Movie Tickets Offers: ಅಗ್ಗದ ದರದಲ್ಲಿ ಸಿನಿಮಾ ನೋಡುವ ಅವಕಾಶ! ಈ ಬ್ಯಾಂಕ್ ನೀಡುತ್ತಿದೆ 50% ರಿಯಾಯಿತಿ

Movie Tickets Offers: ಈಗ ನಿಮಗೆ ಅಗ್ಗದ ದರದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಉತ್ತಮ ಅವಕಾಶವಿದೆ. ಇಂಡಿಯನ್ ಬ್ಯಾಂಕ್ ಚಲನಚಿತ್ರ ಟಿಕೆಟ್‌ಗಳ ಖರೀದಿಯ ಮೇಲೆ 50% ರಿಯಾಯಿತಿಯ ಅದ್ಭುತ ಕೊಡುಗೆಯನ್ನು ನೀಡುತ್ತಿದೆ. ಆಫರ್‌ಗೆ ಸಂಬಂಧಿಸಿದ ವಿವರಗಳನ್ನು ತಿಳಿಯಲು ಓದಿ. 

Written by - Yashaswini V | Last Updated : Nov 15, 2021, 11:00 AM IST
  • ಅಗ್ಗದ ದರದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಈಗ ಉತ್ತಮ ಅವಕಾಶ
  • ಇಂಡಿಯನ್ ಬ್ಯಾಂಕ್ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ
  • ಕೊಡುಗೆಯ ಲಾಭವನ್ನು ಪಡೆಯಲು ಷರತ್ತುಗಳನ್ನು ತಿಳಿಯಿರಿ
Movie Tickets Offers: ಅಗ್ಗದ ದರದಲ್ಲಿ ಸಿನಿಮಾ ನೋಡುವ ಅವಕಾಶ! ಈ ಬ್ಯಾಂಕ್ ನೀಡುತ್ತಿದೆ 50% ರಿಯಾಯಿತಿ  title=
Movie Tickets Offers

Movie Tickets Offers: ಥಿಯೇಟರ್ ನಲ್ಲಿ ಸಿನಿಮಾ ನೋಡಲು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರೇಕ್ಷಕರು, ಸಿನಿಮಾ ಮಂದಿರ ತೆರೆದ ತಕ್ಷಣ ತಮ್ಮ ಕುಟುಂಬ, ಸ್ನೇಹಿತರು, ಆಪ್ತರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ವೀಕ್ಷಿಸಲು ಮುಂದಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಿಮಗೂ ಸಿನಿಮಾ ನೋಡುವ ಹವ್ಯಾಸವಿದ್ದರೆ ಈ ಸುದ್ದಿ ನಿಮಗಾಗಿ ಮಾತ್ರ. 

ಈಗ ನೀವು ಚಲನಚಿತ್ರ ಟಿಕೆಟ್‌ಗಳನ್ನು ಅರ್ಧ ಶುಲ್ಕ ಪಾವತಿಸಿ (Movie Tickets Offers) ಖರೀದಿಸಬಹುದು. ಜಾಗತಿಕ ಮಹಾಮಾರಿ ಕೊರೊನಾ ಭೀತಿಯಿಂದ ಈಗಲೂ ಜನರು ಥಿಯೇಟರ್‌ಗೆ ಹೋಗುವುದನ್ನು ತಪ್ಪಿಸುತ್ತಿದ್ದಾರೆ. ಹೀಗಿರುವಾಗ ಸಿನಿಮಾ ಹಾಲ್‌ಗಳು, ಬ್ಯಾಂಕ್‌ಗಳು, ಬುಕ್ಕಿಂಗ್ ಆ್ಯಪ್‌ಗಳು ಗ್ರಾಹಕರನ್ನು ಸೆಳೆಯಲು ನಾನಾ ಆಫರ್‌ಗಳನ್ನು ನೀಡುತ್ತಿವೆ.

ಕರೋನಾದಿಂದ ದೀರ್ಘಕಾಲ ಮುಚ್ಚಿದ್ದ ಸಿನಿಮಾ ಹಾಲ್ ಗಳು: 
ಕೊರೊನಾ ವೈರಸ್ (Coronavirus) ಸೋಂಕು ಕಡಿಮೆಯಾಗುತ್ತಿದ್ದು, ಇದೀಗ ಜನಜೀವನ ಮತ್ತೆ ತಹಬದಿಗೆ ಬರುತ್ತಿದೆ. ಆದಾಗ್ಯೂ, ನಮ್ಮ ದೇಶದಲ್ಲಿ ಈಗ ಸಾಂಕ್ರಾಮಿಕ ರೋಗದ ಅಪಾಯವಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಇನ್ನೂ ಜನರು ಈ ವೈರಸ್‌ನೊಂದಿಗೆ ಬದುಕಲು ಕಲಿಯುತ್ತಿದ್ದಾರೆ. ಸಾಮಾನ್ಯ ಜೀವನ ಮತ್ತು ದೇಶದ ಆರ್ಥಿಕತೆಯನ್ನು ಮರಳಿ ತರಲು ಸರ್ಕಾರಗಳು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಇದನ್ನೂ ಓದಿ- BIG NEWS : ಪೆಟ್ರೋಲ್-ಡೀಸೆಲ್ ನಂತರ CNG ಬೆಲೆಯಲ್ಲಿ ಭಾರಿ ಏರಿಕೆ! ಹೊಸ ಬೆಲೆ ತಿಳಿಯಿರಿ

ಈ ಅನುಕ್ರಮದಲ್ಲಿ ಈಗ ಸರ್ಕಾರ ಅಗತ್ಯ ಮಾರ್ಗಸೂಚಿಗಳೊಂದಿಗೆ ಸಿನಿಮಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದೆ. ಮುಚ್ಚಿದ ಚಿತ್ರಮಂದಿರ ತೆರೆದು ಬಹಳ ಸಮಯದ ಬಳಿಕ ಪ್ರೇಕ್ಷಕರೂ ಚಿತ್ರ ವೀಕ್ಷಿಸಲು ಥಿಯೇಟರ್ ನತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುವುದರ ಜೊತೆಗೆ ಪ್ರೇಕ್ಷಕರು ಕೋವಿಡ್ ನಿಯಮಗಳನ್ನು ಪಾಲಿಸುವುದು ಸಹ ಅಗತ್ಯವಾಗಿದೆ. 

ಈ ಬ್ಯಾಂಕಿನಿಂದ ಸಿಗುತ್ತಿದೆ ಭರ್ಜರಿ ಆಫರ್:
ದೇಶದ 7ನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ 'ಇಂಡಿಯನ್ ಬ್ಯಾಂಕ್' (Indian Bank) ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಚಲನಚಿತ್ರ ಟಿಕೆಟ್‌ಗಳ ಖರೀದಿಯ ಮೇಲೆ ಬ್ಯಾಂಕ್‌ನಿಂದ 50% ರಷ್ಟು ಅದ್ಭುತ ಕೊಡುಗೆಯನ್ನು ನೀಡಲಾಗುತ್ತಿದೆ. ನೀವು ಇಂಡಿಯನ್ ಬ್ಯಾಂಕ್ ಗ್ರಾಹಕರಾಗಿದ್ದರೆ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ BookMyShow ಮೂಲಕ ಬುಕ್ಕಿಂಗ್ ಟಿಕೆಟ್‌ಗಳ ಮೇಲೆ 50% ರಷ್ಟು ಬಂಪರ್ ರಿಯಾಯಿತಿಯನ್ನು ಪಡೆಯಬಹುದು. ಇದಕ್ಕಾಗಿ ಬ್ಯಾಂಕ್ ನೀಡಿರುವ ನಿಯಮಗಳು ಮತ್ತು ಷರತ್ತುಗಳೇನು ಎಂಬುದನ್ನು ತಿಳಿಯೋಣ. 

ಇದನ್ನೂ ಓದಿ- ATM: ನಿಮ್ಮ ಬಳಿಯೂ ಡ್ಯಾಮೇಜ್ ನೋಟ್ ಇದೆಯೇ? ಅಂತಹ ನೋಟನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕೊಡುಗೆಯ ಲಾಭ ಪಡೆಯಲು ಇವು ಷರತ್ತುಗಳಾಗಿವೆ:
>> ಇದಕ್ಕಾಗಿ ನೀವು ಇಂಡಿಯನ್ ಬ್ಯಾಂಕ್‌ನ ರುಪೇ ಕ್ರೆಡಿಟ್ ಕಾರ್ಡ್ ಹೊಂದಿರಬೇಕು.
>>  ‘ಬುಕ್ ಮೈ ಶೋ’ಗೆ ಹೋಗಿ ಸಿನಿಮಾ ಟಿಕೆಟ್ ಬುಕ್ ಮಾಡಬೇಕು.
>> ಆಫರ್ ಅಡಿಯಲ್ಲಿ, ನೀವು ಪ್ರತಿ ತಿಂಗಳಿಗೊಮ್ಮೆ ಮಾತ್ರ ಒಂದು ಕಾರ್ಡ್ ಅನ್ನು ಪಡೆಯಬಹುದು.
>>  ಟಿಕೆಟ್ ಬುಕಿಂಗ್ ಮೇಲೆ ನೀವು 50 ಪ್ರತಿಶತ ತ್ವರಿತ ರಿಯಾಯಿತಿಯನ್ನು ಪಡೆಯುತ್ತೀರಿ.
>> ಆದಾಗ್ಯೂ, ನೀವು ಒಂದು ಬಾರಿಗೆ ಗರಿಷ್ಠ ರೂ.250 ರಿಯಾಯಿತಿಯನ್ನು ಪಡೆಯಬಹುದು.
>>  ಈ ಕೊಡುಗೆಯು ಈ ವರ್ಷದ ಅಂತ್ಯದವರೆಗೆ ಅಂದರೆ ಡಿಸೆಂಬರ್ 31, 2021 ರವರೆಗೆ ಮಾನ್ಯವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News