Post Office ಸೇವಿಂಗ್ಸ್ ಅಕೌಂಟ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ

Post Office Savings Account: ನೀವು ಪೋಸ್ಟ್ ಆಫೀಸ್‌ನಲ್ಲಿ ನಿಮ್ಮ ಉಳಿತಾಯ ಖಾತೆಯನ್ನು ತೆರೆದಿದ್ದರೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದಿದ್ದರೆ, ಈ ಎರಡು ಖಾತೆಗಳನ್ನು ಲಿಂಕ್ ಮಾಡುವ ಮೂಲಕ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. 

Written by - Yashaswini V | Last Updated : Dec 29, 2021, 12:13 PM IST
  • ಅಂಚೆ ಕಚೇರಿ ಉಳಿತಾಯ ಖಾತೆ ಜೊತೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಸುಲಭವಾಗಿ ಲಿಂಕ್ ಮಾಡಬಹುದು
  • ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಯಶಸ್ವಿಯಾಗಿ ಲಿಂಕ್ ಮಾಡಿದ ನಂತರ, SMS ಮೂಲಕ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ
  • ಅಂಚೆ ಕಚೇರಿ ಉಳಿತಾಯ ಖಾತೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ
Post Office ಸೇವಿಂಗ್ಸ್ ಅಕೌಂಟ್ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲು ಇಲ್ಲಿದೆ ಸುಲಭ ವಿಧಾನ title=
How to link India Post Payment Bank Account with Post Office Savings Account

Post Office Savings Account: ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಇದಲ್ಲದೆ ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಉಳಿತಾಯ ಖಾತೆಯನ್ನೂ ಹೊಂದಿದ್ದರೆ ಈ ಎರಡೂ ಖಾತೆಗಳನ್ನು ಲಿಂಕ್ ಮಾಡಬಹುದು. ಹೀಗೆ ಮಾಡುವುದರಿಂದ ನೀವು ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ. 

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ (India Post Payment Bank) ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2 ಲಕ್ಷ ರೂ.ಗಿಂತ ಹೆಚ್ಚಿನ ಖಾತೆಯ ಬ್ಯಾಲೆನ್ಸ್ ಅನ್ನು ಲಿಂಕ್ ಮಾಡಲಾದ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ (POSA) ವರ್ಗಾಯಿಸಲಾಗುತ್ತದೆ. 

ಇದನ್ನೂ ಓದಿ-  Aadhaar-Ration Link:ಈಗ ಮನೆಯಲ್ಲಿಯೇ ಕುಳಿತು ಸುಲಭವಾಗಿ ಆಧಾರ್-ರೇಷನ್ ಕಾರ್ಡ್ ಲಿಂಕ್ ಮಾಡಿ

ಅಂಚೆ ಕಚೇರಿ ಉಳಿತಾಯ ಖಾತೆ ಜೊತೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಹೇಗೆ? 
>> ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆಯನ್ನು (India Post Payment Bank Account) ಲಿಂಕ್ ಮಾಡಲು, ಗ್ರಾಹಕರು ಅವರ ಪ್ರಸ್ತುತ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.
>> ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯನ್ನು (Post Office Savings Account) ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆಯನ್ನು ತೆರೆಯುವ ಸಮಯದಲ್ಲಿ ಅಥವಾ ನಂತರ ಡೋರ್ ಸ್ಟೆಪ್ ಸರ್ವಿಸ್ ಮೂಲಕ ಅಥವಾ IPPB ಪ್ರವೇಶ ಬಿಂದುವಿನಲ್ಲಿ ಲಿಂಕ್ ಮಾಡಬಹುದು.
>> ಪೋಸ್ಟ್ ಆಫೀಸ್ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವಾಗ, ಗ್ರಾಹಕರು ತಮ್ಮ ಪೋಸ್ಟ್ ಆಫೀಸ್ ಉಳಿತಾಯ ಬ್ಯಾಂಕ್ ಖಾತೆಯ ಪಾಸ್‌ಬುಕ್ ಅನ್ನು GDS/ಪೋಸ್ಟ್‌ಮ್ಯಾನ್‌ಗೆ ಮನೆ ಬಾಗಿಲಿನ ಸೇವೆಯಲ್ಲಿ ಅಥವಾ ಆಕ್ಸೆಸ್ ಪಾಯಿಂಟ್‌ನಲ್ಲಿರುವ ಕೌಂಟರ್ ಸಿಬ್ಬಂದಿಗೆ ಪ್ರಸ್ತುತಪಡಿಸಬೇಕಾಗುತ್ತದೆ.
>> ಪೋಸ್ಟ್ ಆಫೀಸ್ ಉಳಿತಾಯ ಖಾತೆಯನ್ನು ಯಶಸ್ವಿಯಾಗಿ ಲಿಂಕ್ ಮಾಡಿದ ನಂತರ, SMS ಮೂಲಕ ಗ್ರಾಹಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಾಹಿತಿಯನ್ನು ಕಳುಹಿಸಲಾಗುತ್ತದೆ.

ಇದನ್ನೂ ಓದಿ- ಜನವರಿ 1 ರಿಂದ ಹೆಚ್ಚಾಗಲಿದೆ ಎಟಿಎಂ withdrawal ಶುಲ್ಕ: ನೀವು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ

ಅಂಚೆ ಕಚೇರಿ ಉಳಿತಾಯ ಖಾತೆ ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಲಿಂಕ್ ಮಾಡುವುದರಿಂದ ಸಿಗುತ್ತೆ ಈ ಪ್ರಯೋಜನ;
* ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆ ಮತ್ತು ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ಎರಡನ್ನೂ ಲಿಂಕ್ ಮಾಡುವುದರಿಂದ ಖಾತೆಯಲ್ಲಿ ಠೇವಣಿ ಇಡಲಾದ 2 ಲಕ್ಷ ರೂ.ಗಿಂತ ಹೆಚ್ಚಿನ ಖಾತೆಯ ಬ್ಯಾಲೆನ್ಸ್ ಅನ್ನು ಸ್ವಯಂಚಾಲಿತವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ವರ್ಗಾಯಿಸಲಾಗುತ್ತದೆ.
* ದಿನದ ಕೊನೆಯಲ್ಲಿ ವಹಿವಾಟನ್ನು ತಿರಸ್ಕರಿಸುವ ಬದಲು ಬಾಕಿ ಮೊತ್ತವು ಮಿತಿಯನ್ನು ಮೀರಿದರೆ, ವ್ಯವಸ್ಥೆಯು ಹೆಚ್ಚುವರಿ ಮೊತ್ತವನ್ನು ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ವರ್ಗಾಯಿಸುತ್ತದೆ.
* ಗರಿಷ್ಠ ಬ್ಯಾಲೆನ್ಸ್ ಮೊತ್ತಕ್ಕೆ ಯಾವುದೇ ಮಿತಿಯಿಲ್ಲದಿರುವುದರಿಂದ ನೀವು ಸಂಪೂರ್ಣ ಬಾಕಿ ಮೊತ್ತವನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆಯಿಂದ ಪೋಸ್ಟ್ ಆಫೀಸ್ ಉಳಿತಾಯ ಖಾತೆಗೆ ಒಂದೇ ಬಾರಿಗೆ ವರ್ಗಾಯಿಸಬಹುದು.
* ಗ್ರಾಹಕರು ಸ್ವೈಪ್-ಇನ್ ಮತ್ತು ಸ್ವೈಪ್-ಔಟ್ ಸೌಲಭ್ಯದೊಂದಿಗೆ IPPB ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕ ಹಣವನ್ನು ನಿರ್ವಹಿಸಬಹುದು. 
* ಖಾತೆದಾರರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಉಳಿತಾಯ ಖಾತೆಯ ಮೂಲಕ ಹಣವನ್ನು ಹಿಂಪಡೆಯಬಹುದು ಮತ್ತು ಠೇವಣಿ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News