Land Rover Defender: ಲ್ಯಾಂಡ್ ರೋವರ್ ಡಿಫೆಂಡರ್ SUVಯ 75ನೇ ಲಿಮಿಟೆಡ್ ಎಡಿಷನ್ ಅನಾವರಣ

ಹೊಸ ಲಿಮಿಟೆಡ್ ಎಡಿಷನ್ ಡಿಫೆಂಡರ್ ವಿಶೇಷ ಬಾಹ್ಯ ಬಣ್ಣ ಮತ್ತು ಅನೇಕ ವಿಶೇಷ ವೈಶಿಷ್ಟ್ಯಗಳೊಂದಿಗೆ ಲ್ಯಾಂಡ್ ರೋವರ್‍ನ ಹೆಗ್ಗುರುತನ್ನು ಸಂಭ್ರಮದಿಂದ ಆಚಿಸಿಕೊಳ್ಳುತ್ತಿದೆ.     

Written by - Zee Kannada News Desk | Last Updated : Sep 19, 2022, 08:44 PM IST
  • ಹೊಸ ಡಿಫೆಂಡರ್ ಲಿಮಿಟೆಡ್ ಎಡಿಷನ್‍ನೊಂದಿಗೆ ಲ್ಯಾಂಡ್ ರೋವರ್‍ನ 75 ವರ್ಷಾಚರಿಸುತ್ತಿದೆ
  • 1948ರಲ್ಲಿ ಆಮ್ಸ್ಟರ್‌ಡ್ಯಾಮ್ ಮೋಟಾರ್ ಶೋನಲ್ಲಿ ಲ್ಯಾಂಡ್ ರೋವರ್ ತನ್ನ ಮೊದಲ SUV ಸರಣಿ ಪರಿಚಯಿಸಿತ್ತು
  • 3D ಸರೌಂಡ್ ಕ್ಯಾಮೆರಾ, ಮ್ಯಾಟ್ರಿಕ್ಸ್ LED ಹೆಡ್ಲೈಟ್‍ ಸೇರಿದಂತೆ ಇತ್ತೀಚಿನ ತಂತ್ರಜ್ಞಾನವನ್ನು ಹೊಂದಿದೆ
Land Rover Defender: ಲ್ಯಾಂಡ್ ರೋವರ್ ಡಿಫೆಂಡರ್ SUVಯ 75ನೇ ಲಿಮಿಟೆಡ್ ಎಡಿಷನ್ ಅನಾವರಣ title=
ಡಿಫೆಂಡರ್ 75th ಲಿಮಿಟೆಡ್ ಎಡಿಷನ್‍

ಬೆಂಗಳೂರು: 75ನೇ ವರ್ಷಕ್ಕೆ ಕಾಲಿಡುತ್ತಿರುವ ಐಷಾರಾಮಿ ವಾಹನ ತಯಾರಕ ಕಂಪನಿ ಜಾಗ್ವಾರ್ ಲ್ಯಾಂಡ್ ರೋವರ್ ಡಿಫೆಂಡರ್ SUVಯ 75ನೇ ಲಿಮಿಟೆಡ್ ಎಡಿಷನ್‍ ಅನಾವರಣಗೊಳಿಸಿದೆ.

ಮುಂದಿನ ವರ್ಷ ಲ್ಯಾಂಡ್ ರೋವರ್ 75ನೇ ವರ್ಷಕ್ಕೆ ಕಾಲಿಡುತ್ತಿದೆ. 75ನೇ ಲಿಮಿಟೆಡ್ ಎಡಿಷನ್‍ನೊಂದಿಗೆ ಸ್ವಲ್ಪ ಮುಂಚಿತವಾಗಿಯೇ ಡಿಫೆಂಡರ್ ತನ್ನ ಹುಟ್ಟುಹಬ್ಬದ ಆಚರಣೆ ಪ್ರಾರಂಭಿಸಿದೆ. ಹೊಸ ಲಿಮಿಟೆಡ್ ಎಡಿಷನ್ ಡಿಫೆಂಡರ್ HSE ಟ್ರಿಮ್ ಮಟ್ಟವನ್ನು ಆಧರಿಸಿದೆ. 90 ಮತ್ತು 110 ಆವೃತ್ತಿಯ ಬಾಡಿ ಡಿಸೈನ್‍ಗಳಲ್ಲಿ ಲಭ್ಯವಿರುವ ಡಿಫೆಂಡರ್ ಹಲವಾರು ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.  

1948ರಲ್ಲಿ ಆಮ್ಸ್ಟರ್‌ಡ್ಯಾಮ್ ಮೋಟಾರ್ ಶೋನಲ್ಲಿ ಲ್ಯಾಂಡ್ ರೋವರ್ ತನ್ನ ಮೊದಲ SUV ಸರಣಿ ಪರಿಚಯಿಸಿತ್ತು. ಹೊಸ ಡಿಫೆಂಡರ್ 75ನೇ ಲಿಮಿಟೆಡ್ ಎಡಿಷನ್ ದೀರ್ಘ ಕಾಲದ ಪರಂಪರೆ ಹೊಂದಿದೆ. ಲ್ಯಾಂಡ್ ರೋವರ್ ಡಿಫೆಂಡರ್ SUVಗೆ ಭಾರತ ಸೇರಿ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಹೊಸ ಡಿಫೆಂಡರ್ 75ನೇ ಲಿಮಿಟೆಡ್ ಎಡಿಷನ್ಅನ್ನು ಸಾಮಾನ್ಯ HSE ಟ್ರಿಮ್ ಮಾದರಿಗಳಿಂದ ಭಿನ್ನವಾಗಿ ಕಾಣುವಂತೆ ಮಾಡಲು ಲ್ಯಾಂಡ್ ರೋವರ್ ಹೊಸ SUVಗೆ ವಿಶಿಷ್ಟವಾದ ಬಣ್ಣ ನೀಡಿದೆ. ಗ್ರ್ಯಾಸ್ಮೀರ್ ಗ್ರೀನ್ ಎಂದು ಕರೆಯಲ್ಪಡುವ ಈ ವಿಶಿಷ್ಟವಾದ ಹಸಿರು ಛಾಯೆಯ ಬಣ್ಣವು ಹೊರ ಮತ್ತು ಒಳಭಾಗದಲ್ಲಿ ಕಂಡುಬರುತ್ತದೆ.

ಇದನ್ನೂ ಓದಿ: TATA SUV: ಮತ್ತೊಂದು ಅದ್ಭುತ SUV ಬಿಡುಗಡೆ ಮಾಡಿದ ಟಾಟಾ, ಬೆಲೆ & ವೈಶಿಷ್ಟ್ಯ ತಿಳಿಯಿರಿ

ಆಫ್ ರೋಡ್ ಟೈರ್‌ಗಳೊಂದಿಗೆ ಬರುವ 20 ಇಂಚಿನ ಅಲಾಯ್ ವ್ಹೀಲ್ ಗಳಲ್ಲಿ ಗ್ರಾಸ್ಮೀರ್ ಗ್ರೀನ್ ಪೇಂಟ್ ಸ್ಕೀಮ್‍ಅನ್ನು ಸಹ ಕಾಣಬಹುದು. ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳನ್ನು ಸೆರೆಸ್ ಸಿಲ್ವರ್‌ನಲ್ಲಿ ಚಿತ್ರಿಸಲಾಗಿದೆ. ಸೀಮಿತ ಆವೃತ್ತಿಯ ಡಿಫೆಂಡರ್ ಟೈಲ್‌ಗೇಟ್‌ನಲ್ಲಿ ವಿಶಿಷ್ಟವಾದ 75 ವರ್ಷಗಳ ಗ್ರಾಫಿಕ್‍ಅನ್ನು ಸಹ ಹೊಂದಿದೆ. ಈ SUV ಏರ್ ಸಸ್ಪೆನ್ಷನ್, LED ಹೆಡ್‌ಲೈಟ್‌ಗಳು, 11.4 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮೆರಿಡಿಯನ್ ಸೌಂಡ್ ಸಿಸ್ಟಂ, ಲ್ಯಾಂಡ್ ರೋವರ್‌ನ ಆಫ್-ರೋಡಿಂಗ್ ಟೆರೈನ್ ರೆಸ್ಪಾನ್ಸ್ ಸಿಸ್ಟಮ್, ಸ್ಟೀರಿಂಗ್ ವ್ಹೀಲ್ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಹೊಂದಿದೆ.

ಡಿಫೆಂಡರ್‌ SUVಯ ಹೊರಭಾಗದಲ್ಲಿ 6 ಕ್ಯಾಮೆರಾಗಳು ಹಾಗೂ ಸುತ್ತಲೂ ಸೆನ್ಸಾರ್‍ಗಳಿವೆ. ಈ ಕ್ಯಾಮರಾ 360 ಡಿಗ್ರಿ ನೋಟ ಹೊಂದಿದ್ದು, ಆಫ್ ರೋಡಿಂಗ್‍ನಲ್ಲಿ ಇದು ನೆರವಿಗೆ ಬರಲಿದೆ. ಇನ್ನು IRVM ಹಿಂದೆ ಇರುವ ಕ್ಯಾಮೆರಾ ಆಕ್ಟಿವ್ ಲೇನ್ ಅಸಿಸ್ಟ್ ಹಾಗೂ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಆಗಿ ಕಾರ್ಯನಿರ್ವಹಿಸುತ್ತದೆ. ಮತ್ತೊಂದೆಡೆ IRVMನಲ್ಲಿ ವಿಡಿಯೋ ಪ್ರದರ್ಶಿಸುವ ಶಾರ್ಕ್-ಫಿನ್ ಆಂಟೆನಾದಲ್ಲಿ ಕ್ಯಾಮೆರಾ ನೀಡಲಾಗಿದೆ.

ಇದನ್ನೂ ಓದಿ: Hunter 350: ಇವೇ ನೋಡಿ ಬೆಸ್ಟ್ ಸೆಲ್ಲಿಂಗ್ ರಾಯಲ್ ಎನ್‌ಫೀಲ್ಡ್ 350CC ಬೈಕ್‌ಗಳು

ಡಿಫೆಂಡರ್ ಆಫ್-ರೋಡ್ SUVಯಲ್ಲಿ 2.0 ಲೀಟರ್, 4 ಸಿಲಿಂಡರ್, ಟರ್ಬೊ-ಪೆಟ್ರೋಲ್ ಇಂಜಿನ್ ಅಳವಡಿಸಲಾಗಿದೆ. ಈ ಇಂಜಿನ್ ಸುಮಾರು 300 Bhp ಪವರ್ ಹಾಗೂ 400 NM ಟಾರ್ಕ್ ಉತ್ಪಾದಿಸುತ್ತದೆ. ಈ ಇಂಜಿನ್‍ಗೆ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಇಂಜಿನ್ ಎಲ್ಲಾ 4 ವ್ಹೀಲ್‍ಗಳಿಗೆ ಪವರ್ ಕಳುಹಿಸುತ್ತದೆ. ಇದರೊಂದಿಗೆ 3.0 ಲೀಟರ್ 4 ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಇಂಜಿನ್‍ ಆಯ್ಕೆಯನ್ನು ಹೊಂದಿದೆ. ಈ ಎಂಜಿನ್ 398 Bhp ಪವರ್ ಹಾಗೂ 640 NM ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಇಂಜಿನ್‍ಗೆ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ SUVಯಲ್ಲಿ 20 ಇಂಚಿನ ಅಲಾಯ್ ವ್ಹೀಲ್ ನೀಡಲಾಗಿದೆ. Low End ಮಾದರಿಯಲ್ಲಿ 19 ಇಂಚಿನ ವ್ಹೀಲ್‍ಗಳನ್ನು ನೀಡಲಾಗುತ್ತದೆ.

ಟಾಪ್ ಗೇರ್‍ನ 2020ರ ವರ್ಷದ ಕಾರು, ಮೋಟಾರ್ ಟ್ರೆಂಡ್‍ನ ವರ್ಷದ 2021ರ SUV, ಆಟೋಕಾರ್‍ನ 2020ರ ಅತ್ಯುತ್ತಮ SUV ಮತ್ತು 5 ಸ್ಟಾರ್ ಯೂರೋ NCAP ಸುರಕ್ಷತಾ ರೇಟಿಂಗ್ ಸೇರಿದಂತೆ 50ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಡಿಫೆಂಡರ್ ಮುಡಿಗೇರಿಸಿಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News