Motor Insurance New Rule: ಶ್ರೀಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ IRDAI

Motor Insurance New Rule: ಒಂದು ವೇಳೆ ನೀವೂ ಕೂಡ ಉತ್ತಮ ಮತ್ತು ಸುರಕ್ಷಿತ ಡ್ರೈವಿಂಗ್ ಮಾಡುವವರಾಗಿದ್ದರೆ, ಈ ನೆಮ್ಮದಿಯ ಸುದ್ದಿ ನಿಮಗಾಗಿ. ಹೌದು, ಒಂದು ವೇಳೆ ನೀವು ಉತ್ತಮ ಮತ್ತು ಸುರಕ್ಷಿತ ವಾಹನ ಚಾಲಕರಾಗಿದ್ದರೆ ನಿಮಗೆ ವಾಹನ ಇನ್ಸೂರೆನ್ಸ್ ನಲ್ಲಿ ಕಡಿಮೆ ಪ್ರೀಮಿಯಮ್ ಬೀಳಲಿದೆ, ನಿಮ್ಮ ವಾಹನ ಚಾಲನೆ ಸರಿಯಾಗಿಲ್ಲ ಎಂದರೆ ನೀವು ಭಾರೀ ಪ್ರೀಮಿಯಮ್ ಪಾವತಿಸಬೇಕಾಗಲಿದೆ.   

Written by - Nitin Tabib | Last Updated : Jul 6, 2022, 04:31 PM IST
  • ಜನಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ವಿಮಾ ನಿಯಂತ್ರಕ
  • ಉತ್ತಮ ವಾಹನ ಚಲಾಯಿರುವವರ ವಿಮಾ ಪ್ರಿಮಿಯಂ ಕಡಿಮೆಯಾಗಲಿದೆ
  • ಕಳಪೆ ವಾಹನ ಚಲಾಯಿರುವವರ ವಿಮಾ ಪ್ರಿಮಿಯಂ ಹೆಚ್ಚಾಗಲಿದೆ
Motor Insurance New Rule: ಶ್ರೀಸಾಮಾನ್ಯರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ IRDAI title=
Motor Insurance New Rule

Motor Insurance New Rule: ವಿಮಾ ನಿಯಂತ್ರಕ IRDAI ಸಾಮಾನ್ಯ ಜನರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ.  IRDAI ಮೋಟಾರು ವಿಮೆಗಾಗಿ ಹೊಸ ನಿಯಮಗಳನ್ನು ಹೊರಡಿಸಿದೆ ಮತ್ತು ಈ ಹೊಸ ನಿಯಮಗಳ ಪ್ರಕಾರ, ಈಗ ಚಾಲಕರು ವಾಹನ ಪ್ರೀಮಿಯಂನಲ್ಲಿ ಪರಿಹಾರವನ್ನು ಪಡೆಯಲಿದ್ದಾರೆ. ಆದರೆ ಈ ಪರಿಹಾರವು ನೀವು ವಾಹನ ಚಾಲನೆ ಮಾಡುವ ವಿಧಾನವನ್ನು ಅವಲಂಬಿಸಿರುತ್ತದೆ. ನೀವು ಚೆನ್ನಾಗಿ ಮತ್ತು ಸುರಕ್ಷಿತವಾಗಿ ಚಾಲನೆ ಮಾಡಿದರೆ ನೀವು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ ಮತ್ತು ನೀವು ಕಳಪೆ ಚಾಲನೆ ಮಾಡಿದರೆ ನೀವು ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ, ಈಗ ನೀವು ನಿಮ್ಮ ವಾಹನವನ್ನು ಚಾಲನೆ ಮಾಡುವ ರೀತಿ ನಿಮ್ಮ ಪ್ರೀಮಿಯಂ ದರವನ್ನು ನಿರ್ಧರಿಸಲಿದೆ. ಅಷ್ಟೇ ಅಲ್ಲ ಈಗ ನೀವು ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿದ್ದರೆ, ನೀವು ಕೇವಲ ಒಂದೇ ವಿಮಾ ಪ್ರೀಮಿಯಂನೊಂದಿಗೆ ಕವರೇಜ್ ಪಡೆಯಬಹುದು.

ಹೊಸ ನಿಯಮಗಳನ್ನು ಹೊರಡಿಸಿದ IRDAI 
ವಿಮಾ ನಿಯಂತ್ರಕ IRDAI ಮೋಟಾರು ವಿಮೆ ಪಡೆಯುವ ಜನರಿಗೆ ಮಹತ್ವದ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ಪ್ರಕಟಣೆಯ ನಂತರ, ನೀವು ಈಗ ಒಂದು ವಿಮಾ ಪಾಲಿಸಿಯಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳಿಗೆ ಕವರೇಜ್ ಪಡೆದುಕೊಳ್ಳಬಹುದು.
ಇಷ್ಟೇ ಅಲ್ಲ, ನಿಮ್ಮ ಪ್ರೀಮಿಯಂ ಅನ್ನು ನೀವು ಚಾಲನೆ ಮಾಡುವ ವಿಧಾನದಿಂದ ನಿರ್ಧರಿಸಲಾಗುತ್ತದೆ, ಅಂದರೆ ಚೆನ್ನಾಗಿ ಚಾಲನೆ ಮಾಡುವವರು ಕಡಿಮೆ ಪ್ರೀಮಿಯಂ ಪಾವತಿಸಬೇಕಾಗಲಿದೆ ಮತ್ತು ಕೆಟ್ಟ ಡ್ರೈವಿಂಗ್‌ಗೆ ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಬೇಕಾಗಲಿದೆ. ಇದಲ್ಲದೆ, ನೀವು ಓಡಿಸುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಮೋಟಾರು ವಿಮಾ ಪ್ರೀಮಿಯಂ ಅನ್ನು ಸಹ ನಿರ್ಧರಿಸಲಾಗುವುದು ಎನ್ನಲಾಗಿದೆ. ವಿಮಾ ನಿಯಂತ್ರಕದ ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ ಮತ್ತು ಕಂಪನಿಗಳು ಸಂಬಂಧಿತ ಉತ್ಪನ್ನಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ-Edible Oil Price Cut- ಖಾದ್ಯ ತೈಲ 20 ರೂಪಾಯಿ ಅಗ್ಗ!

ಹೊಸ ವಿಮಾ ಉತ್ಪನ್ನಗಳಿಗೆ ಅನುಮೋದನೆ
ಹೊಸ ನಿಯಮಗಳ ಪ್ರಕಾರ, IRDAI ಸಾಮಾನ್ಯ ವಿಮಾ ಕಂಪನಿಗಳ ಹೊಸ ವಿಮಾ ಉತ್ಪನ್ನಗಳಿಗೆ ಅನುಮೋದನೆ ನೀಡಿದೆ. ಇದಲ್ಲದೆ, ಒಂದೇ ಪಾಲಿಸಿಯಲ್ಲಿ ಒಂದಕ್ಕಿಂತ ಹೆಚ್ಚು 2 ಚಕ್ರ ಮತ್ತು 4 ಚಕ್ರ ವಾಹನಗಳ ಕವರೇಜ್ ಇದರಿಂದ ಸಾಧ್ಯವಾಗಲಿದೆ. ಹೊಸ ನಿಯಮಗಳ ಪ್ರಕಾರ, ನೀವು ಹೆಚ್ಚು ವಾಹನಗಳನ್ನು ಓಡಿಸಿದಷ್ಟೂ ನೀವು ಹೆಚ್ಚು ಪ್ರೀಮಿಯಂ ಪಾವತಿಸಬೇಕಾಗಲಿದೆ. 

ಇದನ್ನೂ ಓದಿ-7th pay commission : ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ, ಮಹತ್ವದ ಘೋಷಣೆ

ಡ್ರೈವಿಂಗ್ ಪ್ಯಾಟರ್ನ್ ಹೇಗೆ ಗೊತ್ತಾಗಲಿದೆ?
IRDAI ನೀಡಿದ ಮಾಹಿತಿಯ ಪ್ರಕಾರ, ನಿಮ್ಮ GPS ನಿಂದ ನಿಮ್ಮ ಡ್ರೈವಿಂಗ್ ಪ್ಯಾಟರ್ನ್ ತಿಳಿಯಲಿದೆ. ನಿಮ್ಮ ಮೊಬೈಲ್ ಅಪ್ಲಿಕೇಶನ್ ಅಥವಾ ವಾಹನದಲ್ಲಿ ಸಣ್ಣ ಸಾಧನವನ್ನು ಅಳವಡಿಸಲಾಗುವುದು, ಅದು ಈ ಮಾಹಿತಿಯನ್ನು ನೀಡುತ್ತದೆ. ಇದಲ್ಲದೇ ಜಿಪಿಎಸ್ ನೆರವಿನಿಂದ ವಿಮಾ ಕಂಪನಿಗೆ ಡ್ರೈವಿಂಗ್ ಪ್ಯಾಟರ್ನ್ ತಿಳಿಯಲಿದೆ. ಈ ಚಾಲನಾ ಮಾದರಿಯೊಂದಿಗೆ, ವಿಮಾ ಪ್ರೀಮಿಯಂ ಕಡಿಮೆಯಾಗುತ್ತದೆ ಮತ್ತು ಹೆಚ್ಚಾಗುತ್ತದೆ. ತಂತ್ರಜ್ಞಾನದ ಸಹಾಯದಿಂದ ಡ್ರೈವಿಂಗ್ ಸ್ಕೋರ್ ನಿರ್ಧರಿಸಲಾಗುತ್ತದೆ ಮತ್ತು ಪ್ರೀಮಿಯಂ ಅನ್ನು ನಿಗದಿಪಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News