ನವದೆಹಲಿ: ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ(TTD) ಸನ್ನಿಧಿಗೆ ಇತಿಹಾಸದಲ್ಲಿಯೇ ದಾಖಲೆಯ ಆದಾಯ ಹರಿದುಬಂದಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣ ದೇವಸ್ಥಾನಕ್ಕೆ ಬರುವ ಭಕ್ತರ ಭೇಟಿ ಕಡಿಮೆಯಾಗಿತ್ತು. ಆದರೆ, ಇದೀಗ ಕೋವಿಡ್ ನಿರ್ಬಂಧಗಳಿಲ್ಲದ ಕಾರಣ ತಿರುಪತಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗುತ್ತಿದೆ. ಹೀಗಾಗಿ ಭಕ್ತರು ತಿಮ್ಮಪ್ಪನಿಗೆ ನೀಡುವ ಆದಾಯದಲ್ಲಿಯೂ ಭರ್ಜರಿ ಏರಿಕೆ ಕಂಡಿದೆ.
ತಿರುಮಲ ದೇವಸ್ಥಾನದ ಹುಂಡಿಗೆ ಮೇ ತಿಂಗಳಿನಲ್ಲಿ ಭಕ್ತರು ಕಾಣಿಕೆಯಾಗಿ ಬರೋಬ್ಬರಿ 130.29 ಕೋಟಿ ರೂ.ವನ್ನು ಅರ್ಪಿಸಿದ್ದಾರೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎಡಿ ಧರ್ಮಾ ರೆಡ್ಡಿ ಪ್ರಕಾರ, ಇದು ಟಿಟಿಡಿ ಇತಿಹಾಸದಲ್ಲಿ ಇದುವರೆಗಿನ ಒಂದು ತಿಂಗಳ ಗರಿಷ್ಠ ಆದಾಯವಾಗಿದೆ. ಮೇ ತಿಂಗಳಲ್ಲಿ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರು ತಿರುಪತಿಗೆ ಭೇಟಿ ನೀಡಿದ್ದಾರೆಂದು ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: Indian Railways: ಚಾರ್ಟ್ ಸಿದ್ಧಪಡಿಸಿದ ನಂತರ ಕ್ಯಾನ್ಸಲ್ ಮಾಡಲಾದ ಟಿಕೆಟ್‌ಗೂ ಸಿಗುತ್ತೆ ರೀಫಂಡ್
ತಿರುಮಲ ದೇವಸ್ಥಾನದ ಹುಂಡಿ ಕಾಣಿಕೆ ಮೂಲಕ ಫೆಬ್ರವರಿಯಲ್ಲಿ 79.34 ಕೋಟಿ ರೂ.ಗಳಷ್ಟಿದ್ದ ಆದಾಯ ಮಾರ್ಚ್‌ನಲ್ಲಿ 128.60 ಕೋಟಿ ರೂ.ಗೆ ತಲುಪಿದ್ದು, ಸುಮಾರು 50 ಕೋಟಿ ರೂ.ನಷ್ಟು ಏರಿಕೆಯಾಗಿದೆ. ಆದರೆ, ಏಪ್ರಿಲ್‌ನಲ್ಲಿ ಆದಾಯವು ಸ್ವಲ್ಪಮಟ್ಟಿಗೆ 127 ಕೋಟಿ ರೂ.ಗೆ ಇಳಿದು, ಮೇ ತಿಂಗಳಲ್ಲಿ 130.29 ಕೋಟಿ ರೂ.ಗೆ ಜಿಗಿದಿದೆ. ಒಂದೇ ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆದಾಯ ಹರಿದು ಬಂದಿರುವುದು ಇದೇ ಮೊದಲು.
ಅಂತೆಯೇ ಟಿಟಿಡಿಯೊಂದಿಗೆ ಫೆಬ್ರವರಿಯಲ್ಲಿ ದರ್ಶನ ಪಡೆದ ಯಾತ್ರಾರ್ಥಿಗಳ ಸಂಖ್ಯೆ ಕೇವಲ 10.97 ಲಕ್ಷವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದಾಗ್ಯೂ, ಟಿಟಿಡಿ ದರ್ಶನಕ್ಕೆ ಪ್ರತಿದಿನ ಅನುಮತಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ಸ್ಥಿರವಾಗಿ ಹೆಚ್ಚಿಸುವುದರೊಂದಿಗೆ ಮಾರ್ಚ್‌ನಲ್ಲಿ 19.72 ಲಕ್ಷ ಯಾತ್ರಾರ್ಥಿಗಳು, ಏಪ್ರಿಲ್‌ನಲ್ಲಿ 20.64 ಲಕ್ಷಕ್ಕೆ ಮತ್ತು ಈ ವರ್ಷದ ಮೇನಲ್ಲಿ 22.62 ಲಕ್ಷಕ್ಕೆ ಏರಿಕೆಯಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಸುಮಾರು 75 ಸಾವಿರ ಜನರು ದೈನಂದಿನ ದರ್ಶನವನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ, ಹೆಚ್ಚಾಗಲಿವೆ ಈ 4 ಭತ್ಯೆ, ಸಂಬಳದಲ್ಲಿ ಬಂಪರ್ ಹೆಚ್ಚಳ!
ಹೆಚ್ಚಿನ ಭಕ್ತರ ಭೇಟಿಯಿಂದ ತಿಮ್ಮಪ್ಪನ ಕಾಣಿಕಾ ಹುಂಡಿಗೆ ಹೆಚ್ಚಿನ ಆದಾಯ ಹರಿದುಬಂದಿದೆ. ಮೇ ತಿಂಗಳಲ್ಲಿ 1.86 ಕೋಟಿ ಲಡ್ಡುಗಳು ಮಾರಾಟವಾಗಿದ್ದು, 47.03 ಯಾತ್ರಾರ್ಥಿಗಳು ಟಿಟಿಡಿಯಿಂದ ಪ್ರತಿದಿನ ಯಾತ್ರಿಗಳಿಗೆ ಅನ್ನಪ್ರಸಾದವನ್ನು ಒದಗಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ಟೈಂ ಸ್ಲಾಟ್ ಸರ್ವದರ್ಶನ ವ್ಯವಸ್ಥೆಯನ್ನು ಪುನರಾರಂಭಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಟಿಟಿಡಿ ತಿಳಿಸಿದೆ.
ಮೇ 29ರಂದು ಅತಿಹೆಚ್ಚು 92,000 ಯಾತ್ರಾರ್ಥಿಗಳು ದರ್ಶನ ಪಡೆದಿದ್ದಾರೆ. ಟಿಟಿಡಿ ಉಚಿತ ಆಹಾರ, ನೀರು, ನೈರ್ಮಲ್ಯ, ಭದ್ರತೆ ಇತ್ಯಾದಿ ಸೌಲಭ್ಯಗಳನ್ನು ಗರಿಷ್ಠವಾಗಿ ವಿಸ್ತರಿಸಿದೆ. ಬೇಸಿಗೆಯ ಸಮಯದಲ್ಲಿ ದರ್ಶನಕ್ಕಾಗಿ ಆಗಮಿಸುವ ಭಕ್ತರು ತಾಳ್ಮೆಯಿಂದ ಇರಬೇಕೆಂದು ಧರ್ಮಾ ರೆಡ್ಡಿ ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.