Good News: ಹಿರಿಯ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ

Senior Citizen Saving Scheme: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಕೇಂದ್ರ ಸರ್ಕಾರ ಪರಿಷ್ಕರಿಸಿದೆ. ಈ ಯೋಜನೆಗಳಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೂಡ ಶಾಮೀಲಾಗಿದ್ದು, ಹಿರಿಯ ನಾಗರಿಕರಿಗೆ ಇನ್ಮುಂದೆ ಈ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಸಿಗಲಿದೆ. ಬನ್ನಿ ತಿಳಿದುಕೊಳ್ಳೋಣ,  

Written by - Nitin Tabib | Last Updated : Mar 31, 2023, 08:26 PM IST
  • ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ.
  • ಈ ಹೊಸ ಬಡ್ಡಿ ದರಗಳು ನಾಳೆಯಿಂದ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿವೆ.
  • ಈ ಯೋಜನೆಗಳಲ್ಲಿ ಹಿರಿಯ ನಾಗರೀಕರ ಉಳಿತಾಯ ಯೋಜನೆ ಕೂಡ ಶಾಮೀಲಾಗಿದೆ.
Good News: ಹಿರಿಯ ನಾಗರಿಕರಿಗೆ ಬಂಬಾಟ್ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ title=
ಹಿರಿಯ ನಾಗರೀಕರ ಉಳಿತಾಯ ಯೋಜನೆ ಹೊಸ್ ಅಪ್ಡೇಟ್

SCSS Latest Interest Rates 2023-24: ದೇಶಾದ್ಯಂತ ಇರುವ ಕೋಟ್ಯಂತರ ಹಿರಿಯ ನಾಗರಿಕರಿಗೆ ಕೇಂದ್ರದ ಮೋದಿ ಸರ್ಕಾರ ಬಂಬಾಟ್ ಸುದ್ದಿಯೊಂದು ಪ್ರಕಟಿಸಿದೆ. ಹೌದು, ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದ್ದರೆ, ನಿಮ್ಮ ಪಾಲಿಗೆ ಇದೊಂದು ಸಂತಸದ ಸುದ್ದಿಯಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸರ್ಕಾರ ಹೆಚ್ಚಿಸಿದೆ. ಈ ಹೊಸ ಬಡ್ಡಿ ದರಗಳು ನಾಳೆಯಿಂದ ಅಂದರೆ ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿವೆ. ಈ ಯೋಜನೆಗಳಲ್ಲಿ ಹಿರಿಯ ನಾಗರೀಕರ ಉಳಿತಾಯ ಯೋಜನೆ ಕೂಡ ಶಾಮೀಲಾಗಿದ್ದು, ಈ ಯೋಜನೆಯ ಮೇಲಿನ ಬಡ್ಡಿದರ ಕೂಡ ಸರ್ಕಾರ ಪರಿಷ್ಕರಿಸಿದೆ.

ಪ್ರಸ್ತುತ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಈ ಯೋಜನೆಯಲ್ಲಿ ಶೇ.8 ರಷ್ಟು ಬಡ್ಡಿಯ ಲಾಭವನ್ನು ನೀಡುತ್ತಿದೆ. ಆದರೆ ಇದೀಗ ಈ ಯೋಜನೆಯಲ್ಲಿ ನಾಳೆಯಿಂದ ಅಂದರೆ ಏಪ್ರಿಲ್ 1, 2023 ರಿಂದ ಹಿರಿಯ ನಾಗರಿಕರಿಗೆ ಶೇ.8.2 ರಷ್ಟು ಬಡ್ಡಿಯ ಲಾಭ ಸಿಗಲಿದೆ. 

ಇದನ್ನೂ ಓದಿ-Good News: ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ

ಹೊಸ ಬಡ್ಡಿ ದರಗಳು ಇಂತಿವೆ
>> ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೇ.8 ರಿಂದ ಶೇ.8.2ಕ್ಕೆ ಹೆಚ್ಚಿಸಲಾಗಿದೆ.
>> ಕಿಸಾನ್ ವಿಕಾಸ್ ಪತ್ರದ ಬಡ್ಡಿ ದರವನ್ನು ಶೇಕಡಾ 7.2 ರಿಂದ ಶೇಕಡಾ 7.5 ಕ್ಕೆ ಹೆಚ್ಚಿಸಲಾಗಿದೆ.
>> ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಕಾಲಾವಧಿ ಠೇವಣಿಗಳ ಬಡ್ಡಿದರವನ್ನೂ ಹೆಚ್ಚಿಸಲಾಗಿದೆ.

ಇದನ್ನೂ ಓದಿ-PPF Latest Update: ಪಿಪಿಎಫ್ ಹೂಡಿಕೆದಾರರಿಗೆ ಬಿಗ್ ಶಾಕ್!

>> ಮಾಸಿಕ ಆದಾಯ ಖಾತೆ (ಎಂಐಎಸ್) ಯೋಜನೆಗಳ ಬಡ್ಡಿ ದರವನ್ನು ಶೇ.7.1 ರಿಂದ ಶೇ.7.4ಕ್ಕೆ ಹೆಚ್ಚಿಸಲಾಗಿದೆ.
>> ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರದ ಬಡ್ಡಿ ದರವನ್ನು ಶೇ.7ರಿಂದ ಶೇ.7.7ಕ್ಕೆ ಹೆಚ್ಚಿಸಲಾಗಿದೆ.
>> ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬಡ್ಡಿದರವನ್ನು ಶೇಕಡಾ 7.6 ರಿಂದ ಶೇಕಡಾ 8 ಕ್ಕೆ ಬದಲಾಯಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News