ನವದೆಹಲಿ: How to get Driving License - ಚಾಲನಾ ಪರವಾನಗಿ ಪಡೆಯಲು ದೀರ್ಘ ಸಾಲಿನಲ್ಲಿ ನಿಂತು ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಅಗತ್ಯವಿಲ್ಲ. ದೆಹಲಿ ಸಾರಿಗೆ ಇಲಾಖೆಯು ದೆಹಲಿ ನಿವಾಸಿಗಳಿಗೆ ಫೇಸ್ ಲೆಸ್ ಸೇವೆಗಳನ್ನು ಒದಗಿಸುತ್ತಿದೆ. ಇದರಲ್ಲಿ ಜನರು ಮನೆಯಲ್ಲಿಯೇ ಕುಳಿತು ಕಲಿಕಾ ಪರವಾನಗಿಗಾಗಿ (Learners' Licence) ಅರ್ಜಿ ಸಲ್ಲಿಸಬಹುದು.
ದೆಹಲಿ ಸರ್ಕಾರ ಕಳೆದ ತಿಂಗಳು ಫೇಸ್ ಲೆಸ್ ಸಾರಿಗೆ ಸೇವೆಗಳನ್ನು ಆರಂಭಿಸಿದೆ. ಈ ಉಪಕ್ರಮದ ಅಡಿಯಲ್ಲಿ, ಆನ್ಲೈನ್ ಕಲಿಕಾ ಪರವಾನಗಿ (Learners' Licence) ಪರೀಕ್ಷೆ, ವಾಹನ ನೋಂದಣಿ, ಚಾಲನಾ ಪರವಾನಗಿ (Driving License) ಸೇರಿದಂತೆ ಇತ್ಯಾದಿ 33 ಸಾರಿಗೆ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ.
ನೀವು ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಸಾರಿಗೆ ಇಲಾಖೆಯ ಫೇಸ್ ಲೆಸ್ ಸೇವೆಗಳ ಲಾಭವನ್ನು ನೀವು ಹೇಗೆ ಪಡೆಯಬಹುದು ಎಂದು ನಾವು ನಿಮಗೆ ತಿಳಿಸುತ್ತೇವೆ.
ಮನೆಯಲ್ಲಿಯೇ ಕುಳಿತು ಸಾರಿಗೆ ಇಲಾಖೆಯ ಕೆಲಸಗಳನ್ನು ಪೂರ್ಣಗೊಳಿಸುವುದು ಹೇಗೆ? ಈ 10 ಅಂಶಗಳಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಿ:
1. ಸಾರಿಗೆ ಇಲಾಖೆಯ ಫೇಸ್ ಲೆಸ್ ಸೇವೆಯ ಅಡಿಯಲ್ಲಿ, ನೀವು ಮನೆಯಲ್ಲಿಯೇ ಕುಳಿತು ಆನ್ಲೈನ್ ಕಲಿಕಾ ಪರವಾನಗಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಆರ್ಟಿಒಗೆ ತಿರುಗುವ ಅಗತ್ಯವಿಲ್ಲ
2. ಆಧಾರ್ ಕಾರ್ಡ್ (Aadhaar Card) ಹೊಂದಿರುವ ಯಾವುದೇ ವ್ಯಕ್ತಿಯು ಈ ಸೇವೆಗಳ ಪ್ರಯೋಜನವನ್ನು ಪಡೆಯಬಹುದು. ನೀವು ಒಂದು ಬಾರಿ ಪಾಸ್ವರ್ಡ್ ಮೂಲಕ KYC ಅನ್ನು ಪೂರ್ಣಗೊಳಿಸಬಹುದು. ಆಧಾರ್ ದೃಢೀಕರಣದ ಮೂಲಕ ದಾಖಲೆಗಳು ಮತ್ತು ಇ-ಸೈನ್ ಅನ್ನು ಪರಿಶೀಲಿಸಬಹುದು. ಫೀಚರ್ ಮ್ಯಾಪಿಂಗ್ ವೈಶಿಷ್ಟ್ಯದೊಂದಿಗೆ AI ಆಧಾರಿತ ಮುಖ ಗುರುತಿಸುವಿಕೆ ತಂತ್ರಜ್ಞಾನವು ನಾಗರಿಕರು ಮನೆಯಿಂದ ಅವರ ಕಲಿಕಾ ಪರವಾನಗಿಯನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
3. ಆಧಾರ್ ಕಾರ್ಡ್ ಇಲ್ಲದವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು, ಆದರೆ ಅವರು ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಬೇಕು.
4. ಫೇಸ್ ಲೆಸ್ ಸೇವೆಗಳ ಲಾಭವನ್ನು ಪಡೆಯಲು ಬಯಸುವವರು transport.delhi.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಇಲ್ಲಿಗೆ ಭೇಟಿ ನೀಡುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಮಾಹಿತಿ ಪಡೆಯಬಹುದು. ಇದಕ್ಕಾಗಿ ಶುಲ್ಕವನ್ನು ಆನ್ಲೈನ್ನಲ್ಲಿ ಕೂಡ ಪಾವತಿಸಬಹುದು.
5. ಆನ್ಲೈನ್ ಪರೀಕ್ಷೆಯ ನಂತರ, ಇ-ಲರ್ನರ್ ಪರವಾನಗಿಯನ್ನು ಸಾರಿಗೆ ಇಲಾಖೆಯಿಂದ ನೀಡಲಾಗುತ್ತದೆ.
6. ಮೊದಲನೆಯದಾಗಿ, ಯಾರಾದರೂ ಕಲಿಕಾ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ, ಅವರ ಅರ್ಜಿ, ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಮೋಟಾರ್ ಪರವಾನಗಿ ಅಧಿಕಾರಿ ಅಥವಾ ಮೋಟಾರ್ ವಾಹನ ನಿರೀಕ್ಷಕರು ಇದನ್ನು ಪರಿಶೀಲಿಸಿ, ಅನುಮೋದಿಸಿದ ನಂತರ ಅದನ್ನು ಮುಂದಿನ ಪ್ರಕ್ರಿಯೆಗೆ ಕಳುಹಿಸಲಾಗುತ್ತದೆ.
7. ಸ್ಪೀಡ್ ಪೋಸ್ಟ್ ಮೂಲಕ ಡಾಕ್ಯುಮೆಂಟ್ ಅನ್ನು ಅರ್ಜಿದಾರರಿಗೆ ಕಳುಹಿಸಲಾಗುವುದು.
8. ಎಸ್ಎಂಎಸ್ ಮೂಲಕ ಅರ್ಜಿದಾರರಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಲಿಂಕ್ ಅನ್ನು ಸಹ ಕಳುಹಿಸಲಾಗುತ್ತದೆ, ಪರವಾನಗಿಯನ್ನು ಆ ಲಿಂಕ್ ಮೂಲಕ ಡೌನ್ಲೋಡ್ ಮಾಡಬಹುದು.
9. ಈ ಮುಖರಹಿತ / ಫೇಸ್ ಲೆಸ್ ಸೇವೆಗಳನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ದೆಹಲಿ ಸಾರಿಗೆ ಇಲಾಖೆಯು ಸಂಪೂರ್ಣ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಯನ್ನು (SOP) ಬಿಡುಗಡೆ ಮಾಡಿದೆ.
10. ಈ 33 ಸೇವೆಗಳಲ್ಲಿ, ಕೇವಲ ಎರಡು ಸೇವೆಗಳು ಆನ್ಲೈನ್ ಅಥವಾ ಫೇಸ್ ಲೆಸ್ ಆಗಿ ಲಭ್ಯವಿರುವುದಿಲ್ಲ. ಚಾಲನಾ ಪರವಾನಗಿ ಮತ್ತು ವಾಹನ ಫಿಟ್ನೆಸ್ ಪ್ರಮಾಣಪತ್ರಕ್ಕಾಗಿ ನೀವು ಆರ್ಟಿಒಗೆ ಹೋಗಬೇಕು.
ಇದನ್ನೂ ಓದಿ- Delhi Transport Department: ಇಂದಿನಿಂದ ದೆಹಲಿ ಸಾರಿಗೆ ಇಲಾಖೆಯಿಂದ ಈ ಸೌಲಭ್ಯಗಳು ಆನ್ಲೈನ್ನಲ್ಲಿ ಲಭ್ಯ
ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ?
>> ಮೊದಲಿಗೆ ನೀವು t ransport.delhi.gov.in ಗೆ ಹೋಗಬೇಕು
>> DL/RC/Permit ಗೆ ಸಂಬಂಧಿಸಿದ ಸೇವೆಗಳನ್ನು ಆಯ್ಕೆ ಮಾಡಿ ಮತ್ತು ಅರ್ಜಿ ಸಲ್ಲಿಸಿ
>> ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಶುಲ್ಕವನ್ನು ಪಾವತಿಸಿ
>> ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯಯನ್ನು ಪೂರ್ಣಗೊಳಿಸಿ
>> ಆಧಾರ್ ಆಧಾರಿತ ಇ-ಸೈನ್ ಆಧಾರ್ ಆಧಾರಿತ ದೃಢೀಕರಣ ಪ್ರಕ್ರಿಯಯನ್ನು ಪೂರ್ಣಗೊಳಿಸಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.