ಹೊಸ DL ಗಾಗಿ RTO ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ : ಹೊಸ ನಿಯಮ ಜಾರಿ

ಆರ್‌ಟಿಒಗೆ ಭೇಟಿ ನೀಡದೆ ಮತ್ತು ಚಾಲನಾ ಟೆಸ್ಟ್  ನೀಡದೆಯೇ ನೀವು ಚಾಲನಾ ಪರವಾನಗಿಯನ್ನು ನೀವು ಪಡೆಯಬಹುದು

Written by - Channabasava A Kashinakunti | Last Updated : Jul 7, 2022, 06:51 PM IST
  • ಕೇಂದ್ರ ಸರ್ಕಾರದಿಂದ ಬಿಗ್ ನ್ಯೂಸ್
  • DL ಪಡೆಯಲು RTO ಕಚೇರಿಗೆ ಭೇಟಿ ಅಗತ್ಯವಿಲ್ಲ
  • ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು
ಹೊಸ DL ಗಾಗಿ RTO ಕಚೇರಿಗೆ ಹೋಗುವ ಅವಶ್ಯಕತೆ ಇಲ್ಲ : ಹೊಸ ನಿಯಮ ಜಾರಿ title=

How To Apply For DL : ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ಳಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ಬಿಗ್ ನ್ಯೂಸ್ ಸಿಕ್ಕಿದೆ. ಇನ್ನೂ ಮುಂದೆ ನೀವು ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಆರ್‌ಟಿಒಗೆ ಭೇಟಿ ನೀಡದೆ ಮತ್ತು ಚಾಲನಾ ಟೆಸ್ಟ್  ನೀಡದೆಯೇ ನೀವು ಚಾಲನಾ ಪರವಾನಗಿಯನ್ನು ನೀವು ಪಡೆಯಬಹುದು

ಹೌದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜಾರಿಗೆ ತಂದಿರುವ ಹೊಸ ನಿಯಮಗಳ ಪ್ರಕಾರ, ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರದ ಸಹಾಯದಿಂದ ಚಾಲನಾ ಪರವಾನಗಿಯನ್ನು ಪಡೆಯಬಹುದು. ಇದಕ್ಕಾಗಿ ಅಭ್ಯರ್ಥಿಯು ಮಾನ್ಯತೆ ಪಡೆದ ಚಾಲನಾ ತರಬೇತಿ ಕೇಂದ್ರ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅರ್ಹ ಅಭ್ಯರ್ಥಿಗಳಿಗೆ ಚಾಲನಾ ಪರವಾನಗಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ : PPF ಖಾತೆದಾರರಿಗೆ ಪ್ರಮುಖ ಸುದ್ದಿ

ಹೀಗಾಗಿ ನೀವು ಇನ್ನೂ ಮುಂದೆ ಆರ್‌ಟಿಒ ಕಚೇರಿಗೆ ಅಲೆದಾಡಿ ಚಪ್ಪಲಿ ಹರಿಯುವ ಕೆಲಸ ಇರುವುದಿಲ್ಲ. ಕೇಂದ್ರ ಅಥವಾ ರಾಜ್ಯ ಸಾರಿಗೆ ಇಲಾಖೆ ಇಂತಹ ತರಬೇತಿ ಕೇಂದ್ರಗಳನ್ನು ನಿರ್ವಹಿಸುತ್ತದೆ. ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದ ಚಾಲಕ ತರಬೇತಿ ಕೇಂದ್ರದಲ್ಲಿ ತರಬೇತಿಗೆ ದಾಖಲಾಗಬೇಕು ಮತ್ತು ಅವರು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ಅಭ್ಯರ್ಥಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ತರಬೇತಿ ಕೇಂದ್ರವು ಪ್ರಮಾಣಪತ್ರವನ್ನು ನೀಡುತ್ತದೆ. ಪ್ರಮಾಣಪತ್ರವನ್ನು ಪಡೆದ ನಂತರ, ಅಭ್ಯರ್ಥಿಗಳು ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಇದರ ನಂತರ RTO ಯಾವುದೇ ಪರೀಕ್ಷೆಯಿಲ್ಲದೆ ತರಬೇತಿ ಪ್ರಮಾಣಪತ್ರದ ಆಧಾರದ ಮೇಲೆ ಪರವಾನಗಿ ನೀಡುತ್ತದೆ.

ತರಬೇತಿ ಕೇಂದ್ರಗಳಲ್ಲಿ ಸಿಮ್ಯುಲೇಟರ್‌ಗಳು ಮತ್ತು ಮೀಸಲಾದ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್‌ಗಳನ್ನು ಅಳವಡಿಸಲಾಗುವುದು. ತರಬೇತಿ ಕೇಂದ್ರಗಳಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವವರಿಗೆ ಪರೀಕ್ಷೆಗೆ ಆರ್‌ಟಿಒ ಕಚೇರಿಗೆ ಬರದೆ ಪರವಾನಗಿ ನೀಡಲಾಗುತ್ತದೆ. ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಲಘು ಮೋಟಾರು ವಾಹನಗಳಿಗೆ (LMV) ಮತ್ತು ಮಧ್ಯಮ ಮತ್ತು ಭಾರೀ ವಾಹನಗಳಿಗೆ (HMV) ತರಬೇತಿಯನ್ನು ಪಡೆಯಬಹುದು. LMV ಗಾಗಿ ತರಬೇತಿಯ ಒಟ್ಟು ಅವಧಿಯು 29 ಗಂಟೆಗಳಿರುತ್ತದೆ, ಇದು ಕೋರ್ಸ್‌ನ ಪ್ರಾರಂಭದಿಂದ ನಾಲ್ಕು ವಾರಗಳಲ್ಲಿ ಪೂರ್ಣಗೊಳಿಸಬೇಕು ಎಂಬ ನಿಯಮವಿದೆ.

ಇದನ್ನೂ ಓದಿ : ರೈಲು ಯಾತ್ರಿಗಳಿಗೆ ಮಹತ್ವದ ಘೋಷಣೆ ಮಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News