Ration Card: ಪಡಿತರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ? ಚಿಟಿಕೆಯಲ್ಲಿ ಹೀಗೆ ಚೆಕ್ ಮಾಡಿ

Ration Card: ಹಲವು ಬಾರಿ ಕಾರಣಾಂತರಗಳಿಂದ ಪಡಿತರ ಪಟ್ಟಿಯಿಂದ ಹೆಸರು ಕೈಬಿಡಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ನಾನಾ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಪಡಿತರ ಚೀಟಿಯ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆಯಲಾಗಿದೆ ಎಂಬುದೇ ನಿಮಗೆ ತಿಳಿದಿಲ್ಲದಿದ್ದರೆ ಮುಂದೇನು ಮಾಡಬೇಕು ಎಂಬುದೇ ಅರ್ಥವಾಗುವುದಿಲ್ಲ. ಆದರೆ, ಚಿಂತೆಬಿಡಿ ಮನೆಯಲ್ಲಿ ಕುಳಿತು ಪಡಿತರ ಚೀಟಿಯಲ್ಲಿ ಹೆಸರನ್ನು ಹೇಗೆ ಪರಿಶೀಲಿಸುವುದು ಎಂದು ಇಂದು ನಾವು ನಿಮಗೆ ಹೇಳಲಿದ್ದೇವೆ. 

Written by - Yashaswini V | Last Updated : Jan 6, 2022, 08:04 AM IST
  • ನಾಗರಿಕರಿಗೆ ನೀಡುವ ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದು
  • ಅನೇಕ ರಾಜ್ಯಗಳಲ್ಲಿ ಉಚಿತ ಪಡಿತರ ಲಭ್ಯವಿದೆ
  • ನೀವು ಈ ರೀತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು
Ration Card: ಪಡಿತರ ಪಟ್ಟಿಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ? ಚಿಟಿಕೆಯಲ್ಲಿ ಹೀಗೆ ಚೆಕ್ ಮಾಡಿ  title=
How to check name in Ration card

Ration Card: ಪಡಿತರ ಚೀಟಿಯು (Ration Card) ನಾಗರಿಕರಿಗೆ ಸರ್ಕಾರ ನೀಡುವ ಪ್ರಮುಖ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಬಡವರಿಗೆ ಸಬ್ಸಿಡಿ ಪಡಿತರವನ್ನು ಒದಗಿಸುವುದು ಮಾತ್ರವಲ್ಲದೆ, ಇದನ್ನು ಗುರುತಿನ ಚೀಟಿ ಆಗಿಯೂ ಸಹ ಬಳಸಲಾಗುತ್ತದೆ. ಇದನ್ನು ಪೌರತ್ವದ ಪುರಾವೆ, ವಿಳಾಸ ಪುರಾವೆಗಾಗಿಯೂ ಬಳಸಲಾಗುತ್ತದೆ. ಪಡಿತರ ಚೀಟಿದಾರರಿಗೆ ಗೋಧಿ, ಸಕ್ಕರೆ, ಅಕ್ಕಿ, ಸೀಮೆಎಣ್ಣೆ ಇತ್ಯಾದಿಗಳ ಖರೀದಿಯಲ್ಲಿ ರಿಯಾಯಿತಿ ಸಿಗುತ್ತದೆ. 

ಹಲವೆಡೆ ಪಡಿತರ ಚೀಟಿ ಬಳಕೆ:
ಅಷ್ಟೇ ಅಲ್ಲ, ಜನ್ ಧನ್ ಖಾತೆ (Jan Dhan Account) ತೆರೆಯುವುದರಿಂದ ಹಿಡಿದು ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ. ಯಾರಾದರೂ ಆಧಾರ್ ಕಾರ್ಡ್ ಹೊಂದಿಲ್ಲದಿದ್ದರೆ, ಅವರು ಅನೇಕ ಸ್ಥಳಗಳಲ್ಲಿ ಪಡಿತರ ಚೀಟಿಯನ್ನು ಗುರುತಿನ ದಾಖಲೆಯಾಗಿ ಬಳಸಬಹುದು. ಆದರೆ, ಹಲವು ಬಾರಿ ಕಾರಣಾಂತರಗಳಿಂದ ಪಡಿತರ ಪಟ್ಟಿಯಿಂದ ಹೆಸರು ಕೈಬಿಡಲಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ನಾನಾ ಸಮಸ್ಯೆ ಎದುರಿಸಬೇಕಾಗುತ್ತದೆ. ಅದರಲ್ಲೂ ಪಡಿತರ ಚೀಟಿಯ ಪಟ್ಟಿಯಿಂದ ನಿಮ್ಮ ಹೆಸರನ್ನು ತೆಗೆಯಲಾಗಿದೆ ಎಂಬುದೇ ನಿಮಗೆ ತಿಳಿದಿಲ್ಲದಿದ್ದರೆ ಮುಂದೇನು ಮಾಡಬೇಕು ಎಂಬುದೇ ಅರ್ಥವಾಗುವುದಿಲ್ಲ. 

ಇದನ್ನೂ ಓದಿ-  LPG Gas Cylinder: ಕೇವಲ 634 ರೂ.ಗೆ LPG ಗ್ಯಾಸ್ ಸಿಲಿಂಡರ್ ಸಿಗುತ್ತೆ! ಹೇಗೆಂದು ತಿಳಿಯಿರಿ

ಈ ಪರಿಸ್ಥಿತಿಯಲ್ಲಿ ನೀವು ಚಿಂತಿಸಬೇಕಿಲ್ಲ, ಬದಲಿಗೆ ಮನೆಯಲ್ಲಿ ಕುಳಿತು ಪಡಿತರ ಚೀಟಿಯಲ್ಲಿ (Ration Card) ಹೆಸರನ್ನು ಹೇಗೆ ಪರಿಶೀಲಿಸುವುದು ಎಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಇದಕ್ಕಾಗಿ ನೀವು ಮೊದಲು NFSA ನ ವೆಬ್‌ಸೈಟ್‌ಗೆ ಹೋಗಬೇಕು.

ಇದನ್ನೂ ಓದಿ-  ಹೊಸ ವರ್ಷಕ್ಕೆ ನಿಮ್ಮ ಮಗುವಿಗೆ LICಯ ಈ ವಿಶೇಷ ಪಾಲಿಸಿಯನ್ನು ಉಡುಗೊರೆಯಾಗಿ ನೀಡಿ!

ಈ ರೀತಿಯ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಿ:
>> ಪಡಿತರ ಚೀಟಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಕಡಿತಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು, ನೀವು ಅದರ ಅಧಿಕೃತ ವೆಬ್‌ಸೈಟ್ https://nfsa.gov.in/Default.aspx ಗೆ ಭೇಟಿ ನೀಡಬೇಕು .
>> ಇದರ ನಂತರ ನೀವು ಪಡಿತರ ಚೀಟಿಯ ಆಯ್ಕೆಯನ್ನು ಆರಿಸಿಕೊಳ್ಳುತ್ತೀರಿ.
>> ಈಗ ನೀವು ರಾಜ್ಯ ಪೋರ್ಟಲ್‌ಗಳಲ್ಲಿ ರೇಷನ್ ಕಾರ್ಡ್ ವಿವರಗಳೊಂದಿಗೆ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
>> ಅದರ ನಂತರ ನೀವು ಅದರಲ್ಲಿ ನಿಮ್ಮ ರಾಜ್ಯ ಮತ್ತು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಬೇಕು.
>> ಜಿಲ್ಲೆಯ ನಂತರ ನೀವು ನಿಮ್ಮ ಬ್ಲಾಕ್ನ ಹೆಸರನ್ನು ನಮೂದಿಸಬೇಕು, ನಂತರ ಪಂಚಾಯತ್ ಹೆಸರನ್ನು ಆಯ್ಕೆ ಮಾಡಿ.
>> ಈಗ ಇಲ್ಲಿ ನೀವು ನಿಮ್ಮ ಪಡಿತರ ಅಂಗಡಿಯ ಮಾಲೀಕರ ಹೆಸರು ಮತ್ತು ಪಡಿತರ ಚೀಟಿಯ ಪ್ರಕಾರವನ್ನು ಆಯ್ಕೆ ಮಾಡಿ.
>> ಇದಾದ ನಂತರ ಪಡಿತರ ಚೀಟಿ ಹೊಂದಿರುವವರ ಹೆಸರುಗಳ ಪಟ್ಟಿ ನಿಮ್ಮ ಮುಂದೆ ಬರುತ್ತದೆ. ನಂತರ ನೀವು ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು.
>> ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಪಡಿತರ ಚೀಟಿಯಿಂದ ನಿಮ್ಮ ಹೆಸರು ಕೈಬಿಡಲಾಗಿಲ್ಲ ಎಂದರ್ಥ. ನೀವು ಈ ಪಟ್ಟಿಯನ್ನು ಡೌನ್‌ಲೋಡ್ ಸಹ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News