ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟ, ಶೀಘ್ರದಲ್ಲೇ ಘೋಷಣೆ ಸಾಧ್ಯತೆ!

New Pension Scheme Update: ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಪಿಂಚಣಿದಾರರು ಇನ್ನೂ ಕಾಯಬೇಕಾಗಲಿದೆ. ಮೂಲಗಳ ಪ್ರಕಾರ, ಎನ್‌ಪಿಎಸ್ ಅನ್ನು ಆಕರ್ಷಕಗೊಳಿಸಲು ಸರ್ಕಾರ ಯಾವುದೇ ಆಸಕ್ತಿ ಹೊಂದಿಲ್ಲ. ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ವರದಿ ಸಿದ್ಧವಾಗಿದೆ.(Business News In Kannada)  

Written by - Nitin Tabib | Last Updated : Dec 5, 2023, 08:00 PM IST
  • ಸಮಿತಿಯು ತನ್ನ ವರದಿಯನ್ನು ಯಾವಾಗ ಸಲ್ಲಿಸುತ್ತದೆ ಎಂದು ಇನ್ನೂ ನಿರ್ಧರಿಸದಿದ್ದರೂ,
  • ಹೊಸ ಪಿಂಚಣಿ ವ್ಯವಸ್ಥೆಯು ಸರ್ಕಾರಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯಾಗದಂತೆ ಸಂಪೂರ್ಣ ಕಾಳಜಿ ವಹಿಸುತ್ತಿದೆ.
  • ಎನ್‌ಪಿಎಸ್‌ನಲ್ಲಿ ಬದಲಾವಣೆ ಮಾಡಲು ಸರ್ಕಾರ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಪ್ರಕಟ, ಶೀಘ್ರದಲ್ಲೇ ಘೋಷಣೆ ಸಾಧ್ಯತೆ! title=

ನವದೆಹಲಿ: ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿ ಹೊರಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಹೊಸ ಪಿಂಚಣಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರವು ಯಾವುದೇ ಆತುರತೆ ಹೊಂದಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ, ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯು ತನ್ನ ವರದಿಯನ್ನು ಬಹುತೇಕ ಸಿದ್ಧಪಡಿಸಿದೆ, ಆದರೆ ಅದನ್ನು ಯಾವಾಗ ಸಲ್ಲಿಸಲಾಗುತ್ತದೆ ಎಂಬುದರ ಬಗ್ಗೆ ಇನ್ನೂ ಸಸ್ಪೆನ್ಸ್ ಮುಂದುವರೆದಿದೆ. ಸರ್ಕಾರದ ಮೇಲೆ ಅನಗತ್ಯ ಆರ್ಥಿಕ ಹೊರೆಯನ್ನು ಹಾಕದೆ, ನಿವೃತ್ತಿಯ ನಂತರ ನೌಕರರು ಪಡೆದ ಕೊನೆಯ ಸಂಬಳದ ಸುಮಾರು 45-50% ನಷ್ಟು ಪಿಂಚಣಿಯನ್ನು ಸಮಿತಿಯು ಶಿಫಾರಸು ಮಾಡಬಹುದು ಎಂದು ನಂಬಲಾಗಿದೆ. (Business News In Kannada)

2004 ರಲ್ಲಿ, ಸರ್ಕಾರವು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಆರಂಭಿಸಿತ್ತು. ಎನ್ಪಿಎಸ್ ಸರ್ಕಾರಿ ಉದ್ಯೋಗಿಗಳಿಗೆ ಹೂಡಿಕೆ ಅನುಮೋದನೆಯನ್ನು ನೀಡುತ್ತದೆ. ಇದರ ಅಡಿಯಲ್ಲಿ, ನೌಕರರು ತಮ್ಮ ವೃತ್ತಿಜೀವನದ ಉದ್ದಕ್ಕೂ ಪಿಂಚಣಿ ಖಾತೆಗೆ ನಿಯಮಿತವಾಗಿ ಕೊಡುಗೆಗಳನ್ನು ನೀಡುವ ಮೂಲಕ ತಮ್ಮ ಹಣವನ್ನು ಹೂಡಿಕೆ ಮಾಡಬಹುದು. ನಿವೃತ್ತಿಯ ನಂತರ, ಪಿಂಚಣಿ ಮೊತ್ತದ ಒಂದು ಭಾಗವನ್ನು ಒಟ್ಟು ಮೊತ್ತದಲ್ಲಿ ಹಿಂಪಡೆಯಲು ಅವಕಾಶವಿದೆ.

ಉಳಿದ ಮೊತ್ತಕ್ಕೆ ನೀವು ವರ್ಷಾಶನ ಯೋಜನೆಯನ್ನು ಖರೀದಿಸಬಹುದು. ವರ್ಷಾಶನವು ಒಂದು ರೀತಿಯ ವಿಮಾ ಉತ್ಪನ್ನವಾಗಿದೆ. ಇದರಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಬೇಕು. ಇದನ್ನು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕವಾಗಿ ಹಿಂಪಡೆಯಬಹುದು. ನಿವೃತ್ತ ನೌಕರನು ಮರಣದವರೆಗೂ ನಿಯಮಿತ ಆದಾಯವನ್ನು ಪಡೆಯುತ್ತಾನೆ. ಇದೇ ವೇಳೆ, ಮರಣದ ಬಳಿಕ, ನಾಮಿನಿಗೆ ಸಂಪೂರ್ಣ ಹಣ ಸಿಗುತ್ತದೆ. 

ಮುಂದೆ ಎನಾಗಲಿದೆ?
ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ನಿರೀಕ್ಷಿಸುತ್ತಿರುವವರ ನಿರೀಕ್ಷೆ ಮತ್ತಷ್ಟು ಸುದೀಘವಾಗುವ ಸಾಧ್ಯತೆ ಇದೇ. ಮೂಲಗಳ ಪ್ರಕಾರ, ಎನ್‌ಪಿಎಸ್ ಅನ್ನು ಆಕರ್ಷಕಗೊಳಿಸಲು ಸರ್ಕಾರ ಯಾವುದೇ ಆತುರತೆಯನ್ನು  ಹೊಂದಿಲ್ಲ. ಆದರೆ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ರಚಿಸಲಾದ ಸಮಿತಿಯ ವರದಿ ಸಿದ್ಧವಾಗಿದೆ.

ಇದನ್ನೂ ಓದಿ-ಜನವರಿ 1, 2024 ರಿಂದ ಮೊಬೈಲ್ ಸಿಮ್ ಗೆ ಸಂಬಂಧಿಸಿದ ಈ ನಿಯಮ ಬದಲಾಯಿಸಿದೆ ಸರ್ಕಾರ, ಇಂದೇ ತಿಳಿದುಕೊಳ್ಳಿ!

ಏನು ಸಲಹೆ! 
ರಿಟೈರ್ಮೆಂಟ್ ಬೇಸಿಕ್ ನ 50% ವರೆಗೆ ಪಿಂಚಣಿಯನ್ನು ಸೂಚಿಸುವ ಸಾಧ್ಯತೆ ಇದೇ. ವಯಬಿಲಿಟಿ ಗ್ಯಾಪ್ ಫಂಡಿಂಗ್ ಮೂಲಕ ಪಿಂಚಣಿ ಖಾತರಿ ಮತ್ತು ವರ್ಷಾಶನದಲ್ಲಿನ ಕೊರತೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸಲಿವೆ. ಹಣದುಬ್ಬರದ ದೃಷ್ಟಿಯಿಂದ ಜೀವನ ವೆಚ್ಚದ ಹೊಂದಾಣಿಕೆ ಇದರಲ್ಲಿ ಇರಲಿದೆ.

ಇದನ್ನೂ ಓದಿ-ವಾಟ್ಸ್ ಅಪ್ ಬಳಕೆದಾರರಿಗೆ ಮತ್ತೊಂದು ಸಂತಸದ ಸುದ್ದಿ, ಶೀಘ್ರದಲ್ಲೇ ಬರಲಿದೆ ಈ ಬಹುಪ್ರಯೋಜನಕಾರಿ ವೈಶಿಷ್ಟ್ಯ!

ವರದಿ ಯಾವಾಗ ಸಲ್ಲಿಕೆ?
ಸಮಿತಿಯು ತನ್ನ ವರದಿಯನ್ನು ಯಾವಾಗ ಸಲ್ಲಿಸುತ್ತದೆ ಎಂದು ಇನ್ನೂ ನಿರ್ಧರಿಸದಿದ್ದರೂ, ಹೊಸ ಪಿಂಚಣಿ ವ್ಯವಸ್ಥೆಯು ಸರ್ಕಾರಗಳ ಮೇಲೆ ಅನಗತ್ಯ ಆರ್ಥಿಕ ಹೊರೆಯಾಗದಂತೆ ಸಂಪೂರ್ಣ ಕಾಳಜಿ ವಹಿಸುತ್ತಿದೆ. ಎನ್‌ಪಿಎಸ್‌ನಲ್ಲಿ ಬದಲಾವಣೆ ಮಾಡಲು ಸರ್ಕಾರ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದೆ  ಎಂದು ತಿಳಿದುಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News