IT Firm: ತನ್ನ ನೌಕರರಿಗೆ ಕೋಟ್ಯಾಂತರ ಮೌಲ್ಯದ ಕಾರ್ ಗಿಫ್ಟ್ ನೀಡಿದ IT ಕಂಪನಿ

IT Firm Gifts BMW Car - ತನ್ನ ಉದ್ಯೋಗಿಗಳ ಪ್ರಾಮಾಣಿಕತೆಯನ್ನು ಕಂಡು ಐಟಿ ಕಂಪನಿಯೊಂದು BMW ಕಾರನ್ನು ಉಡುಗೊರೆಯಾಗಿ ನೀಡಿದೆ. ಕುಟುಂಬದವರ ಸಮ್ಮುಖದಲ್ಲಿ ಸನ್ಮಾನಿಸಿ ಕಾರಿನ ಕೀ ಹಸ್ತಾಂತರಿಸಲಾಗಿದೆ.  

Written by - Nitin Tabib | Last Updated : Apr 10, 2022, 08:40 PM IST
  • ನೌಕರರಿಗೆ ಕೋಟ್ಯಾಂತರ ಮೌಲ್ಯದ ಕಾರ್ ನೀಡಿದ (Gift To Employees) ಕಂಪನಿ
  • ಉಡುಗೊರೆಯ ರೂಪದಲ್ಲಿ BMW ಕಾರ್
  • ಪ್ರಾಮಾಣಿಕತೆಗೆ ನೀಡಿದ ಉಡುಗೊರೆ
IT Firm: ತನ್ನ ನೌಕರರಿಗೆ ಕೋಟ್ಯಾಂತರ ಮೌಲ್ಯದ ಕಾರ್ ಗಿಫ್ಟ್ ನೀಡಿದ IT ಕಂಪನಿ title=
It Firm Gifts BMW Car To Its Employees

ನವದೆಹಲಿ: ಭಾರತದಲ್ಲಿ ಕೆಲವೇ ಕೆಲವು ಕಂಪನಿಗಳು ಮಾತ್ರ ತಮ್ಮ ಉದ್ಯೋಗಿಗಳ ನಿಷ್ಠೆಗೆ ಕೃತಜ್ಞತೆ ಸಲ್ಲಿಸುವುದಲ್ಲದೆ, ಅದಕ್ಕಾಗಿ ಅವರಿಗೆ ಉಡುಗೊರೆಗಳನ್ನು ಸಹ ನೀಡುತ್ತವೆ. ಅಂತಹ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಕೋಟ್ಯಂತರ ಮೌಲ್ಯದ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

ಉಡುಗೊರೆಯ ರೂಪದಲ್ಲಿ ಬಿಎಂಡಬ್ಲ್ಯು ಕಾರು
ಚೆನ್ನೈ ಮೂಲದ ಐಟಿ ಸಂಸ್ಥೆಯೊಂದು ತನ್ನ ಉದ್ಯೋಗಿಗಳ ಪ್ರಾಮಾಣಿಕತೆಗಾಗಿ BMW ಕಾರನ್ನು ಉಡುಗೊರೆಯಾಗಿ ನೀಡಿದೆ. ಈ ಸಾಫ್ಟ್‌ವೇರ್ ಸಂಸ್ಥೆಯು 5 ಉದ್ಯೋಗಿಗಳಿಗೆ ಕಾರನ್ನು (BMW Car) ಉಡುಗೊರೆಯಾಗಿ ನೀಡಿದೆ. ಜಾಗತಿಕ ಸಾಫ್ಟ್‌ವೇರ್ ಕಂಪನಿ ಕಿಸ್‌ಫ್ಲೋ ಇಂಕ್ ಈ ಉಡುಗೊರೆಯನ್ನು ತನ್ನ ಉದ್ಯೋಗಿಗಳಿಗೆ ನೀಡಿದೆ.

ಪ್ರಾಮಾಣಿಕತೆಗೆ ಗೌರವ
ಉದ್ಯೋಗಿಗಳ ಪ್ರಾಮಾಣಿಕತೆಯನ್ನು (Employees Loyalty) ಗುರುತಿಸಿ ಕಂಪನಿಯು ಒಂದು ಕೋಟಿ ರೂಪಾಯಿ ಮೌಲ್ಯದ ಕಾರು ನೀಡಿ ಅವರನ್ನು ಗೌರವಿಸಿದೆ. ಕಾರನ್ನು ಉಡುಗೊರೆಯಾಗಿ ನೀಡುವ ಕೆಲವು ಗಂಟೆಗಳ ಮೊದಲು ಉದ್ಯೋಗಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಐವರು ಉದ್ಯೋಗಿಗಳನ್ನು ಶ್ಲಾಘಿಸಿದ ಕಿಸ್‌ಫ್ಲೋ (Kissflow Inc) ಇಂಕ್‌ನ CEO ಸುರೇಶ್ ಸಂಬಂಧಮ್ ಅವರು, ಕೋವಿಡ್ ಸಾಂಕ್ರಾಮಿಕ (Covid Pandemic) ಸಮಯದಲ್ಲಿಯೂ ಈ ಜನರು ನಮ್ಮೊಂದಿಗೆ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ ಮತ್ತು ಕಂಪನಿಯನ್ನು ಬೆಂಬಲಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Business Idea: ಸ್ವಂತ ವ್ಯವಹಾರ ಆರಂಭಿಸಿ ಕೈತುಂಬಾ ಹಣಗಳಿಕೆ ಮಾಡಬೇಕೆ? ಇಲ್ಲಿದೆ ಹೊಚ್ಚ ಹೊಸ ಬಿಸಿನೆಸ್ ಐಡಿಯಾ

ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕೀ ಹಸ್ತಾಂತರ
ಐವರು ಉದ್ಯೋಗಿಗಳ ಕುಟುಂಬ ಸದಸ್ಯರ  ಸಮ್ಮುಖದಲ್ಲಿಯೇ BMW 530D ಕಾರಿನ ಕೀಗಳನ್ನು (BMW 530D Car Keys) ಉದ್ಯೋಗಿಗಳಿಗೆ ಹಸ್ತಾಂತರಿಸಲಾಗಿದೆ. India.com ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕಂಪನಿಯು ತನ್ನ ಉದ್ಯೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತದೆ ಮತ್ತು ಯಾವಾಗಲೂ ಉತ್ತಮ ಕೆಲಸ ಮಾಡಲು ಅವರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತದೆ. ಇನ್ನು ಕೆಲವು ಉದ್ಯೋಗಿಗಳಿಗೆ BMW 6 Series Car ಗಳನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-Ration Card: ಪಡಿತರ ಚೀಟಿ ಧಾರಕರಿಗೊಂದು ಮಹತ್ವದ ಮಾಹಿತಿ ಪ್ರಕಟ, ತಪ್ಪದೆ ತಿಳಿದುಕೊಳ್ಳಿ

ಉದ್ಯೋಗಿಗಳಿಗೆ ಆಶ್ಚರ್ಯ
ನೌಕರರು ಕಂಪನಿಯ ವತಿಯಿಂದ ಇಷ್ಟು ದೊಡ್ಡ ಮೊತ್ತದ ಉಡುಗೊರೆಯನ್ನು ನಿರೀಕ್ಷಿಸಿರಲಿಲ್ಲ. ಹೆಡ್ ಜೊತೆಗೆ ಲಂಚ್ ಅಥವಾ ದಿನ್ನಾರ್ ಎಂದು ಕೆಲವು ಉದ್ಯೋಗಿಗಳು ಭಾವಿಸಿದ್ದರು. ಕಂಪನಿಯು ತನ್ನ ಉದ್ಯೋಗಿಗಳು ಮತ್ತು ಅವರ ಕುಟುಂಬ ಸದಸ್ಯರ ಜೊತೆಗೆ ವಿಭಿನ್ನ ರೀತಿಯಲ್ಲಿ ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಿ ದಿನವನ್ನು ವಿಶೇಷವಾಗಿಸಿದೆ.

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News