Free Electric Scooter: ಉಚಿತವಾಗಿ ಸಿಗುತ್ತಿದೆ ಇಲೆಕ್ಟ್ರಿಕ್ ಸ್ಕೂಟರ್, ಚಿಕ್ಕದೊಂದು ಷರತ್ತಿನ ಮೇಲೆ ಕಂಪನಿಯ ವಿಶೇಷ ಕೊಡುಗೆ

Free Electric Scooters: ಹಿರೋ ಎಲೆಕ್ಟ್ರಿಕ್ ತನ್ನ ಗ್ರಾಹಕರ ವ್ಯಾಪ್ತಿಯನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ. ಆಗಸ್ಟ್ ತಿಂಗಳಿನಲ್ಲಿ ಹಿರೋ ಎಲೆಕ್ಟ್ರಿಕ್ ದೇಶದ ನಂಬರ್ ಒನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿ ಹೊರಹೊಮ್ಮಿದೆ. ಇದೀಗ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿಯು ಹೊಸ ಕೊಡುಗೆಯೊಂದನ್ನು ಆರಂಭಿಸಿದೆ.  

Written by - Nitin Tabib | Last Updated : Sep 3, 2022, 06:33 PM IST
  • ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಹೀರೋ ಮೊದಲ ಸ್ಥಾನದಲ್ಲಿದೆ,
  • ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿ ಮಾರಾಟ ಮಾಡಿದೆ.
  • ಹೀರೋ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಆಪ್ಟಿಮಾ CX, ಎಲೆಕ್ಟ್ರಿಕ್ NYX HS500, ಎಲೆಕ್ಟ್ರಿಕ್ ಫೋಟಾನ್ LP ಮತ್ತು ಹೀರೋ ಎಡ್ಡಿಯಂತಹ ಮಾದರಿಗಳನ್ನು ಮಾರಾಟ ಮಾಡುತ್ತದೆ
Free Electric Scooter: ಉಚಿತವಾಗಿ ಸಿಗುತ್ತಿದೆ ಇಲೆಕ್ಟ್ರಿಕ್ ಸ್ಕೂಟರ್, ಚಿಕ್ಕದೊಂದು ಷರತ್ತಿನ ಮೇಲೆ ಕಂಪನಿಯ ವಿಶೇಷ ಕೊಡುಗೆ title=
Free Electric Scooter

Free Electric Scooters In India: ಹೀರೋ ಎಲೆಕ್ಟ್ರಿಕ್ ದೇಶದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ತನ್ನ ಗ್ರಾಹಕರ ವ್ಯಾಪ್ತಿಯನ್ನು ನಿರಂತರವಾಗಿ ಹೆಚ್ಚಿಸುತಲೇ ಇದೆ. ಆಗಸ್ಟ್ ತಿಂಗಳಲ್ಲಿ, ಹೀರೋ ಎಲೆಕ್ಟ್ರಿಕ್ ದೇಶದ ನಂಬರ್ ಒನ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿ ಹೊರಹೊಮ್ಮಿದೆ. ಇದು 10 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಈ ವಿಭಾಗದಲ್ಲಿ ಹೊಸ ದಾಖಲೆ ಬರೆದಿದೆ. ಇದೀಗ ಮತ್ತಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿಯು ಹೊಸ ಆಫರ್ ಆರಂಭಿಸಿದೆ. ಈ ಕೊಡುಗೆಯ ಅಡಿಯಲ್ಲಿ, ಕಂಪನಿಯು ಗ್ರಾಹಕರಿಗೆ ಉಚಿತ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡುತ್ತಿದೆ. ಆದಾಗ್ಯೂ, ಇದಕ್ಕಾಗಿ ನೀವು ಕೆಲವು ಷರತ್ತುಗಳನ್ನು ಪೂರೈಸಬೇಕು.

ಇದನ್ನೂ ಓದಿ-SBI Cashback Credit Card: ಎಸ್ಬಿಐನಿಂದ ಸಾವಿರಾರು ರೂ.ಗಳ ಕ್ಯಾಶ್ ಬ್ಯಾಕ್ ಕೊಡುವ ಕ್ರೆಡಿಟ್ ಕಾರ್ಡ್ ಬಿಡುಗಡೆ

ವಾಸ್ತವವಾಗಿ, ಹೀರೋ ಎಲೆಕ್ಟ್ರಿಕ್‌ನ ಈ ಕೊಡುಗೆಯನ್ನು ಕೇರಳ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ರಾಜ್ಯದ ಜನಪ್ರಿಯ ಹಬ್ಬ ಓಣಂ ಹಿನ್ನೆಲೆಯಲ್ಲಿ ಈ ಕೊಡುಗೆಯನ್ನು ಆರಂಭಿಸಲಾಗಿದೆ. ಕೇರಳದಲ್ಲಿ ಪ್ರತಿ 100 ನೇ ಗ್ರಾಹಕರಿಗೆ ಉಚಿತವಾಗಿ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಗುವುದು ಎಂದು ಕಂಪನಿ ಘೋಷಿಸಿದೆ. ಈ ಕೊಡುಗೆಯು ಓಣಂ ಹಬ್ಬದ ಉದ್ದಕ್ಕೂ ಅನ್ವಯಿಸಲಿದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಗ್ರಾಹಕರು ಇ-ಸ್ಕೂಟರ್‌ನಲ್ಲಿ ಪೂರ್ಣ ಐದು ವರ್ಷಗಳ ವಾರಂಟಿಯನ್ನು ಪಡೆಯುತ್ತಾರೆ, ಇದರಲ್ಲಿ ಎರಡು ವರ್ಷಗಳ ವಿಸ್ತೃತ ವಾರಂಟಿ ಕೂಡ ಶಾಮೀಲಾಗಿದೆ.

ಇದನ್ನೂ ಓದಿ-Food Delivery By Plane: ಇನ್ಮುಂದೆ ನೀವು ದೇಶದ ಯಾವುದೇ ನಗರದಿಂದ ಅಲ್ಲಿನ ವಿಶೇಷ ಆಹಾರ ತರಿಸಿಕೊಳ್ಳಬಹುದು, ಇಲ್ಲಿದೆ ವಿವರ

ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಸ್ಕೂಟರ್
ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಹೀರೋ ಮೊದಲ ಸ್ಥಾನದಲ್ಲಿದೆ, ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿ ಮಾರಾಟ ಮಾಡಿದೆ. ಕಂಪನಿಯು ಕಳೆದ ತಿಂಗಳು 10,476 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹೀರೋ ಎಲೆಕ್ಟ್ರಿಕ್ ಜುಲೈ 2022 ರಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಯಾಗಿತು. ಮತ್ತೊಂದೆಡೆ, ಈ ಪಟ್ಟಿಯಲ್ಲಿ ಓಕಿನಾವಾ ಎರಡನೇ ಸ್ಥಾನದಲ್ಲಿದೆ ಮತ್ತು ಅಥರ್ ಎಲೆಕ್ಟ್ರಿಕ್ ಮೂರನೇ ಸ್ಥಾನದಲ್ಲಿದೆ. ಅಥರ್ ಎಲೆಕ್ಟ್ರಿಕ್ ಶೇ.297 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೀರೋ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಆಪ್ಟಿಮಾ CX, ಎಲೆಕ್ಟ್ರಿಕ್ NYX HS500, ಎಲೆಕ್ಟ್ರಿಕ್ ಫೋಟಾನ್ LP ಮತ್ತು ಹೀರೋ ಎಡ್ಡಿಯಂತಹ ಮಾದರಿಗಳನ್ನು ಮಾರಾಟ ಮಾಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News