Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ?

Salary Hike in 2023: ವರ್ಷ 2022ಕ್ಕೆ ಹೋಲಿಸಿದರೆ ವರ್ಷ 2023 ರಲ್ಲಿ ಹೆಚ್ಚಿನ ಇನ್ಕ್ರಿಮೆಂಟ್ ಸಿಗಲಿದೆ ಎಂದು ಅಂದಾಜಿಸಲಾಗಿದೆ. 2023ರಲ್ಲಿ ದೇಶದ ಕಂಪನಿಗಳು ಶೇ.10ರಷ್ಟು ವೇತನವನ್ನು ಹೆಚ್ಚಿಸುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ.  

Written by - Nitin Tabib | Last Updated : Aug 16, 2022, 04:34 PM IST
  • ಒಂದು ವೇಳೆ ನೀವೂ ಕೂಡ ದೇಶದ ನೌಕರರ ವರ್ಗಕ್ಕೆ ಸೇರುತ್ತಿದ್ದರೆ, ಈ ಸುದ್ದಿ ನಿಮಗಾಗಿ
  • ಮತ್ತು ಈ ಸುದ್ದಿಯನ್ನೋದಿ ನೀವೂ ಕೂಡ ಸಂತಸ ವ್ಯಕ್ತಪಡಿಸುವುದು ಗ್ಯಾರಂಟಿ.
  • 2022ರ ವರ್ಷದ ಇನ್ಕ್ರಿಮೆಂಟ್ ಸೈಕಲ್ ಪೂರ್ಣಗೊಂಡಿದ್ದು, ನೌಕರ ವರ್ಗಕ್ಕೆ ಸೇರಿದ ಜನರು ಇದೀಗ ವರ್ಷ 2023ರಲ್ಲಿ ಸಿಗಲಿರುವ ವೇತನ ವೃದ್ಧಿಗಾಗಿ ಕಾಯುತ್ತಿದ್ದಾರೆ.
Good News! ಖಾಸಗಿ ನೌಕರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ, ಮುಂದಿನ ವರ್ಷ ಎಷ್ಟು ಇನ್ಕ್ರಿಮೆಂಟ್ ಸಿಗಲಿದೆ ಗೊತ್ತಾ? title=
Salary Increament

Salary Hike in 2023: ಒಂದು ವೇಳೆ ನೀವೂ ಕೂಡ ದೇಶದ ನೌಕರರ ವರ್ಗಕ್ಕೆ ಸೇರುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮತ್ತು ಈ ಸುದ್ದಿಯನ್ನೋದಿ ನೀವೂ ಕೂಡ ಸಂತಸ ವ್ಯಕ್ತಪಡಿಸುವುದು ಗ್ಯಾರಂಟಿ. 2022ರ ವರ್ಷದ ಇನ್ಕ್ರಿಮೆಂಟ್ ಸೈಕಲ್ ಪೂರ್ಣಗೊಂಡಿದ್ದು, ನೌಕರ ವರ್ಗಕ್ಕೆ ಸೇರಿದ ಜನರು ಇದೀಗ ವರ್ಷ 2023ರಲ್ಲಿ ಸಿಗಲಿರುವ ವೇತನ ವೃದ್ಧಿಗಾಗಿ ಕಾಯುತ್ತಿದ್ದಾರೆ. ಇದೀಗ ಬಂದಿರುವ ಸುದ್ದಿಯ ಪ್ರಕಾರ ದೇಶಾದ್ಯಂತ ಇರುವ ಕಂಪನಿಗಳು ವರ್ಷ 2023ರಲ್ಲಿ ಶೇ.10ರಷ್ಟು ವೇತನವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ವರದಿಯೊಂದರ ಪ್ರಕಾರ ಕಂಪನಿಗಳು ಸ್ವಲ್ಪ ಕಠಿಣ ಕಾಲವನ್ನು ಎದುರಿಸುತ್ತಿವೆ ಎನ್ನಲಾಗಿದೆ. 

ಇದನ್ನೂ ಓದಿ-Nitin Gadlkari: ಕಾರ್-ಬೈಕ್ ಪ್ರಿಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಸಚಿವ ನಿತೀನ್ ಗಡ್ಕರಿ

ಸ್ಯಾಲರಿ ಇನ್ಕ್ರಿಮೆಂಟ್ ಹೆಚ್ಚಿಸಿದ ಉದ್ಯೋಗದಾತರು
ಜಾಗತಿಕ ಸಲಹೆಗಾರ, ಬ್ರೋಕಿಂಗ್ ಮತ್ತು ಪರಿಹಾರ ಸೇವೆ ಒದಗಿಸುವ ವಿಲ್ಲಿಸ್ ಟವರ್ಸ್ ವ್ಯಾಟ್ಸನ್ ವರದಿಯು 2022-23ರ ಅವಧಿಯಲ್ಲಿ ಭಾರತದಲ್ಲಿನ ಕಂಪನಿಗಳು ಶೇ.10 ರಷ್ಟು ವೇತನ ಹೆಚ್ಚಳಕ್ಕೆ ಸಿದ್ಧತೆ ನಡೆಸುತ್ತಿವೆ ಎಂದು ಪತ್ತೆಹಚ್ಚಿದೆ. ಹಿಂದಿನ ವರ್ಷದಲ್ಲಿ ನೈಜ ವೇತನ ಹೆಚ್ಚಳವು ಶೇ 9.5 ರಷ್ಟಿತ್ತು. ವರದಿಯ ಪ್ರಕಾರ, ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ.58) ಉದ್ಯೋಗದಾತರು ಕಳೆದ ವರ್ಷಕ್ಕಿಂತ ಪ್ರಸಕ್ತ ಹಣಕಾಸು ವರ್ಷಕ್ಕೆ ಹೆಚ್ಚಿನ ವೇತನ ಹೆಚ್ಚಳಕ್ಕಾಗಿ ತಮ್ಮ ಬಜೆಟ್ ಅನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ-ಗ್ರಾಹಕರಿಗೆ ಬಿಗ್ ಶಾಕ್!: ಸಾಲದ ಬಡ್ಡಿ ದರ ಹೆಚ್ಚಿಸಿದ ಎಸ್‌ಬಿಐ

ಶೇ. 25 ರಷ್ಟು ಕಂಪನಿಗಳು ತಮ್ಮ ಬಜೆಟ್ ಅನ್ನು ಬದಲಾಯಿಸಿಲ್ಲ
ಇಲ್ಲಿ ವಿಶೇಷ ಎಂದರೆ ಸುಮಾರು ಕಾಲು ಭಾಗದಷ್ಟು ಕಂಪನಿಗಳು (24.4 ಪ್ರತಿಶತ) ತಮ್ಮ ಬಜೆಟ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ. 2021-22 ಕ್ಕೆ ಹೋಲಿಸಿದರೆ, ಕೇವಲ ಶೇ. 5.4ರಷ್ಟು ಉದ್ಯೋಗದಾತರು  ಮಾತ್ರ ಬಜೆಟ್ ಅನ್ನು ಕಡಿಮೆ ಮಾಡಿದ್ದಾರೆ ಎಂದು ವರದಿ ಹೇಳಿದೆ. ವರದಿಯ ಪ್ರಕಾರ ಏಷ್ಯಾ ಪೆಸಿಫಿಕ್ (ಎಪಿಎಸಿ) ಪ್ರದೇಶದಲ್ಲಿ ಅತ್ಯಧಿಕ ವೇತನ ಹೆಚ್ಚಳ ಭಾರತದಲ್ಲಿ ಆಗಲಿದೆ ಎನ್ನಲಾಗಿದೆ. ಮುಂದಿನ ವರ್ಷ ಚೀನಾದಲ್ಲಿ ಶೇ.6 , ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಶೇ. 4 ರಷ್ಟು ವೇತನ  ಹೆಚ್ಚಾಗಲಿದೆ ಎನ್ನಲಾಗಿದೆ. ಏಪ್ರಿಲ್ ಮತ್ತು ಮೇ 2022 ರಲ್ಲಿ 168 ದೇಶಗಳಲ್ಲಿ ನಡೆಸಿದ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಭಾರತದ ಸುಮಾರು 590 ಕಂಪನಿಗಳೊಂದಿಗೆ ಮಾತುಕತೆಯನ್ನು ನಡೆಸಲಾಗಿದೆ. 

ಇದನ್ನೂ ನೋಡಿ -

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News