ಎಸ್‌ಬಿಐ ಖಾತೆದಾರರಿಗೆ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಡೆಬಿಟ್ ಕಾರ್ಡ್ ಆಗಲಿದೆ ಇನ್ನೂ ಪವರ್ ಫುಲ್

ಬ್ಯಾಂಕ್ ಪ್ರಕಾರ ಡೆಬಿಟ್ ಕಾರ್ಡ್‌ಗಳನ್ನು ಈಗ ಇಎಂಐ ಸೌಲಭ್ಯದೊಂದಿಗೆ ನೀಡಲಾಗುತ್ತಿದೆ. ಗೃಹೋಪಯೋಗಿ ವಸ್ತುಗಳು ಅಥವಾ ಆನ್‌ಲೈನ್ ಶಾಪಿಂಗ್ ಮಾಡಲು ಬಯಸುವ ಗ್ರಾಹಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ.

Last Updated : Oct 7, 2020, 10:15 AM IST
  • ಈಗ ಎಸ್‌ಬಿಐ ಡೆಬಿಟ್ ಕಾರ್ಡ್‌ಗಳು ಬಲಗೊಂಡಿವೆ
  • ಶಾಪಿಂಗ್‌ಗಾಗಿ ಬ್ಯಾಲೆನ್ಸ್ ಬಗ್ಗೆ ಹೆಚ್ಚು ಚಿಂತಿಸಬೇಡಿ
  • ಶಾಪಿಂಗ್‌ಗಳನ್ನು ಇಎಂಐನಲ್ಲಿ ತಕ್ಷಣ ಪರಿವರ್ತಿಸಲಾಗುತ್ತದೆ
ಎಸ್‌ಬಿಐ ಖಾತೆದಾರರಿಗೆ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಡೆಬಿಟ್ ಕಾರ್ಡ್ ಆಗಲಿದೆ ಇನ್ನೂ ಪವರ್ ಫುಲ್ title=

ನವದೆಹಲಿ: ನೀವು ದೇಶದ ಅತಿದೊಡ್ಡ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) ಖಾತೆದಾರರಾಗಿದ್ದರೆ ನಿಮಗೆ ಮತ್ತೊಂದು ಒಳ್ಳೆಯ ಸುದ್ದಿ ಬಂದಿದೆ. ಈ ಹಬ್ಬದ ಋತುವಿನಲ್ಲಿ ನಿಮ್ಮ ಶಾಪಿಂಗ್‌ಗಾಗಿ ನೀವು ಬ್ಯಾಂಕ್ ಬ್ಯಾಲೆನ್ಸ್ ನೋಡುವ ಅಗತ್ಯವಿಲ್ಲ. ಎಸ್‌ಬಿಐ ತನ್ನ ಖಾತೆದಾರರಿಗೆ ನೀಡುವ ಡೆಬಿಟ್ ಕಾರ್ಡ್‌ನಲ್ಲಿ (Debit Card) ವಿಶೇಷ ಸೌಲಭ್ಯವನ್ನು ನೀಡುತ್ತಿದೆ.

ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಸೌಲಭ್ಯ:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ ಖಾತೆದಾರರಿಗೆ ನೀಡಲಾದ ಡೆಬಿಟ್ ಕಾರ್ಡ್ ಅನ್ನು ಹೆಚ್ಚು ಪವರ್ ಫುಲ್ ಮಾಡಲಾಗಿದೆ. ಬ್ಯಾಂಕ್ ಪ್ರಕಾರ ಡೆಬಿಟ್ ಕಾರ್ಡ್‌ಗಳನ್ನು ಈಗ ಇಎಂಐ (EMI) ಸೌಲಭ್ಯದೊಂದಿಗೆ ನೀಡಲಾಗುತ್ತಿದೆ. ಗೃಹೋಪಯೋಗಿ ವಸ್ತುಗಳು (Home Appliances) ಅಥವಾ ಆನ್‌ಲೈನ್ ಶಾಪಿಂಗ್ (Online Shopping) ಮಾಡಲು ಬಯಸುವ ಗ್ರಾಹಕರಿಗೆ ಇದು ಪ್ರಯೋಜನವನ್ನು ನೀಡುತ್ತದೆ. ಗ್ರಾಹಕರು ತಕ್ಷಣ ತಮ್ಮ ಖರೀದಿಯನ್ನು ಸುಲಭ ಕಂತುಗಳಲ್ಲಿ ಪರಿವರ್ತಿಸಬಹುದು.

ಮಾಹಿತಿಯ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆದಾರರಿಗೆ ನೀಡಿರುವ ಡೆಬಿಟ್ ಕಾರ್ಡ್‌ಗೆ ಪೂರ್ವ ಅನುಮೋದಿತ ಇಎಂಐ ಸೌಲಭ್ಯವನ್ನು ನೀಡುತ್ತಿದೆ. ನೀವು ಈ ಸೌಲಭ್ಯವನ್ನು ಪಡೆಯುತ್ತೀರೋ ಇಲ್ಲವೋ, ಬ್ಯಾಂಕಿನಿಂದ ಮಾಹಿತಿಯನ್ನು ಪಡೆಯಬಹುದು. ಈ ವೈಶಿಷ್ಟ್ಯವು ಅನೇಕ ಡೆಬಿಟ್ ಕಾರ್ಡ್‌ಗಳಲ್ಲಿ ಲಭ್ಯವಿಲ್ಲದಿರುವ ಸಾಧ್ಯತೆ ಇದೆ.

ಈಗ ಗ್ರಾಹಕರಿಗೆ ಚೆಕ್‌ಬುಕ್‌ಗೆ ಸಂಬಂಧಿಸಿದಂತೆ ಬ್ಯಾಂಕ್‌ನಿಂದ ಸಿಗಲಿದೆ ಈ ವಿಶೇಷ ಸೌಲಭ್ಯ

ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮಾರಾಟದಲ್ಲಿ ಪಡೆಯಿರಿ ಲಾಭ :
ಎಸ್‌ಬಿಐ (SBI) ತನ್ನ ಆಯ್ದ ಗ್ರಾಹಕರಿಗೆ ಆನ್‌ಲೈನ್ ಶಾಪಿಂಗ್‌ಗಾಗಿ ಪೂರ್ವ-ಅನುಮೋದಿತ ಇಎಂಐ ಸೌಲಭ್ಯವನ್ನು ಸಹ ಒದಗಿಸಿದೆ ಎಂದು ತಜ್ಞರು ಹೇಳುತ್ತಾರೆ. ಗ್ರಾಹಕರು ಈ ಸೌಲಭ್ಯವನ್ನು ಅತ್ಯಂತ ಜನಪ್ರಿಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್‌ಗಳಾದ ಫ್ಲಿಪ್‌ಕಾರ್ಟ್ (Flipkart) ಮತ್ತು ಅಮೆಜಾನ್‌ (Amazon)ನಲ್ಲಿ ಪಡೆಯಬಹುದು.

SBI YONO ತನ್ನ ಗ್ರಾಹಕರಿಗೆ ನೀಡುತ್ತಿದೆ ಈ ವಿಶೇಷ ಸೌಲಭ್ಯ

Trending News