ನವದೆಹಲಿ: ಹಣದುಬ್ಬರದಿಂದ ಬಳಲುತ್ತಿರುವ ಶ್ರೀಸಾಮಾನ್ಯನಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮೊಸರು, ಚೀಸ್, ಜೇನುತುಪ್ಪ, ಮಾಂಸ ಮತ್ತು ಮೀನುಗಳಂತಹ ಡಬ್ಬಿಯಲ್ಲಿ ಮತ್ತು ಲೇಬಲ್ ಮಾಡಿದ ಬ್ರಾಂಡೆಡ್ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (GST) ವಿಧಿಸಲು ನಿರ್ಧರಿಸಲಾಗಿದೆ. ಇದಲ್ಲದೇ ಚೆಕ್ ನೀಡುವ ಬದಲು ಬ್ಯಾಂಕ್ ಗಳು ತೆಗೆದುಕೊಳ್ಳುವ ಶುಲ್ಕದ ಮೇಲೂ GST ಪಾವತಿಸಬೇಕಾಗುತ್ತದೆ.
ವಿನಾಯಿತಿ ಹಿಂಪಡೆಯುವ ಶಿಫಾರಸು ಅಂಗೀಕರಿಸಿದ ಅಧಿಕಾರಿಗಳು
ರಾಜ್ಯಗಳ ಹಣಕಾಸು ಸಚಿವರ ಗುಂಪಿನ ಹೆಚ್ಚಿನ ಶಿಫಾರಸುಗಳನ್ನು ಅಂಗೀಕರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (GST)ಗೆ ಸಂಬಂಧಿಸಿದ ವಿಷಯಗಳ ಮೇಲಿನ ದರಗಳನ್ನು ತರ್ಕಬದ್ಧಗೊಳಿಸುವ ಸಲುವಾಗಿ ವಿನಾಯಿತಿಗಳನ್ನು ಹಿಂತೆಗೆದುಕೊಳ್ಳುವ ಶಿಫಾರಸುಗಳು ಬಂದಿವೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಕೌನ್ಸಿಲ್‌ನಲ್ಲಿ ರಾಜ್ಯಗಳ ಹಣಕಾಸು ಸಚಿವರನ್ನು ಸೇರಿಸಲಾಗಿದೆ.
ಇವುಗಳ ಮೇಲೆ ಶೇ.5ರಷ್ಟು ಜಿಎಸ್‌ಟಿ
2 ದಿನಗಳ ಸಭೆಯ ಮೊದಲ ದಿನವಾದ ಮಂಗಳವಾರ ಜಿಎಸ್‌ಟಿಯಿಂದ ವಿನಾಯಿತಿಯ ಪರಿಶೀಲನೆಯ ಕುರಿತು ಮಂತ್ರಿಗಳ ಗುಂಪಿನ (ಜಿಒಎಂ) ಶಿಫಾರಸುಗಳನ್ನು ಕೌನ್ಸಿಲ್ ಅಂಗೀಕರಿಸಿತು. ಈ ವಿನಾಯಿತಿಯು ಪ್ರಸ್ತುತ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳಿಗೆ ಲಭ್ಯವಿದೆ. ಇದರೊಂದಿಗೆ ಮಾಂಸ, ಮೀನು, ಮೊಸರು, ಚೀಸ್, ಜೇನುತುಪ್ಪ, ಡ್ರೈ ಮಖಾನಾ, ಸೋಯಾಬೀನ್, ಬಟಾಣಿ, ಗೋಧಿ ಮತ್ತು ಇತರ ಧಾನ್ಯಗಳು, ಗೋಧಿ ಹಿಟ್ಟು, ಬೆಲ್ಲ, ಎಲ್ಲಾ ಸರಕುಗಳು ಮತ್ತು ಸಾವಯವ ಗೊಬ್ಬರದಂತಹ ಉತ್ಪನ್ನಗಳಿಗೆ ಈಗ ಶೇ.5ರಷ್ಟು ಜಿಎಸ್‍ಟಿ ಅನ್ವಯವಾಗುತ್ತದೆ.
ಇದನ್ನೂ ಓದಿ: PM Kisan: ಪಿಎಂ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಈ ಕೆಲಸ ಮಾಡದಿದ್ರೆ ನಿಮಗೆ ಹಣ ಸಿಗಲ್ಲ!
ಹೋಟೆಲ್ ವಾಸ್ತವ್ಯ ಮತ್ತಷ್ಟು ದುಬಾರಿ!
ಅದೇ ರೀತಿ ಚೆಕ್ ವಿತರಣೆಯ ಮೇಲೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಅಟ್ಲಾಸ್ ಸೇರಿದಂತೆ ನಕ್ಷೆಗಳು ಮತ್ತು ಚಾರ್ಟ್‌ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ಹಾಕಲಾಗುತ್ತದೆ. ಅದೇ ರೀತಿ ಮುಕ್ತವಾಗಿ ಮಾರಾಟವಾಗುವ ಬ್ರಾಂಡ್ ಇಲ್ಲದ ಉತ್ಪನ್ನಗಳ ಮೇಲೆ GST ವಿನಾಯಿತಿ ಮುಂದುವರಿಯುತ್ತದೆ. ಇದಲ್ಲದೆ ದಿನಕ್ಕೆ 1,000 ರೂ.ಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ಕೊಠಡಿಗಳ ಮೇಲೆ ಶೇ.12ರ ದರದಲ್ಲಿ ತೆರಿಗೆ ವಿಧಿಸಲು ಹೇಳಲಾಗಿದೆ. ಸದ್ಯಕ್ಕೆ ಇದರ ಮೇಲೆ ಯಾವುದೇ ತೆರಿಗೆ ವಿಧಿಸಲಾಗಿಲ್ಲ.
ಕೆಲವು ವಸ್ತುಗಳ ಮೇಲೆ GST ಕಡಿಮೆ
ಸರಾಸರಿ GST ಹೆಚ್ಚಿಸಲು ದರಗಳ ತರ್ಕಬದ್ಧಗೊಳಿಸುವಿಕೆ ಮುಖ್ಯವಾಗಿದೆ. ಈ ತೆರಿಗೆ ಪದ್ಧತಿಯ ಅನುಷ್ಠಾನದ ಸಮಯದಲ್ಲಿ ತೂಕದ ಸರಾಸರಿ ಜಿಎಸ್‌ಟಿಯು ಶೇ.14.4ರಿಂದ ಶೇ.11.6ಕ್ಕೆ ಇಳಿದಿದೆ. ಜಿಎಸ್‌ಟಿ ಕೌನ್ಸಿಲ್ ಖಾದ್ಯ ತೈಲ, ಕಲ್ಲಿದ್ದಲು, ಎಲ್‌ಇಡಿ ಲ್ಯಾಂಪ್‌ಗಳು, ‘ಪ್ರಿಂಟಿಂಗ್/ಡ್ರಾಯಿಂಗ್ ಇಂಕ್’, ಫಿನಿಶ್ಡ್ ಲೆದರ್ ಮತ್ತು ಸೋಲಾರ್ ಎಲೆಕ್ಟ್ರಿಕ್ ಹೀಟರ್‌ಗಳು ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ವಿಲೋಮ ಸುಂಕ ರಚನೆ((Inverse duty structure)ಯಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಿದೆ(ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳಿಗಿಂತ ಸಿದ್ಧಪಡಿಸಿದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆ).
ಇಂದು ಈ ವಿಷಯಗಳನ್ನು ಪರಿಗಣಿಸಲಾಗುವುದು
ಬುಧವಾರ ರಾಜ್ಯಗಳಿಗೆ ಆದಾಯ ನಷ್ಟವನ್ನು ಸರಿದೂಗಿಸಲು ಜೂನ್ 2022ರ ನಂತರವೂ ಪರಿಹಾರ ವ್ಯವಸ್ಥೆಯನ್ನು ಮುಂದುವರಿಸುವ ಬೇಡಿಕೆಯನ್ನು ಕೌನ್ಸಿಲ್ ಪರಿಗಣಿಸಬಹುದು. ಇದಲ್ಲದೇ ಕ್ಯಾಸಿನೊಗಳ ಮೇಲೆ ಶೇ.28ರಷ್ಟು ಜಿಎಸ್‌ಟಿ ವಿಧಿಸುವುದು, ಆನ್‌ಲೈನ್ ಗೇಮಿಂಗ್ ಮತ್ತು ಕುದುರೆ ರೇಸಿಂಗ್‌ನಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಯಾವುದೇ ಖಾತರಿಯಿಲ್ಲದೇ ಪಡೆಯಿರಿ ಕೇಂದ್ರದ ಸಾಲ! ಸಕಾಲಕ್ಕೆ ಮರುಪಾವತಿಸಿದ್ರೆ ಸಿಗುತ್ತೆ 5 ಪಟ್ಟು ಹಣ!!
ಛತ್ತೀಸ್‌ಗಢದಂತಹ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಜಿಎಸ್‌ಟಿ ಪರಿಹಾರ ವ್ಯವಸ್ಥೆಯನ್ನು 5 ವರ್ಷಗಳವರೆಗೆ ವಿಸ್ತರಿಸಬೇಕು ಅಥವಾ ರಾಜ್ಯಗಳ ಆದಾಯದ ಪಾಲನ್ನು ಪ್ರಸ್ತುತ ಶೇ.50 ರಿಂದ 70-80ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿವೆ. ಜಿಎಸ್‌ಟಿ ವ್ಯವಸ್ಥೆಯಲ್ಲಿನ ಸುಧಾರಣೆಗಳ ಕುರಿತು ರಾಜ್ಯ ಹಣಕಾಸು ಸಚಿವರ ವರದಿಯನ್ನು ಸಹ ಅನುಮೋದಿಸಲಾಗಿದೆ. High-Risk ತೆರಿಗೆದಾರರ ಬಯೋಮೆಟ್ರಿಕ್ ಪರಿಶೀಲನೆಯೊಂದಿಗೆ ಬ್ಯಾಂಕ್ ಖಾತೆಗಳ ನೈಜ-ಸಮಯದ ಪರಿಶೀಲನೆಯನ್ನು ಇದು ಸೂಚಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ