Jio Vs Airtel Vs VI: 500 ರೂ.ಗಿಂತ ಕಡಿಮೆ ಬೆಲೆಗೆ ಯಾವ ರಿಚಾರ್ಜ್ ಪ್ಲಾನ್ ಉತ್ತಮವಾಗಿದೆ ತಿಳಿಯಿರಿ

ರಿಲಯನ್ಸ್ ಜಿಯೋದ 499 ರೂ. ಪ್ಲಾನ್‌ನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇಲ್ಲಿ ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಪಡೆಯುತ್ತಾರೆ.

Written by - Puttaraj K Alur | Last Updated : Jan 10, 2022, 09:01 PM IST
  • ಜಿಯೋ ಇತ್ತೀಚೆಗೆ 499 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ
  • ಜಿಯೋ ಯೋಜನೆಯು ಏರ್‌ಟೆಲ್ ಮತ್ತು VIನ ಅಸ್ತಿತ್ವದಲ್ಲಿರುವ ಯೋಜನೆಗಳೊಂದಿಗೆ ಸ್ಪರ್ಧಿಸುತ್ತಿದೆ
  • 500 ರೂ.ಗಿಂತ ಕಡಿಮೆ ಬೆಲೆಯ ಪ್ಲಾನ್‌ನಲ್ಲಿ ಯಾರ ಪ್ಲಾನ್ ಉತ್ತಮವಾಗಿದೆ ಎಂದು ತಿಳಿಯಿರಿ
Jio Vs Airtel Vs VI: 500 ರೂ.ಗಿಂತ ಕಡಿಮೆ ಬೆಲೆಗೆ ಯಾವ ರಿಚಾರ್ಜ್ ಪ್ಲಾನ್ ಉತ್ತಮವಾಗಿದೆ ತಿಳಿಯಿರಿ title=
ಯಾರ ಪ್ಲಾನ್ ಉತ್ತಮವಾಗಿದೆ ಎಂದು ತಿಳಿಯಿರಿ

ನವದೆಹಲಿ: ರಿಲಯನ್ಸ್ ಜಿಯೋ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಪ್ರಿಪೇಯ್ಡ್ ಯೋಜನೆ(Jio Unlimited Plan)ಗಳ ಬೆಲೆಯನ್ನು ಹೆಚ್ಚಿಸಿದೆ. ಕಂಪನಿಯು ಅನಿಯಮಿತ ಯೋಜನೆ(Jio Unlimited Plan)ಗಳನ್ನು ಶೇ.20ವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ ಜಿಯೋದ ಅನಿಯಮಿತ ಯೋಜನೆಯು 91 ರೂ.ರಿಂದ ಪ್ರಾರಂಭವಾಗುತ್ತದೆ. ಜಿಯೋ ಕೆಲವು ದಿನಗಳ ಹಿಂದೆ 499 ರೂ. ಮಾಸಿಕ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ದಿನಕ್ಕೆ 2GB ಡೇಟಾವನ್ನು ನೀಡಲಾಗುತ್ತದೆ. ಜಿಯೋದ ಹೊಸ ಯೋಜನೆಯು ಏರ್‌ಟೆಲ್ ಮತ್ತು ವೊಡಾಫೋನ್-ಐಡಿಯಾದ ಅಸ್ತಿತ್ವದಲ್ಲಿರುವ ಯೋಜನೆಗಳೊಂದಿಗೆ ಸ್ಪರ್ಧಿಸುತ್ತಿದೆ. 3 ಕಂಪನಿಗಳ ಪ್ಲಾನ್‌ಗಳಲ್ಲಿ ಯಾವುದು ಉತ್ತಮ ಎಂದು ತಿಳಿದುಕೊಳ್ಳಿರಿ

ರಿಲಯನ್ಸ್ ಜಿಯೋದ 499 ರೂ. ಪ್ಲಾನ್

ರಿಲಯನ್ಸ್ ಜಿಯೋ(Jio Unlimited Plan)ದ 499 ರೂ. ಪ್ಲಾನ್‌ನಲ್ಲಿ ನಿಮಗೆ 28 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇಲ್ಲಿ ಬಳಕೆದಾರರು ದಿನಕ್ಕೆ 2GB ಡೇಟಾವನ್ನು ಪಡೆಯುತ್ತಾರೆ. ಇದರ ಹೊರತಾಗಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಲಭ್ಯವಿದೆ. ಇದರ ಜೊತೆಗೆ JioTV, JioCinema, JioNews, JioSecurity ಮತ್ತು JioCloudನ ಚಂದಾದಾರಿಕೆಯನ್ನು ಈ ಯೋಜನೆಯಲ್ಲಿ ಹೆಚ್ಚುವರಿ ಪ್ರಯೋಜನಗಳಡಿ ನೀಡಲಾಗಿದೆ. ಇದಲ್ಲದೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು 1 ವರ್ಷಕ್ಕೆ ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: Bank Strike : ಬ್ಯಾಂಕ್ ಯೂನಿಯನ್ ಮುಷ್ಕರ! ಸರ್ಕಾರಿ - ಖಾಸಗಿ ಬ್ಯಾಂಕ್‌ ಎರಡು ದಿನ ಬಂದ್!

ಏರ್‌ಟೆಲ್‌ನ 479 ರೂ. ಪ್ಲಾನ್

ಏರ್‌ಟೆಲ್‌ನ 479 ರೂ.ಗಳ ಯೋಜನೆಯು ಪ್ಲಾನ್(Airtel Recharge Plan) ವ್ಯಾಲಿಡಿಟಿ ವಿಷಯದಲ್ಲಿ ಜಿಯೋಗಿಂತ ಉತ್ತಮವಾಗಿದೆ. ಯೋಜನೆಯೊಂದಿಗೆ 56 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಇದಲ್ಲದೆ ಬಳಕೆದಾರರು 56 ದಿನಗಳವರೆಗೆ ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ. ಇದಲ್ಲದೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಲಭ್ಯವಿದೆ. ಇತರ ಪ್ರಯೋಜನಗಳ ಕುರಿತು ಹೇಳಬೇಕೆಂದರೆ ಈ ಯೋಜನೆಯಡಿ 30 ದಿನಗಳವರೆಗೆ ಅಮೆಜಾನ್ ಪ್ರೈಮ್ ವೀಡಿಯೊ ಮೊಬೈಲ್ ಆವೃತ್ತಿಯ ಚಂದಾದಾರಿಕೆ ಉಚಿತವಾಗಿರುತ್ತದೆ. ಅಪೊಲೊ 24|7 ಸರ್ಕಲ್‌ನಿಂದ 100 ರೂ. ಕ್ಯಾಶ್‌ಬ್ಯಾಕ್, Shaw Academy, ಫಾಸ್ಟ್ ಟ್ಯಾಗ್, ಉಚಿತ ಹೆಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್ ಗೆ ಉಚಿತ ಪ್ರವೇಶವಿರುತ್ತದೆ.

Vodafone-Ideaದ 479 ರೂ. ಪ್ಲಾನ್

ವೊಡಾಫೋನ್-ಐಡಿಯಾ(VI Recharge Plan)ದ 479 ರೂ. ಯೋಜನೆಯಲ್ಲಿ 56 ದಿನಗಳ ವ್ಯಾಲಿಡಿಟಿ ಲಭ್ಯವಿದೆ. ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಲಭ್ಯವಿದೆ. ಇದರ ಹೊರತಾಗಿ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು 100 SMS ಪ್ರತಿದಿನ ಲಭ್ಯವಿರುತ್ತದೆ. ವಾರಾಂತ್ಯದ ಡೇಟಾ ರೋಲ್‌ಓವರ್, ಎಲ್ಲಾ ರಾತ್ರಿಯ ಡೇಟಾ ಮತ್ತು Vi ಸಿನಿಮಾ ಮತ್ತು ಟಿವಿ ಪ್ರವೇಶವನ್ನು ಈ ಯೋಜನೆಯಲ್ಲಿ ಒದಗಿಸಲಾಗಿದೆ.

ಇದನ್ನೂ ಓದಿ: Tax Saving Tips : ಹೆಚ್ಚಿನ ತೆರಿಗೆ ಉಳಿತಾಯಕ್ಕಾಗಿ ಈ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News