PAN-Aadhaar Link: ಮಾರ್ಚ್ 31, 2023ರವರೆಗೆ ನೀವು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡದೇ ಇದ್ದರೆ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. ವಾಸ್ತವವಾಗಿ, ಒಟ್ಟು 61 ಕೋಟಿ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಪೈಕಿ ಇದುವರೆಗೆ ಸುಮಾರು 48 ಕೋಟಿ ಯುನಿಕ್ ಐಡೆಂಟಿಫಿಕೇಶನ್ ನಂಬರ್ ಮಾತ್ರ ಆಧಾರ್ಗೆ ಲಿಂಕ್ ಮಾಡಲಾಗಿದೆ. ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದ ಇನ್ನೂ 13 ಕೋಟಿ ಜನರಿದ್ದು, ಹತ್ತು ದಿನಗಳಲ್ಲಿ ನೀವು ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಗಮನಾರ್ಹವಾಗಿ, ದೇಶದ ನಾಗರೀಕರಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಎರಡೂ ಕೂಡ ಪ್ರಮುಖ ದಾಖಲೆಗಳಾಗಿವೆ. ಹಾಗಾಗಿಯೇ ಸರ್ಕಾರ ಪ್ಯಾನ್ನೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದಕ್ಕಾಗಿ, 31 ಮಾರ್ಚ್ 2023 ರ ಗಡುವನ್ನು ನಿಗದಿಪಡಿಸಲಾಗಿದೆ. ಈ ಸಮಯದಲ್ಲಿ, ಪ್ಯಾನ್ನೊಂದಿಗೆ ಆಧಾರ್ ಲಿಂಕ್ ಮಾಡಲು 1,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಮಾತ್ರವಲ್ಲ, ನಿಗದಿತ ಸಮಯಾದೊಳಗೆ ಆಧಾರ್ಗೆ ಲಿಂಕ್ ಮಾಡದ ವೈಯಕ್ತಿಕ ಪ್ಯಾನ್ಗಳನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ- Gold Hallmarking Rules Change: 1 ಏಪ್ರಿಲ್ 2023 ರಿಂದ ಬದಲಾಗಲಿದೆ ಚಿನ್ನದ ಹಾಲ್ಮಾರ್ಕಿಂಗ್ಗೆ ಸಂಬಂಧಿಸಿದ ಈ ನಿಯಮ
ವಾಸ್ತವವಾಗಿ, ಪ್ಯಾನ್-ಆಧಾರ್ ಲಿಂಕ್ ಮಾಡಲು ಸರ್ಕಾರ ಹಲವು ಬಾರಿ ದಿನಾಂಕವನ್ನು ವಿಸ್ತರಿಸಿದೆ. ಆದರೆ, ಇದೀಗ ಪ್ಯಾನ್-ಆಧಾರ್ ಲಿಂಕ್ ಮಾಡಲು ಮಾರ್ಚ್ 31, 2023ರವರೆಗೆ ಅಂತಿಮ ದಿನಾಂಕವನ್ನು ನಿಗದಿಗೊಳಿಸಲಾಗಿದ್ದು ಅಷ್ಟರೊಳಗೆ ನೀವು ಈ ಕೆಲಸವನ್ನು ಪೂರ್ಣಗೊಳಿಸದಿದ್ದರೆ ವ್ಯಾಪಾರ ಮತ್ತು ತೆರಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
ನಿಗದಿತ ದಿನಾಂಕದೊಳಗೆ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ಮಾರ್ಚ್ ನಂತರ ಅವರ ಪ್ಯಾನ್ ಮಾನ್ಯವಾಗಿರುವುದಿಲ್ಲವಾದ್ದರಿಂದ ಪ್ಯಾನ್ ಹೋಲ್ಡರ್ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಮಾಹಿತಿ ನೀಡಿದೆ.
ಇದನ್ನೂ ಓದಿ- LIC ಈ ಯೋಜನೆಯಲ್ಲಿ ₹166 ಹೂಡಿಕೆ ಮಾಡಿ, 50 ಲಕ್ಷ ಲಾಭ ಪಡೆಯಿರಿ!
ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡರೆ, ಸಂಬಂಧಪಟ್ಟ ವ್ಯಕ್ತಿಯು ಆದಾಯ ತೆರಿಗೆ ಕಾಯ್ದೆಯಡಿ ಸೂಚಿಸಲಾದ ಎಲ್ಲಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ. ಇದು ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸದಿರುವುದು ಮತ್ತು ಬಾಕಿ ಇರುವ ರಿಟರ್ನ್ಗಳನ್ನು ಪ್ರಕ್ರಿಯೆಗೊಳಿಸದಂತಹ ಸಂದರ್ಭಗಳನ್ನು ಒಳಗೊಂಡಿರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.