ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯುವುದರ ಜೊತೆಗೆ ತಮ್ಮ ಹಣವೂ ಸುರಕ್ಷಿತವಾಗಿರಬೇಕು ಎಂದು ಬಯಸುತ್ತಾರೆ . FD ಮೇಲಿನ ಬಡ್ಡಿದರಗಳು ಕಳೆದ ಕೆಲವು ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದ ನಂತರ ಇದೀಗ ಮತ್ತೆ ಚೇತರಿಸಿಕೊಂಡಿದ್ದು, ಹೂಡಿಕೆದಾರರು ತುಂಬಾ ಸಂತಸಗೊಂಡಿದ್ದಾರೆ (Business News In Kannada). ವಾಸ್ತವದಲ್ಲಿ, FD ರಿಟರ್ನ್ಸ್ ಉನ್ನತ ಮಟ್ಟವನ್ನು ತಲುಪಿದ ನಂತರ ಹೂಡಿಕೆದಾರರು ಸಂತಸಗೊಂಡಿದ್ದಾರೆ. ದೊಡ್ಡ ಬ್ಯಾಂಕ್‌ಗಳು ವಿವಿಧ ಅವಧಿಯ FD ಗಳ ಮೇಲೆ 7.5% ಬಡ್ಡಿದರವನ್ನು ನೀಡುತ್ತಿವೆ. ಇದಲ್ಲದೆ, ಕೆಲವು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಶೇ. 9 ರಷ್ಟು ಬಡ್ಡಿದರವನ್ನು ನೀಡುತ್ತಿವೆ.
ಕಳೆದ ಒಂದು ವರ್ಷದಲ್ಲಿ FD ಬಡ್ಡಿದರಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಇದರ ಹೊರತಾಗಿ, ನಿಮಗೆ ಉತ್ತಮ ಆದಾಯವನ್ನು ನೀಡುವ ಕೆಲವು ಹೂಡಿಕೆ ಆಯ್ಕೆಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಅಂತಹ ನಾಲ್ಕು ಹೂಡಿಕೆ ಆಯ್ಕೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
ಅಂಚೆ ಕಛೇರಿಯಲ್ಲಿ 5 ವರ್ಷಗಳ FD
ಪೋಸ್ಟ್ ಆಫೀಸ್ ಎಫ್‌ಡಿ (ಪಿಒಟಿಡಿ) ಸ್ಥಿರ ಆದಾಯವನ್ನು ಬಯಸುವವರಿಗೆ ಬ್ಯಾಂಕ್ ಎಫ್‌ಡಿಗೆ ಪರ್ಯಾಯವಾಗಿದೆ. ಇದು FD ಗಿಂತ ಸುರಕ್ಷಿತವಾಗಿದೆ. ಇಲ್ಲಿ ನೀವು ಒಂದು, ಎರಡು, ಮೂರು ಮತ್ತು ಐದು ವರ್ಷಗಳ ಆಯ್ಕೆಯನ್ನು ಪಡೆಯುತ್ತೀರಿ. ನೀವು ಯಾವುದೇ ಅಂಚೆ ಕಚೇರಿಯಲ್ಲಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಬಹುದು. ಇಲ್ಲಿ FD ಗಾಗಿ ಕನಿಷ್ಠ ಹೂಡಿಕೆ ರೂ 200 ರಿಂದ ಆರಂಭವಾಗಬೇಕು ಮತ್ತು ನಂತರ ಮೊತ್ತವು ರೂ 200 ರ ಗುಣಕಗಳಲ್ಲಿರಬೇಕು. ಜುಲೈ-ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ, 5 ವರ್ಷಗಳ ಪೋಸ್ಟ್ ಆಫೀಸ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವು 7.5% ಆಗಿದೆ.
ಐದು ವರ್ಷಗಳ ಎನ್ಎಸ್ಸಿ
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ನೀವು ಈ ಯೋಜನೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಇಲ್ಲಿ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ ಆದರೆ ಮರುಹೂಡಿಕೆ ಮಾಡಲಾಗುತ್ತದೆ. ಜುಲೈ-ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ 5 ವರ್ಷಗಳ ಪೋಸ್ಟ್ ಆಫೀಸ್ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರವು 7.7% ಆಗಿದೆ.
ಇದನ್ನೂ ಓದಿ-ದೇಶಾದ್ಯಂತ ಇರುವ ಲಕ್ಷಾಂತರ ಎಲ್ಐಸಿ ಏಜೆಂಟ್ ಹಾಗೂ ನೌಕರರಿಗೆ ಭಾರಿ ಸಂತಸಸ ಸುದ್ದಿ ಪ್ರಕಟಿಸಿದ ಮೋದಿ ಸರ್ಕಾರ!
RBI ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್
RBI ಉಳಿತಾಯ ಬಾಂಡ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಕ್ಕೆ (NSC) ಲಿಂಕ್ ಆಗಿದೆ. RBI ಫ್ಲೋಟಿಂಗ್ ರೇಟ್ ಸೇವಿಂಗ್ಸ್ ಬಾಂಡ್ ಮೇಲಿನ ಬಡ್ಡಿ ದರವು NSC ಯ ಬಡ್ಡಿ ದರಕ್ಕಿಂತ 0.35% ಹೆಚ್ಚಾಗಿದೆ. NSC ಬಡ್ಡಿ ದರದಲ್ಲಿನ ಯಾವುದೇ ಬದಲಾವಣೆಯು RBI ಉಳಿತಾಯ ಬಾಂಡ್‌ಗಳ ಮೇಲಿನ ಬಡ್ಡಿ ದರದಲ್ಲಿ ಪ್ರತಿಫಲಿಸುತ್ತದೆ. ಪ್ರಸ್ತುತ NSC ಬಡ್ಡಿ ದರವನ್ನು 0.35% ಹೆಚ್ಚಿಸಿದರೆ, ಅದು 8.05% ಆಗುತ್ತದೆ. ಆರ್‌ಬಿಐ ಉಳಿತಾಯ ಬಾಂಡ್ ಮೇಲಿನ ಬಡ್ಡಿ ದರವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲಿಸುತ್ತದೆ. ಈ ಬಾಂಡ್‌ಗಳಲ್ಲಿ ಕನಿಷ್ಠ ಹೂಡಿಕೆಯು ರೂ 1,000 ರಿಂದ ಪ್ರಾರಂಭವಾಗುತ್ತದೆ.
ಇದನ್ನೂ ಓದಿ-ಕೇವಲ 25 ಸಾವಿರ ರೂ.ಗಳ ಆರಂಭಿಕ ಹೂಡಿಕೆಯಿಂದ ಈ ಉದ್ಯಮ ಆರಂಭಿಸಿ, 70 ಲಕ್ಷಕ್ಕೂ ಅಧಿಕ ಸಂಪಾದಿಸಬಹುದು!
ಹಿರಿಯ ನಾಗರಿಕ ಉಳಿತಾಯ ಯೋಜನೆ (SCSS)
ಹಿರಿಯ ನಾಗರಿಕರು ಅಥವಾ VRS ತೆಗೆದುಕೊಳ್ಳುವ ಜನರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಅಂಚೆ ಕಛೇರಿ ಅಥವಾ ಬ್ಯಾಂಕ್‌ನಿಂದ SCSS ನ ಪ್ರಯೋಜನವನ್ನು ಪಡೆಯಬಹುದು. SCSS ನ ಅವಧಿ ಐದು ವರ್ಷಗಳು. ಪಕ್ವತೆಯ ನಂತರ ಅದನ್ನು ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಇದರ ಮೇಲೆ ಬಡ್ಡಿಯನ್ನು ಪಡೆಯಲಾಗುತ್ತದೆ ಮತ್ತು ಇದು ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ. ಇದರಲ್ಲಿ ಕನಿಷ್ಠ ಹೂಡಿಕೆ ಮಿತಿ 1,000 ಮತ್ತು ಗರಿಷ್ಠ 30 ಲಕ್ಷ ರೂ.ಗಳಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ