡೆಯಬಹುದು. ಅಯೋಧ್ಯೆಗೆ ಭೇಟಿ ನೀಡುವ ಭಕ್ತರು ಪೇಟಿಎಂ ಅಪ್ಲಿಕೇಶನ್ನಲ್ಲಿ ಬಸ್ ಬುಕ್ಕಿಂಗ್ಗಾಗಿ 'BUSAYODYA' ಮತ್ತು ಫ್ಲೈಟ್ ಬುಕಿಂಗ್ಗಾಗಿ 'FLYAYODYA' ಎಂಬ ಪ್ರೋಮೋ ಕೋಡ್ ಅನ್ನು ಬಳಸಿಕೊಂಡು ಈ ಕೊಡುಗೆಯನ್ನು ಪಡೆಯಬಹುದಾಗಿದೆ.
ಪೇಟಿಎಂ (Paytm)ನಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, ಪ್ರತಿ ಹತ್ತನೇ ಪ್ರಯಾಣಿಕರು ಈ ಅದ್ಭುತ ಕ್ಯಾಶ್ಬ್ಯಾಕ್ ಆಫರ್ಗೆ ಅರ್ಹರಾಗುತ್ತಾರೆ. ಬಸ್ ಪ್ರಯಾಣದಲ್ಲಿ ಪ್ರಯಾಣಿಕರಿಗೆ 1,000 ರೂ.ವರೆಗೆ ಕ್ಯಾಶ್ಬ್ಯಾಕ್ ಕೊಡುಗೆ ಲಭ್ಯವಿದೆ. ಇದೇ ವೇಳೆ ಫ್ಲೈಟ್ ಟಿಕೆಟ್ಗಳ ಬುಕ್ಕಿಂಗ್ ಮೇಲೆ 5,000 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯುವ ಅವಕಾಶವಿದೆ.
ಇದನ್ನೂ ಓದಿ- ITR Refund ಸಂಬಂಧಿತ ಈ ಮೆಸೇಜ್ ಬಗ್ಗೆ ಇರಲಿ ಎಚ್ಚರ!
ಟಿಕೆಟ್ ರದ್ದತಿಗೆ ಇಲ್ಲ ಯಾವುದೇ ಶುಲ್ಕ:
ಒಂದೊಮ್ಮೆ ನೀವು ಟಿಕೆಟ್ ಬುಕ್ ಮಾಡಿ ಅನಿವಾರ್ಯ ಕಾರಣಗಳಿಂದಾಗಿ ಅಯೋಧ್ಯೆಗೆ ಪ್ರವಾಸ ರದ್ದುಗೊಳಿಸಲು ಬಯಸಿದರೆ, ಆಗಲೂ ಕೂಡ ಚಿಂತಿಸುವ ಅಗತ್ಯವಿಲ್ಲ. ಪೇಟಿಎಂ 'ಫ್ರೀ ಕ್ಯಾನ್ಸಲೇಷನ್' ಸೌಲಭ್ಯವನ್ನು ಕೂಡ ಒದಗಿಸುತ್ತಿದೆ. ನೀವು ಯಾವುದೇ ಪ್ರಶ್ನೆಗಳಿಲ್ಲದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ 100% ಹಣವನ್ನು ಮರಳಿ ಪಡೆಯಬಹುದು ಎಂದು ಕಂಪನಿ ಹೇಳಿಕೊಂಡಿಎ. ಇದಲ್ಲದೆ, ಪೇಟಿಎಂ ಲೈವ್ ಬಸ್ ಟ್ರ್ಯಾಕಿಂಗ್ ಸೇವೆಯನ್ನು ಸಹ ನೀಡುತ್ತಿದೆ, ಅದರ ಮೂಲಕ ನೀವು ಬುಕ್ ಮಾಡಿದ ಬಸ್ನ ನೈಜ-ಸಮಯದ ಸ್ಥಳವನ್ನು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು.
ಈ ಕುರಿತಂತೆ ಮಾಹಿತಿ ನೀಡಿರುವ ಪೇಟಿಎಂ ವಕ್ತಾರರು, 'ಮೊಬೈಲ್ ಪಾವತಿ ಮತ್ತು ಕ್ಯೂಆರ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕಾರಣ, ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ಈ ವಿಶೇಷ ಕೊಡುಗೆಯನ್ನು ಪರಿಚಯಿಸಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಬಸ್ ಮತ್ತು ಫ್ಲೈಟ್ ಬುಕ್ಕಿಂಗ್ಗಳಲ್ಲಿ 100% ಕ್ಯಾಶ್ಬ್ಯಾಕ್ ಸೇರಿದಂತೆ ನಮ್ಮ ವಿಶೇಷ ಕೊಡುಗೆಗಳ ಮೂಲಕ, ಅಯೋಧ್ಯೆಗೆ ಸುಗಮ ಪ್ರಯಾಣವನ್ನು ಹೊಂದಲು ಬಳಕೆದಾರರಿಗೆ ಸಹಾಯ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ' ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Paytm ಸಹಾಯದಿಂದ ರಾಮಮಂದಿರ ಟ್ರಸ್ಟ್ಗೆ ದೇಣಿಗೆ!
ಕಳೆದ ವಾರ, ರಾಮ ಮಂದಿರದ ಪ್ರತಿಷ್ಠಾಪನೆಯ ದಿನ Paytm ತಮ್ಮ ಅಪ್ಲಿಕೇಶನ್ನಿಂದ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೆ ದೇಣಿಗೆ ನೀಡಬಹುದು ಎಂಬ ಒಳ್ಳೆಯ ಸುದ್ದಿಯನ್ನು ಪ್ರಕಟಿಸಿತು. ಇದರ ಮೂಲಕ ಭಕ್ತರು ಈಗ ಅಯೋಧ್ಯೆ ಡಿಜಿಟಲ್ ರೂಪದಲ್ಲಿ ದೇಣಿಗೆ ನೀಡಬಹುದು. ಭಾರತದಾದ್ಯಂತ ಇರುವ ಭಕ್ತರು Paytm ಅಪ್ಲಿಕೇಶನ್ನ 'ಭಕ್ತಿ' ವಿಭಾಗದಿಂದ ದೇಣಿಗೆ ನೀಡಬಹುದು.
Paytm ಅಪ್ಲಿಕೇಶನ್ ಮೂಲಕ ರಾಮ ಮಂದಿರ ಟ್ರಸ್ಟ್ಗೆ ದೇಣಿಗೆ ನೀಡಲು ಇಲ್ಲಿದೆ ಸುಲಭ ವಿಧಾನ:
>> ಇದಕ್ಕಾಗಿ ಮೊದಲಿಗೆ Paytm ಅಪ್ಲಿಕೇಶನ್ ತೆರೆಯಿರಿ
>> ಇದರಲ್ಲಿ 'BBPS ಮೂಲಕ ಬಿಲ್ ಪಾವತಿ' ಎಂಬ ಆಯ್ಕೆಗೆ ಹೋಗಿ.
>> ಅಲ್ಲಿಂದ 'ಇತರ ಸೇವೆಗಳು' ವಿಭಾಗದಲ್ಲಿ 'ಭಕ್ತಿ' ಎಂಬ ಆಯ್ಕೆಯನ್ನು ಹುಡುಕಿ ಮತ್ತು ಆಯ್ಕೆಮಾಡಿ.
>> ನಂತರ ಕಾಣಿಸಿಕೊಳ್ಳುವ ಆಯ್ಕೆಗಳಲ್ಲಿ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ' ಎಂಬ ಆಯ್ಕೆಯನ್ನು ಆರಿಸಿ.
>> ಮುಂದುವರೆಯಲು ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಿ ಮತ್ತು 'ಮುಂದುವರಿಯಿರಿ' ಕ್ಲಿಕ್ ಮಾಡಿ.
>> ನೀವು ದೇಣಿಗೆ ನೀಡಲು ಬಯಸುವ ಮೊತ್ತವನ್ನು ನಮೂದಿಸಿ ಮತ್ತು 'ಮುಂದೆ' ಕ್ಲಿಕ್ ಮಾಡಿ.
>> ಈಗ ನಿಮ್ಮ ಆದ್ಯತೆಯ ಪಾವತಿ ವಿಧಾನವನ್ನು ಬಳಸಿಕೊಂಡು 'ಪಾವತಿಯನ್ನು ಮುಂದುವರಿಸಿ' ಕ್ಲಿಕ್ ಮಾಡುವ ಮೂಲಕ ದೇಣಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
>> ಈ ರೀತಿಯಾಗಿ ನೀವು ಸುಲಭವಾಗಿ ರಾಮಮಂದಿರಕ್ಕೆ ನಿಮ್ಮ ಕೈಲಾದಷ್ಟು ದೇಣಿಗೆಯನ್ನು ನೀಡಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.