Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...

ಹೆಚ್ಚಿನ ಜನರು ಈ ನೋಟುಗಳನ್ನು ಒಂದು ವಿಶಿಷ್ಟ ರೀತಿಯ ಕಾಗದದಿಂದ ತಯಾರಿಸಲಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಕಾಗದದ ನೋಟುಗಳು ದೀರ್ಘಕಾಲದ ಬಾಳಿಕೆಯನ್ನು ಹೊಂದಿರುವುದಿಲ್ಲ ಹೀಗಾಗಿ ನೋಟುಗಳ ತಯಾರಿಕೆಗೆ ಕಾಗದದ ಬದಲಾಗಿ ಹತ್ತಿಯನ್ನು ಬಳಸಲಾಗುತ್ತದೆ.

Written by - Bhavishya Shetty | Last Updated : May 2, 2022, 05:04 PM IST
  • ರೂಪಾಯಿ ನೋಟಿನ ಬಗ್ಗೆ ನಮಗೆಷ್ಟು ಗೊತ್ತಿದೆ
  • ನೋಟು ತಯಾರಾಗುವ ಬಗ್ಗೆ ಇಲ್ಲಿದೆ ಮಾಹಿತಿ
  • ಹತ್ತಿಯಿಂದ ತಯಾರಾಗುತ್ತದೆ ನೋಟುಗಳು
Knowledge News: ರೂಪಾಯಿ ನೋಟಿನ ಈ ವೈಶಿಷ್ಟ್ಯದ ನಿಮಗೆ ಗೊತ್ತಾ? ಇಲ್ಲಿದೆ ಟಾಪ್‌ ಸೀಕ್ರೆಟ್‌...   title=
Indian currency

ಪ್ರತೀದಿನ ನಾವು ಬಳಕೆ ಮಾಡುವ ರೂಪಾಯಿ ನೋಟಿನ ಬಗ್ಗೆ ನಮಗೆಷ್ಟು ಗೊತ್ತಿದೆ. ಮಾರುಕಟ್ಟೆಯಲ್ಲಿ ಏನಾದರೂ ಖರೀದಿಸಬೇಕಾದರೆ ದುಡ್ಡು ಅಗತ್ಯ. ಆದರೆ ಆ ನೋಟು ಹೇಗೆ ತಯಾರಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಈ ಹಿನ್ನೆಲೆಯಲ್ಲಿ ನೋಟು ತಯಾರಿಯ ಕುರಿತಾಗಿ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ. 

ಇದನ್ನು ಓದಿ: 109 ವರ್ಷಗಳ ಹಿಂದೆ ತಯಾರಾದ ಬಾಲಿವುಡ್ ಮೊದಲ ಚಲನಚಿತ್ರದ ಬಜೆಟ್ ಎಷ್ಟಿತ್ತು ಗೊತ್ತಾ?

ಹೆಚ್ಚಿನ ಜನರು ಈ ನೋಟುಗಳನ್ನು ಒಂದು ವಿಶಿಷ್ಟ ರೀತಿಯ ಕಾಗದದಿಂದ ತಯಾರಿಸಲಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ ನಿಮ್ಮ ಊಹೆ ತಪ್ಪು. ಕಾಗದದ ನೋಟುಗಳು ದೀರ್ಘಕಾಲದ ಬಾಳಿಕೆಯನ್ನು ಹೊಂದಿರುವುದಿಲ್ಲ ಹೀಗಾಗಿ ನೋಟುಗಳ ತಯಾರಿಕೆಗೆ ಕಾಗದದ ಬದಲಾಗಿ ಹತ್ತಿಯನ್ನು ಬಳಸಲಾಗುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ನೋಟುಗಳನ್ನು ಶೇ.100ರಷ್ಟು ಶುದ್ಧ ಹತ್ತಿಯಿಂದ ತಯಾರಿಸಲಾಗುತ್ತದೆ. ಇದೇ ಕಾರಣದಿಂದ ನೋಟುಗಳು ದೀರ್ಘ ಕಾಲ ಬಾಳುತ್ತವೆ. 

ಒಂದು ವೇಳೆ ನಿಮಗೂ ಕೂಡ ಯಾರಾದರು ನೋಟುಗಳನ್ನು ಯಾವುದರಿಂದ ತಯಾರಿಸಲಾಗಿದೆ ಎಂಬ ಪ್ರಶ್ನೆಯನ್ನು ಕೇಳಿದರೆ ಬಹುತೇಕ ಜನರ ಉತ್ತರ ಕಾಗದ ಆಗಿರುತ್ತದೆ. ಆದರೆ ನೋಟು ಕಾಗದದಿಂದ ಅಲ್ಲ, ಹತ್ತಿಯಿಂದ ತಯಾರಿಸಲಾಗುತ್ತದೆ ಎಂದರೆ ನಿಮಗೂ ಆಶ್ಚರ್ಯವಾಗಬಹುದು. ಇದರ ಹಿಂದೆ ಕಾರಣ ಕೂಡ ಇದೆ. ಹತ್ತಿ, ಕಾಗದದಕ್ಕಿಂತ ಗಟ್ಟಿಯಾಗಿರುತ್ತದೆ. ಹೀಗಾಗಿ ಅವು ಬೇಗನೆ ಹರಿಯುವುದಿಲ್ಲ. ಭಾರತ ಅಷ್ಟೇ ಅಲ್ಲ ಹಲವು ದೇಶಗಳಲ್ಲಿ ನೋಟುಗಳ ತಯಾರಿಕೆಗೆ ಹತ್ತಿಯನ್ನು ಬಳಸಲಾಗುತ್ತದೆ.

ನೋಟುಗಳ ತಯಾರಿಕೆಗೆ ಬಳಸುವ ವಸ್ತುಗಳಿವು: 
ಹತ್ತಿಯಲ್ಲಿ ಫೈಬರ್ ಲಿನೆನ್ ಎಂಬ ಫೈಬರ್ ಅಂಶವಿರುತ್ತದೆ. ಹತ್ತಿಯ ಜೊತೆಯಲ್ಲಿ, ಗ್ಯಾಟ್ಲಿನ್ ಹಾಗೂ ಅಡೆಸಿವ್ಸ್ ಹೆಸರಿನ ದ್ರಾವಣಗಳನ್ನು ನೋಟುಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಇವು ನೋಟುಗಳ ಬಾಳಿಕೆಯನ್ನು ಹೆಚ್ಚಿಸುತ್ತವೆ. ಭಾರತೀಯ ನೋಟುಗಳು ಅತ್ಯಂತ ಭದ್ರತಾ ಲಕ್ಷಣಗಳನ್ನು ಹೊಂದಿದ್ದು, ಈ ಕಾರಣದಿಂದಾಗಿ ನಕಲಿ ಅಥವಾ ವಂಚನೆಯ ನೋಟುಗಳ ಹರಿವನ್ನು ಸುಲಭವಾಗಿ ನಿಯಂತ್ರಿಸಬಹುದು. ಭಾರತೀಯ ನೋಟುಗಳ ವಿನ್ಯಾಸವನ್ನು ಕಾಲಕಾಲಕ್ಕೆ ಬದಲಾಯಿಸಲಾಗುತ್ತಿದೆ.

​ಇದನ್ನು ಓದಿ: Viral Video: ಮದುವೆ ಬಳಿಕ ಧೂಳನ್ನೂ ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ..!

ಹೊಸ ನೋಟುಗಳು ಮಾರುಕಟ್ಟೆ ಪ್ರವೇಶಿಸುವ ಬಗೆ: 
ಅಧಿಸೂಚನೆಯ ಸೆಕ್ಷನ್ 22ರ ಪ್ರಕಾರ, ನೋಟುಗಳನ್ನು ಜಾರಿಗೊಳಿಸುವ ಅಧಿಕಾರ ಕೇವಲ ರಿಸರ್ವ್ ಬ್ಯಾಂಕ್ (RBI) ಬಳಿ ಇದೆ. ರಿಸರ್ವ್ ಬ್ಯಾಂಕ್, ಕೇಂದ್ರ ಸರ್ಕಾರ ಹಾಗೂ ಇತರೆ ಹಿತರಕ್ಷಕರ ಜೊತೆಗೆ ಚರ್ಚಿಸಿ, ಒಂದು ವರ್ಷದಲ್ಲಿ ಮೌಲ್ಯವರ್ಗಕ್ಕೆ ಅನುಗುಣವಾಗಿ, ಅವಶ್ಯಕತೆ ಇರುವ ಬ್ಯಾಂಕಿನ ನೋಟುಗಳ ಅಂದಾಜು ಹಾಕಲಾಗುತ್ತದೆ ಹಾಗೂ ಬ್ಯಾಂಕ್ ನೋಟುಗಳ ಸರಬರಾಜಿಗೆ ವಿಭಿನ್ನ ಮುಖಬೆಲೆಯ ನೋಟುಗಳಿಗಾಗಿ ಪ್ರಿಂಟಿಂಗ್ ಪ್ರೆಸ್‌ಗೆ ಬೇಡಿಕೆ ಸಲ್ಲಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News