Good News: ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಗುತ್ತೆ ಉಚಿತ ಎಲ್‌ಪಿಜಿ ಸಿಲಿಂಡರ್‌!

Pradhan Mantri Ujjwala Yojana: ಈ ಉಚಿತ ಸಿಲಿಂಡರ್‌ಗಳ ಯೋಜನೆಯ ಲಾಭ ಪಡೆಯಲು ನೀವು ಕಡ್ಡಾಯವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರಬೇಕು. ಇದರೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು.

Written by - Puttaraj K Alur | Last Updated : Mar 29, 2024, 09:45 PM IST
  • ಕೇಂದ್ರ ಸರ್ಕಾರವು 2016ರಲ್ಲಿ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼ ಜಾರಿಗೊಳಿಸಿತು
  • ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ ಒದಗಿಸುವ ಯೋಜನೆ
  • ಈ ಯೋಜನೆಯಡಿ ವಾರ್ಷಿಕವಾಗಿ 3 ಸಿಲಿಂಡರ್‌ಗಳು ಉಚಿತವಾಗಿ ಸಿಗುತ್ತದೆ
Good News: ಬಿಪಿಎಲ್‌ ಕಾರ್ಡ್‌ದಾರರಿಗೆ ಸಿಗುತ್ತೆ ಉಚಿತ ಎಲ್‌ಪಿಜಿ ಸಿಲಿಂಡರ್‌! title=
ಪ್ರಧಾನ ಮಂತ್ರಿ ಉಜ್ವಲ ಯೋಜನೆ

Pradhan Mantri Ujjwala Yojana: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2016ರಲ್ಲಿ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼಯನ್ನು ಜಾರಿಗೊಳಿಸಿತು. ಇದು ದೇಶದ ಬಡ ಮಹಿಳೆಯರಿಗೆ ಉಚಿತ ಗ್ಯಾಸ್‌ ಸಿಲಿಂಡರ್‌ಗಳನ್ನು ಒದಗಿಸುವ ಯೋಜನೆಯಾಗಿದೆ.

ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 3 ಸಿಲಿಂಡರ್‌ಗಳು ಉಚಿತವಾಗಿ ಸಿಗುತ್ತದೆ. ನೀವು ಬಿಪಿಎಲ್‌ ಕಾರ್ಡುದಾರರು ಆಗಿದ್ದರೆ www.pmuy.gov.in ಸೈಟ್‌ಗೆ ಹೋಗಿ ಅರ್ಜಿ ಸಲ್ಲಿಸಬೇಕು. ಈ ಉಚಿತ ಸಿಲಿಂಡರ್‌ಗಳ ಯೋಜನೆಯ ಲಾಭ ಪಡೆಯಲು ನೀವು ಕಡ್ಡಾಯವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರಬೇಕು. ಇದರೊಂದಿಗೆ ಆಧಾರ್‌ ಕಾರ್ಡ್‌, ಬ್ಯಾಂಕ್‌ ಖಾತೆ ಎಲ್ಲವನ್ನೂ ಲಿಂಕ್‌ ಮಾಡಿರಬೇಕು.

ಇದನ್ನೂ ಓದಿ: Post Office Scheme: ತೆರಿಗೆ ಮುಕ್ತ ಎಫ್ಡಿಗಿಂತ ಉತ್ತಮ ಬಡ್ಡಿ ಕೊಡುತ್ತೇ ಈ ಅಂಚೆ ಕಚೇರಿ ಯೋಜನೆ, ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು

ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ?

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಪ್ರಾರಂಭಿಸಿದ ʼಪ್ರಧಾನ ಮಂತ್ರಿ ಉಜ್ವಲ ಯೋಜನೆʼ (PMUY)ಯನ್ನು BPL ಕುಟುಂಬಗಳಿಗೆ LPG ಸಂಪರ್ಕಗಳನ್ನು ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ, ನೀವು ಪ್ರತಿ ಸಂಪರ್ಕಕ್ಕೆ 1600 ರೂ., ಗ್ಯಾಸ್ ಸ್ಟವ್ ಖರೀದಿಸಲು ಮತ್ತು ಸಿಲಿಂಡರ್ ಅನ್ನು ಮರುಪೂರಣ ಮಾಡಲು ಬಡ್ಡಿರಹಿತ ಸಾಲವನ್ನು ಪಡೆಯಲು ಅರ್ಹರಾಗಿರುತ್ತೀರಿ. ಎಲ್‌ಪಿಜಿ ಸಂಪರ್ಕದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬಿಪಿಎಲ್ ಕುಟುಂಬಕ್ಕೆ ಸೇರಿದ ಮತ್ತು ತನ್ನ ಮನೆಯಲ್ಲಿ ಎಲ್‌ಪಿಜಿ ಸಂಪರ್ಕವನ್ನು ಹೊಂದಿರದ ಮಹಿಳೆಯು ಪಿಎಂಯುವೈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು. 

ಯಾರು PMUY ಪ್ರಯೋಜನ ಪಡೆಯಬಹುದು?  

  • ಭಾರತೀಯ ಪ್ರಜೆಯಾಗಿರಬೇಕು
  • 18 ವರ್ಷ ಮೇಲ್ಪಟ್ಟವರಾಗಿರಬೇಕು
  • LPG ಸಂಪರ್ಕವನ್ನು ಹೊಂದಿರದ BPL ಕುಟುಂಬದ ಮಹಿಳೆಯಾಗಿರಬೇಕು
  • ಇದೇ ರೀತಿಯ ಇತರ ಯೋಜನೆಗಳಗಡಿ ಯಾವುದೇ ಪ್ರಯೋಜನವನ್ನು ಪಡೆದಿರಬಾರದು
  • ಫಲಾನುಭವಿಗಳನ್ನು SC/ST ಕುಟುಂಬಗಳ ಅಡಿಯಲ್ಲಿ SECC 2011 ಅಥವಾ BPL ಕುಟುಂಬಗಳ ಪಟ್ಟಿಯಲ್ಲಿ ಸೇರಿಸಬೇಕು, PMAY (ಗ್ರಾಮೀಣ), AAY, ಅತ್ಯಂತ ಹಿಂದುಳಿದ ವರ್ಗಗಳು (MBC), ಅರಣ್ಯವಾಸಿಗಳು, ನದಿ ದ್ವೀಪಗಳಲ್ಲಿ ವಾಸಿಸುವ ಮತ್ತು ಬುಡಕಟ್ಟು ಜನರು ಇದರಲ್ಲಿ ಸೇರುತ್ತವೆ.

ಅವಶ್ಯಕ ದಾಖಲೆಗಳು

  • ಪುರಸಭೆ ಅಧ್ಯಕ್ಷರು ಅಥವಾ ಪಂಚಾಯತ್ ಪ್ರಧಾನರು ನೀಡಿದ ಬಿಪಿಎಲ್ ಪ್ರಮಾಣಪತ್ರ
  • ಜಾತಿ ಪ್ರಮಾಣ ಪತ್ರ
  • ಒಂದು ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
  • ಫೋಟೋ ಗುರುತಿನ ಪುರಾವೆ
  • ವಿಳಾಸ ಪುರಾವೆ
  • ಬಿಪಿಎಲ್ ಪಡಿತರ ಚೀಟಿ
  • ಕುಟುಂಬದ ಎಲ್ಲ ಸದಸ್ಯರ ಆಧಾರ್ ಸಂಖ್ಯೆಗಳು
  • ಬ್ಯಾಂಕ್ ಪಾಸ್ಬುಕ್ ಅಥವಾ ಜನ್‌ಧನ್ ಬ್ಯಾಂಕ್ ಖಾತೆಯ ವಿವರಗಳು

ಉಜ್ವಲಾ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1 - ಹತ್ತಿರದ LPG ವಿತರಕರಿಂದ ಅರ್ಜಿ ನಮೂನೆಯನ್ನು ಸಂಗ್ರಹಿಸಿ ಅಥವಾ www.pmuy.gov.in ನಿಂದ ಡೌನ್‌ಲೋಡ್ ಮಾಡಿ
ಹಂತ 2 - ಫಾರ್ಮ್ ಅನ್ನು ಭರ್ತಿ ಮಾಡಿ
ಹಂತ 3 - LPG ವಿತರಕರ ಕಚೇರಿಯಲ್ಲಿ ಫಾರ್ಮ್ ಸಲ್ಲಿಸಿ
ಹಂತ 4 - ಅರ್ಜಿಯನ್ನು ಸಲ್ಲಿಸಿದ ನಂತರ ಅದನ್ನು ಪ್ರಕ್ರಿಯೆಗೊಳಿಸಲಾಗುತ್ತದೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಅರ್ಹತೆಯನ್ನು ಪರಿಶೀಲಿಸಿದ ನಂತರ ವಿವಿಧ ತೈಲ ಮಾರುಕಟ್ಟೆ ಕಂಪನಿಗಳಿಂದ LPG ಸಂಪರ್ಕವನ್ನು ನೀಡಲಾಗುತ್ತದೆ.

ಇದನ್ನೂ ಓದಿ: NCBS Recruitment 2024: ಬೆಂಗಳೂರಿನಲ್ಲಿ ಕ್ಲರ್ಕ್​ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News