Aadhaar Card- ಆಧಾರ್ ಕಾರ್ಡ್‌ನ ಫೋಟೋಕಾಪಿ ಯಾರಿಗಾದರೂ ನೀಡಿದ್ದೀರಾ? ಜಾಗರೂಕರಾಗಿರಿ!

Aadhaar Card Status: ಪ್ರಸ್ತುತ ಹಲವು ಕಡೆ ಆಧಾರ್ ಕಾರ್ಡ್ ಬಳಸಲಾಗುತ್ತಿದೆ. ಹೀಗಿರುವಾಗ ಯಾರಾದರೂ ನಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆ ಜನರಲ್ಲಿ ಮೂಡುವುದು  ಸಹಜ.

Written by - Yashaswini V | Last Updated : Jun 28, 2022, 11:52 AM IST
  • ಆಧಾರ್ ಕಾರ್ಡ್ ಈಗ ಜೀವನದ ಪ್ರಮುಖ ಭಾಗವಾಗಿದೆ.
  • ನೀವು ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ನೀಡಿದರೆ ಅಥವಾ ಆಧಾರ್ ಸಂಖ್ಯೆಯನ್ನು ಯಾರಿಗಾದರು ಹೇಳಿದರೆ ಅದನ್ನು ದುರುಪಯೋಗ ಪಡಿಸಿಕೊಳ್ಳಬಹುದೇ?

    ನೀವು ಎಂದಾದರು ಈ ರೀತಿ ಯೋಚಿಸಿದ್ದೀರಾ...?
Aadhaar Card- ಆಧಾರ್ ಕಾರ್ಡ್‌ನ ಫೋಟೋಕಾಪಿ ಯಾರಿಗಾದರೂ ನೀಡಿದ್ದೀರಾ? ಜಾಗರೂಕರಾಗಿರಿ! title=
Aadhar card

ಆಧಾರ್ ಕಾರ್ಡ್ :  ಪ್ರಸ್ತುತ, ಆಧಾರ್ ಕಾರ್ಡ್ ಅಂತಹ  ಒಂದು ಪ್ರಮುಖ ದಾಖಲೆ ಆಗಿದ್ದು ಅದು ಪ್ರತಿಯೊಂದು ಪ್ರಮುಖ ಕೆಲಸಕ್ಕೂ ಅಗತ್ಯವಾಗಿರುತ್ತದೆ. ಆಧಾರ್ ಕಾರ್ಡ್ ಇಲ್ಲದೆ, ಅನೇಕ ಸರ್ಕಾರಿ ಯೋಜನೆಗಳ ಪ್ರಯೋಜನಗಳು ಸಹ ಲಭ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ನಿಮ್ಮ ಗುರುತನ್ನು ನೋಂದಾಯಿಸಲು, ಆಧಾರ್ ಕಾರ್ಡ್ ಅನ್ನು ಅಗತ್ಯವಿರುವ ಪ್ರತಿಯೊಂದು ಸ್ಥಳದಲ್ಲಿ ತೋರಿಸಬೇಕಾಗಿದೆ. ಆಧಾರ್ ಕಾರ್ಡ್ ಈಗ ಜೀವನದ ಪ್ರಮುಖ ಭಾಗವಾಗಿದೆ. ಆದರೆ ನಿಮ್ಮ ಗುರುತನ್ನು ಸಾಬೀತುಪಡಿಸಲು ನೀವು ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ನೀಡಿದರೆ ಅಥವಾ ನಿಮ್ಮ ಆಧಾರ್ ಸಂಖ್ಯೆಯನ್ನು ಹೇಳಿದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದೇ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು, ಸಿಮ್ ಪಡೆಯಲು, ಟಿಕೆಟ್ ಕಾಯ್ದಿರಿಸಲು, ಯಾವುದೇ ಸರ್ಕಾರಿ ಸೇವೆಗೆ, ಹೋಟೆಲ್‌ಗಳಲ್ಲಿ ಉಳಿಯಲು, ಉದ್ಯೋಗಕ್ಕೆ  ಸೇರಲು ಹೀಗೆ ಹಲವೆಡೆ ಆಧಾರ್ ಅನ್ನು ಬಳಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಆಧಾರ್ ಸಂಖ್ಯೆಯನ್ನು ಅನೇಕ ಏಜೆಂಟರಿಗೆ ನೀಡುತ್ತಾರೆ. ಇದರೊಂದಿಗೆ ಕೆಲವೊಮ್ಮೆ ಆಧಾರ್ ಕಾರ್ಡ್ ನ ಫೋಟೊಕಾಪಿ ಕೂಡ ನೀಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವರು ಆಧಾರ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯವೂ ಇದೆ. ಆದರೆ, ಕೇವಲ ಆಧಾರ್ ಸಂಖ್ಯೆಯನ್ನು ಮಾತ್ರ ನೀಡುವುದರಿಂದ ಅದನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಿಲ್ಲ. 

ಇದನ್ನೂ ಓದಿ- ಯುಐಡಿಎಐನಿಂದ ಲಭ್ಯವಿರುವ ವಿವಿಧ ಬಗೆಯ ಆಧಾರ್ ಕಾರ್ಡ್‌ಗಳ ಮಹತ್ವ

ಆಧಾರ್ ಒದಗಿಸುವ ಯುಐಡಿಎಐ ಪ್ರಕಾರ, ನಿಮ್ಮ ಆಧಾರ್ ಸಂಖ್ಯೆಯನ್ನು ತಿಳಿದುಕೊಳ್ಳುವುದರಿಂದ ಯಾರೂ ನಿಮಗೆ ಹಾನಿ ಮಾಡಲಾರರು. ಇದು ಪಾಸ್‌ಪೋರ್ಟ್, ವೋಟರ್ ಐಡಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಂತಹ ಯಾವುದೇ ಗುರುತಿನ ದಾಖಲೆಯಂತೆ, ನೀವು ಸೇವಾ ಪೂರೈಕೆದಾರರೊಂದಿಗೆ ಹಲವು ವರ್ಷಗಳಿಂದ ಬಳಸುತ್ತಿರುವಿರಿ. ಬದಲಿಗೆ ಆಧಾರ್ ಕಾರ್ಡ್ ಅನ್ನು ಗುರುತಿಸಲು ತಕ್ಷಣವೇ ಪರಿಶೀಲಿಸಬಹುದಾಗಿದೆ ಮತ್ತು ಆದ್ದರಿಂದ ಹೆಚ್ಚು ವಿಶ್ವಾಸಾರ್ಹವಾಗಿದೆ. 

ಆಧಾರ್ ಕಾಯಿದೆ 2016 ರ ಪ್ರಕಾರ, ಆಧಾರ್ ಕಾರ್ಡ್ ಅನ್ನು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಅಥವಾ ಆಫ್‌ಲೈನ್ ಪರಿಶೀಲನೆಯಲ್ಲಿ ದೃಢೀಕರಿಸಬಹುದು. ಪರಿಶೀಲನೆಯನ್ನು ಫಿಂಗರ್‌ಪ್ರಿಂಟ್, ಐರಿಸ್ ಸ್ಕ್ಯಾನ್, OTP ದೃಢೀಕರಣ ಮತ್ತು QR ಕೋಡ್ ಇತ್ಯಾದಿಗಳ ಮೂಲಕ ಮಾಡಲಾಗುತ್ತದೆ.
 
ಇದನ್ನೂ ಓದಿ- 
PAN-Aadhaar Linking: ಪ್ಯಾನ್-ಆಧಾರ್‌ಗೆ ಸಂಬಂಧಿಸಿದ ಈ ಕೆಲಸವನ್ನು ಈಗಲೇ ಮಾಡಿ ಇಲ್ಲವೇ ಭಾರೀ ದಂಡ

ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಗುರುತನ್ನು ಸಾಬೀತುಪಡಿಸಲು ನೀವು ಆಧಾರ್ ಅನ್ನು ಬಳಸಿದರೆ, ಅದನ್ನು ನಕಲು ಮಾಡುವುದು ಬಹುತೇಕ ಅಸಾಧ್ಯ. ಜನರು ಪಾಸ್‌ಪೋರ್ಟ್, ವೋಟರ್ ಐಡಿ, ಪ್ಯಾನ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮುಂತಾದ ಇತರ ಗುರುತಿನ ದಾಖಲೆಗಳನ್ನು ಮುಕ್ತವಾಗಿ ನೀಡುತ್ತಿದ್ದಾರೆ. ಯಾವುದೇ ವಂಚನೆ ಇದ್ದಲ್ಲಿ, ಕಾನೂನು ಜಾರಿ ಸಂಸ್ಥೆಗಳು ಕಾನೂನಿನ ಪ್ರಕಾರ ಅವುಗಳನ್ನು ನಿರ್ವಹಿಸುತ್ತವೆ. ಅದೇ ತರ್ಕವು ಆಧಾರ್ ಕಾರ್ಡ್ ವಿಷಯದಲ್ಲಿಯೂ ಅನ್ವಯಿಸುತ್ತದೆ. 

ವಾಸ್ತವವಾಗಿ, ಆಧಾರ್ ಇತರ ಗುರುತಿನ ದಾಖಲೆಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ, ಇತರ ಐಡಿಗಳಂತೆ ಆಧಾರ್ ಅನ್ನು ಬಯೋಮೆಟ್ರಿಕ್ ಮತ್ತು OTP ದೃಢೀಕರಣ ಮತ್ತು QR ಕೋಡ್‌ಗಳ ಮೂಲಕ ತಕ್ಷಣವೇ ಪರಿಶೀಲಿಸಬಹುದು. ಇದರ ಹೊರತಾಗಿ, ಆಧಾರ್ ಕಾಯಿದೆ, 2016 ರ ಅಡಿಯಲ್ಲಿ, ಯಾವುದೇ ವ್ಯಕ್ತಿಯು ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಾಗ ಅಥವಾ ನಿಮಗೆ ಯಾವುದೇ ಹಾನಿಯನ್ನುಂಟುಮಾಡಲು ಪ್ರಯತ್ನಿಸಿದಾಗ, ದಂಡ ಮತ್ತು ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಗೆ ಅವಕಾಶವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News