Minimum Wage: ದಿನಗೂಲಿ ನೌಕರರ ಪಾಲಿಗೆ ಇಲ್ಲಿದೆ ಭಾರಿ ಸಂತಸದ ಸುದ್ದಿ, ಜಬರ್ದಸ್ತ್ ಪ್ಲಾನ್ ನಲ್ಲಿ ಮೋದಿ ಸರ್ಕಾರ

Minimum Wage: 2030ರವರೆಗೆ ಲಕ್ಷಾಂತರ ದಿನಗೂಲಿ ನೌಕರರನ್ನು ಅತಿ ಬಡವ ಶ್ರೇಣಿಯಿಂದ ಹೊರತೆಗೆಯಲು ಕಾರ್ಮಿಕ ಸಚಿವಾಲಯ ಕನಿಷ್ಠ ವೇತನದ ಬದಲು ಜೀವನ ವೇತನ ನೀಡಲು ಯೋಜನೆ ರೂಪಿಸುತ್ತಿದೆ. ಈ ಯೋಜನೆಯ ಕುರಿತು ಸಚಿವಾಲಯ ಕ್ಷಿಪ್ರ ಚಿಂತನೆ ನಡೆಸುತ್ತಿದೆ.  

Written by - Nitin Tabib | Last Updated : Dec 29, 2022, 07:04 PM IST
  • ಕಾರ್ಮಿಕರಿಗೆ ಅವರ ಸಣ್ಣ ಅಗತ್ಯಗಳನ್ನು ಪೂರೈಸಲು ಜೀವನ ವೇತನವನ್ನು ನೀಡಲಾಗುತ್ತದೆ,
  • ಆದರೆ ಕನಿಷ್ಠ ವೇತನವನ್ನು ಕಾನೂನಿನಿಂದ ನಿಗದಿಪಡಿಸಲಾಗಿದೆ,
  • ಅಂದರೆ, ಕೆಲಸಕ್ಕೆ ಬದಲಾಗಿ ಆದಾಯದ ನಿಯಮವಿದೆ.
Minimum Wage: ದಿನಗೂಲಿ ನೌಕರರ ಪಾಲಿಗೆ ಇಲ್ಲಿದೆ ಭಾರಿ ಸಂತಸದ ಸುದ್ದಿ, ಜಬರ್ದಸ್ತ್ ಪ್ಲಾನ್ ನಲ್ಲಿ ಮೋದಿ ಸರ್ಕಾರ title=
Modi Government Big Plan

Minimum Wage: ದೇಶದಿಂದ ಬಡತನ ನಿರ್ಮೂಲನೆ ಮಾಡಲು ಹಾಗೂ ಬಡವರ ಜೀವನಮಟ್ಟವನ್ನು ಹಳಿಗೆ ತರಲು ಕೇಂದ್ರ ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪ್ರಸ್ತುತ ದೇಶದಲ್ಲಿ ಸುಮಾರು 22.89 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ದೇಶದ ಬಡವರಿಗೆ ನೀಡುವ ಭತ್ಯೆಯಲ್ಲಿ ಸರ್ಕಾರ ಬದಲಾವಣೆ ತರಲು ಹೊರಟಿದೆ. ಹೌದು, ಕಾರ್ಮಿಕ ಸಚಿವಾಲಯವು ದಿನಗೂಲಿ ನೌಕರರಿಗೆ ಕನಿಷ್ಠ ವೇತನದ ಬದಲಿಗೆ ಜೀವನ ವೇತನವನ್ನು ನೀಡಲು ಕ್ಷಿಪ್ರ ಯೋಜನೆ ರೂಪಿಸುತ್ತಿದೆ. ಇದರಿಂದ ಬಡವರ ಜೀವನ ಮಟ್ಟವನ್ನು ಹೆಚ್ಚಿಸಬಹುದು ಅಥವಾ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ದೇಶದಿಂದ ಬಡತನವನ್ನು ನಿರ್ಮೂಲನೆ ಮಾಡಬಹುದು. ಇದಕ್ಕಾಗಿ ಸರ್ಕಾರವು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಬದಲಾವಣೆಗಳನ್ನು ತರುತ್ತಿದೆ.

ಸರ್ಕಾರದ ಯೋಜನೆ ಏನು?
ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ದೈನಂದಿನ ಕೂಲಿ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು ಮತ್ತು 2030 ರ ವೇಳೆಗೆ ಲಕ್ಷಾಂತರ ಕಾರ್ಮಿಕರನ್ನು ತೀವ್ರ ಬಡತನದಿಂದ ಹೊರತರಲು, ಕಾರ್ಮಿಕ ಸಚಿವಾಲಯವು ಕನಿಷ್ಠ ವೇತನದ ಬದಲಿಗೆ ಜೀವನ ವೇತನವನ್ನು ನೀಡಲು ಯೋಜಿಸುತ್ತಿದೆ. ಕಾರ್ಮಿಕ ಸಚಿವಾಲಯದಲ್ಲಿ ಈ ಯೋಜನೆಗೆ ಕ್ಷಿಪ್ರ ಮಂಥನ ನಡೆಯುತ್ತಿದೆ. ಇದಕ್ಕಾಗಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ) ಯಿಂದಲೂ ಸಹಾಯವನ್ನು ತೆಗೆದುಕೊಳ್ಳಲಾಗುವುದು ಎನ್ನಲಾಗುತ್ತಿದೆ, ಇದರಿಂದ ಈ ಯೋಜನೆಯನ್ನು ತಳಮಟ್ಟದಿಂದ ಅನುಷ್ಠಾನಗೊಳಿಸಲು ನೆರವಾಗಲಿದೆ ಎಂದು ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ-Electric Bill Saver: 333 ರೂ.ಬೆಲೆಯ ಈ ಉಪಕರಣದ ಅಳವಡಿಸಿ ವಿದ್ಯುತ್ ಉಚಿತವಾಗಿ ಬಳಸಿ!

ಈ ಯೋಜನೆ ರಾಜಕೀಯ ಪ್ರಭಾವ ಬೀರಲಿದೆ
ಕಾರ್ಮಿಕ ಸಚಿವಾಲಯವು ಈ ಯೋಜನೆಯ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡಿದ ನಂತರ ಅದರ ಪ್ರಯೋಜನಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳಲು ವರದಿಯನ್ನು ಸಿದ್ಧಪಡಿಸಲು ತನ್ನ ಅಧಿಕಾರಿಗಳಿಗೆ ಸೂಚಿಸಿದೆ. ಅಷ್ಟೇ ಅಲ್ಲ, ILO ಸದಸ್ಯರು ಈ ಯೋಜನೆಯನ್ನು ತ್ವರಿತವಾಗಿ ಮರುಸ್ಥಾಪಿಸಲು ಜೀವನ ವೇತನವನ್ನು ಅರ್ಥಮಾಡಿಕೊಳ್ಳಲು ವಿಶ್ವಸಂಸ್ಥೆಯ ಸಹಾಯವನ್ನು ಸಹ ಕೋರಿದ್ದಾರೆ. 2024ರಲ್ಲಿ ಚುನಾವಣೆ ನಡೆಯಲಿದ್ದು, ಆದಷ್ಟು ಬೇಗ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಬಯಸಿದೆ. ವಾಸ್ತವವಾಗಿ, ಕಾರ್ಮಿಕ ಸಚಿವಾಲಯವು ಜೀವನ ವೇತನವು ಭಾರತಕ್ಕೆ ಗೇಮ್ ಚೆಂಜರ್ ಎಂದು ಸಾಬೀತುಪಡಿಸುತ್ತದೆ ಮತ್ತು ಇದು ದೊಡ್ಡ ರಾಜಕೀಯ ಪರಿಣಾಮವನ್ನು ಸಹ ಬೀರಲಿದೆ ಎಂಬುದು ತಜ್ಞರ ಅಭಿಮತವಾಗಿದೆ.

ಇದನ್ನೂ ಓದಿ-PM Kisan: ದೇಶದ 12 ಕೋಟಿ ರೈತ ಬಾಂಧವರಿಗೆ ಹೊಸ ವರ್ಷದ ಉಡುಗೊರೆ, ಪ್ರಧಾನಿ ಮೋದಿ ಮಹತ್ವದ ಘೋಷಣೆ

ಕಾರ್ಮಿಕರಿಗೆ ಅವರ ಸಣ್ಣ ಅಗತ್ಯಗಳನ್ನು ಪೂರೈಸಲು ಜೀವನ ವೇತನವನ್ನು ನೀಡಲಾಗುತ್ತದೆ, ಆದರೆ ಕನಿಷ್ಠ ವೇತನವನ್ನು ಕಾನೂನಿನಿಂದ ನಿಗದಿಪಡಿಸಲಾಗಿದೆ, ಅಂದರೆ, ಕೆಲಸಕ್ಕೆ ಬದಲಾಗಿ ಆದಾಯದ ನಿಯಮವಿದೆ. ಪ್ರಸ್ತುತ ಭಾರತದಲ್ಲಿ ಕನಿಷ್ಠ ವೇತನ ರೂ.178 ಆಗಿದೆ ಎಂಬುದು ಇಲ್ಲಿ ಗಮನಾರ್ಹ. ಆದರೆ, ಜೀವನ ವೇತನದಿಂದ ಅದನ್ನು ಬದಲಾಯಿಸಿದರೆ, ಈ ಮೊತ್ತವು ಸುಮಾರು ಶೇ.25 ರಷ್ಟು ಹೆಚ್ಚಾಗಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News