ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು! ಕೆಲಸದ ಸಮಯ, ಪಿಎಫ್ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಬದಲಾವಣೆ

ಹೊಸ ಕಾರ್ಮಿಕ ಸಂಹಿತೆಗಳು ವೇತನ, ಸಾಮಾಜಿಕ ಭದ್ರತೆ (ಪಿಂಚಣಿ, ಗ್ರಾಚ್ಯುಟಿ), ಕಾರ್ಮಿಕ ಕಲ್ಯಾಣ, ಆರೋಗ್ಯ, ಸುರಕ್ಷತೆ, ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದ ಸುಧಾರಣೆಗಳ ಶ್ರೇಣಿಯನ್ನು ನೀಡುತ್ತವೆ.

Written by - Puttaraj K Alur | Last Updated : Jun 11, 2022, 10:05 AM IST
  • ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ
  • ಕೆಲಸದ ಸಮಯ, ಇಪಿಎಫ್ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಗಮನಾರ್ಹ ಬದಲಾವಣೆ ಸಾಧ್ಯತೆ
  • ಉದ್ಯೋಗಿಗಳಿಗೆ 3 ವಾರದ ರಜೆ, ಉದ್ಯೋಗಿಗಳ ಇನ್-ಹ್ಯಾಂಡ್ ಸಂಬಳದಲ್ಲಿ ಕಡಿಮೆಯಾಗಲಿದೆ
ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು! ಕೆಲಸದ ಸಮಯ, ಪಿಎಫ್ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಬದಲಾವಣೆ title=
ಜುಲೈ 1ರಿಂದ ಹೊಸ ಕಾರ್ಮಿಕ ಕಾನೂನು!

ನವದೆಹಲಿ: ಜುಲೈ 1, 2022ರಿಂದ ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇದು ಕಾರ್ಯರೂಪಕ್ಕೆ ಬಂದರೆ ಕಚೇರಿ ಕೆಲಸದ ಸಮಯ, ಉದ್ಯೋಗಿಗಳ ಭವಿಷ್ಯ ನಿಧಿ (EPF) ಕೊಡುಗೆ ಮತ್ತು ಇನ್-ಹ್ಯಾಂಡ್ ಸಂಬಳದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ. ಕಚೇರಿ ಸಮಯ ಮತ್ತು ಪಿಎಫ್ ಕೊಡುಗೆಗಳು ಹೆಚ್ಚಾಗುವ ಸಾಧ್ಯತೆಯಿದ್ದರೂ, ಇನ್-ಹ್ಯಾಂಡ್ ಸಂಬಳವು ಕಡಿಮೆಯಾಗಬಹುದು.

4 ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರವು ಕೆಲಸ ಮಾಡುತ್ತಿದೆ. ಹೊಸ ಕಾರ್ಮಿಕ ಕಾನೂನುಗಳು ದೇಶದಲ್ಲಿ ಹೂಡಿಕೆ  ಹೆಚ್ಚಿಸಲಿದ್ದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತವೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಹೊಸದಾಗಿ ಜಾರಿಗೊಳಿಸಲಾದ ಕಾರ್ಮಿಕ ಸಂಹಿತೆಗಳು ವೇತನ, ಸಾಮಾಜಿಕ ಭದ್ರತೆ (ಪಿಂಚಣಿ, ಗ್ರಾಚ್ಯುಟಿ), ಕಾರ್ಮಿಕ ಕಲ್ಯಾಣ, ಆರೋಗ್ಯ, ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳು (ಮಹಿಳೆಯರನ್ನೂ ಒಳಗೊಂಡಂತೆ) ಸುಧಾರಣೆಗಳ ಶ್ರೇಣಿಯನ್ನು ರೂಪಿಸುತ್ತವೆ.

ಇದನ್ನೂ ಓದಿ: Ration Card: ಗುಡ್ ನ್ಯೂಸ್! ಬದಲಾಗಲಿದೆ ಪಡಿತರ ವಿತರಣೆ ನಿಯಮ!

ಹೊಸ ಕಾರ್ಮಿಕ ಕಾನೂನು ಜಾರಿಯಿಂದಾಗುವ ಬದಲಾವಣೆಗಳು?

1.  ಹೊಸ ಕಾರ್ಮಿಕ ಕಾನೂನುಗಳನ್ನು ಜಾರಿಗೆ ಬಂದರೆ, ಇದು ಕಂಪನಿಗಳಿಗೆ ಕಚೇರಿ ಕೆಲಸದ ಸಮಯವನ್ನು ಗಮನಾರ್ಹವಾಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ಕಚೇರಿ ಕೆಲಸದ ಸಮಯವನ್ನು 8-9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸಬಹುದು. ಈ ನೀತಿಯಿಂದ ಕಂಪನಿ ತಮ್ಮ ಉದ್ಯೋಗಿಗಳಿಗೆ 3 ವಾರದ ರಜೆ ನೀಡುವ ಮೂಲಕ ಪರಿಹಾರ ನೀಡಬೇಕಾಗುತ್ತದೆ. ಒಂದು ವಾರದಲ್ಲಿ ಒಟ್ಟು ಕೆಲಸದ ಸಮಯವನ್ನು ಬದಲಾಯಿಸಬಾರದು ಎಂಬುದು ಇದರ ಉದ್ದೇಶ.

2. ತ್ರೈಮಾಸಿಕದಲ್ಲಿ ಹೆಚ್ಚುವರಿಯಾಗಿ ಕಾರ್ಮಿಕರಿಗೆ ಗರಿಷ್ಠ ಕೆಲಸದ ಸಮಯವನ್ನು 50 ಗಂಟೆಗಳಿಂದ (ಕಾರ್ಖಾನೆಗಳ ಕಾಯಿದೆಯಡಿ) 125 ಗಂಟೆಗಳವರೆಗೆ (ಹೊಸ ಕಾರ್ಮಿಕ ಸಂಹಿತೆಗಳಡಿ) ಹೆಚ್ಚಿಸಬಹುದು.

3. ಟೇಕ್-ಹೋಮ್ ಸಂಬಳ ಮತ್ತು ಭವಿಷ್ಯ ನಿಧಿಗೆ ಉದ್ಯೋಗದಾತರ ಕೊಡುಗೆಯಲ್ಲಿ ಗಮನಾರ್ಹ ಬದಲಾವಣೆ ಇರುತ್ತದೆ. ಹೊಸ ನೀತಿಗಳನ್ವಯ ಉದ್ಯೋಗಿಯ ಮೂಲ ವೇತನವನ್ನು ಒಟ್ಟು ಸಂಬಳದ ಶೇ.50ರಷ್ಟಕ್ಕೆ ಬದಲಾಯಿಸಬಹುದು. ಇದು ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆಗಳನ್ನು ಹೆಚ್ಚಿಸುತ್ತದೆ. ಇದರಿಂದ ಕೆಲವು ಉದ್ಯೋಗಿಗಳಿಗೆ ವಿಶೇಷವಾಗಿ ಖಾಸಗಿ ವಲಯದಲ್ಲಿರುವವರಿಗೆ ಟೇಕ್-ಹೋಮ್ ಸಂಬಳ ಕಡಿಮೆಯಾಗುತ್ತದೆ.

4. ನಿವೃತ್ತಿಯ ನಂತರ ಪಡೆದ ಹಣ ಮತ್ತು ಗ್ರಾಚ್ಯುಟಿ ಮೊತ್ತವೂ ಹೆಚ್ಚಾಗುತ್ತದೆ. ಇದರಿಂದ ನೌಕರರು ನಿವೃತ್ತಿಯ ನಂತರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.

5. ಕೆಲಸಗಾರನು ತನ್ನ ಉದ್ಯೋಗದ ಅವಧಿಯಲ್ಲಿ ಪಡೆಯಬಹುದಾದ ರಜೆಯನ್ನು ತರ್ಕಬದ್ಧಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಮುಂದಿನ ವರ್ಷಕ್ಕೆ ರಜೆಯನ್ನು Carry Forward ಮಾಡಿಕೊಳ್ಳುವುದು ಮತ್ತು ಉದ್ಯೋಗದ ಅವಧಿಯಲ್ಲಿ ರಜೆಯನ್ನು ನಗದೀಕರಿಸುವ (Leave Encashment) ಅವಕಾಶ ಸಿಗಲಿದೆ. ಹೊಸ ಕಾರ್ಮಿಕ ನೀತಿಗಳು ರಜೆಗಾಗಿ ಅರ್ಹತೆಯ ಅಗತ್ಯವನ್ನು 240 ದಿನಗಳ ಕೆಲಸದಿಂದ ವರ್ಷದಲ್ಲಿ 180 ದಿನಗಳಿಗೆ ಕಡಿಮೆ ಮಾಡಿದೆ.

ಆದಾಗ್ಯೂ, ಗಳಿಕೆ ರಜೆ(Earned Leave) ಯ ಪ್ರಮಾಣವು ಬದಲಾಗದೆ ಉಳಿಯುತ್ತದೆ. ಅಂದರೆ ಪ್ರತಿ 20 ದಿನಗಳ ಕೆಲಸಕ್ಕೆ ಗಳಿಸಿದ 1 ದಿನದ ರಜೆ. ಅಂತೆಯೇ 30 ದಿನಗಳಲ್ಲಿ ಉಳಿದಿರುವ ರಜೆಗಳನ್ನು Carry Forward ಮಾಡಿಕೊಳ್ಳುವ ಮಿತಿಯಲ್ಲಿ ಯಾವುದೇ ಬದಲಾವಣೆಯನ್ನು ಪ್ರಸ್ತಾಪಿಸಲಾಗಿಲ್ಲ.

6. ವರ್ಕ್ ಫ್ರಮ್ ಹೋಮ್ (WFH) ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕದ ನಂತರ ಎಲ್ಲಾ ಕ್ಷೇತ್ರಗಳಲ್ಲಿಯೂ ಗಮನ ಸೆಳೆದಿದೆ. ಇದು ಸೇವಾ ಉದ್ಯಮಕ್ಕೆ ಅನ್ವಯವಾಗುವ ಕರಡು ಮಾದರಿಯ ಸ್ಥಾಯಿ ಆದೇಶದಲ್ಲಿ ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟಿದೆ.

ಇದನ್ನೂ ಓದಿ: ಟಿಟಿಡಿ ಇತಿಹಾಸದಲ್ಲಿಯೇ ದಾಖಲೆ! ಮೇ ತಿಂಗಳ ತಿಮ್ಮಪ್ಪನ ಆದಾಯ ಎಷ್ಟು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News