Gold Rate: ಆಭರಣ ಪ್ರಿಯರಿಗೆ ಸಂತಸದ ಸುದ್ದಿ... ವಾರಾಂತ್ಯದಲ್ಲಿ ಇಳಿಕೆಯಾದ ಚಿನ್ನ, ಬೆಳ್ಳಿ ದರ!!

Gold Price Today: ಆಭರಣ ಖರೀದಿಸುವ ಬಯಕೆ ಇದ್ದವರು ಇಂದು ಚಿನ್ನದ ಮಳಿಗೆಗೆ ಭೇಟಿ ನೀಡಬಹುದು.. ಸತತ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಇಳಿಮುಖವಾಗಿದೆ.. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ..

Written by - Savita M B | Last Updated : Mar 24, 2024, 08:33 AM IST
  • ಆಭರಣ ಖರೀದಿಸುವ ಬಯಕೆ ಇದ್ದವರು ಇಂದು ಚಿನ್ನದ ಮಳಿಗೆಗೆ ಭೇಟಿ ನೀಡಬಹುದು.
  • ಸತತ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇಂದು ಇಳಿಮುಖವಾಗಿದೆ
Gold Rate: ಆಭರಣ ಪ್ರಿಯರಿಗೆ ಸಂತಸದ ಸುದ್ದಿ... ವಾರಾಂತ್ಯದಲ್ಲಿ ಇಳಿಕೆಯಾದ ಚಿನ್ನ, ಬೆಳ್ಳಿ ದರ!! title=

Gold Price: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲಿದ್ದ ಚಿನ್ನದ ದರದಿಂದ ಗ್ರಾಹಕರು ಚಿಂತೆಗೀಡಾಗಿದ್ದರು.. ಇದೀಗ ಹಲವು ದಿನಗಳ ನಂತರ ಕೊಂಚ ಇಳಿಕೆ ಕಂಡ ಚಿನ್ನದ ದರ ಆಭರಣ ಪ್ರಿಯರಿಗೆ ನಿರಾಳತೆಯನ್ನು ನೀಡಿದೆ.. ಹಾಗಾದ್ರೆ  ಕರ್ನಾಟಕ ಸೇರಿದಂತೆ ವಿವಿಧೆಡೆ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಗಮನಿಸಿ.

22 ಕ್ಯಾರೆಟ್‌ ಗೋಲ್ಡ್‌ ರೇಟ್‌: ಒಂದು ಗ್ರಾಂ ಚಿನ್ನ ಖರೀದಿ ಮಾಡಿದರೆ 6,125 ರೂ. ನೀಡಬೇಕು ಅದೇ ರೀತಿ 10 ಗ್ರಾಂ ಚಿನ್ನಕ್ಕೆ 61,250 ರೂ ಆಗಿದೆ. ಈ ದರವನ್ನು ನಿನ್ನೆಗೆ ಹೋಲಿಸಿದರೆ ಇಂದು  100 ರೂ. ಕಡಿಮೆಯಾಗಿದೆ. ಹಾಗೇ  100 ಗ್ರಾಂ ಚಿನ್ನವನ್ನು ಖರೀದಿಸುವುದಾದರೇ 6,12,500 ರೂ. ನೀಡಬೇಕು. 

ಇದನ್ನೂ ಓದಿ-recanut Price in Karnataka: ರಾಜ್ಯದ ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್?

24 ಕ್ಯಾರೆಟ್‌ ಚಿನ್ನದ ಬೆಲೆ: 24 ಕ್ಯಾರೆಟ್‌ 1 ಗ್ರಾಂಗೆ ಚಿನ್ನಕ್ಕೆ  6,682 ರೂ. ನಿಗದಿಯಾಗಿದ್ದು.. ನಿನ್ನೆಯ ದರಕ್ಕೆ ಹೋಲಿಸಿದರೆ 11 ರೂ ಕಡಿಮೆಯಾಗಿದೆ.. ಅದೇ ರೀತಿ 10 ಗ್ರಾಂ ಚಿನ್ನಕ್ಕೆ 66,820 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 6,68,200 ರೂ. ಇದ್ದು,.. ನಿನ್ನೆಯ ದರಕ್ಕೆ ಹೋಲಿಸಿದರೆ 1,100 ರೂ ಕಡಿಮೆಯಾಗಿದೆ. 
 
ಕರ್ನಾಟಕದಲ್ಲಿ ಚಿನ್ನದ ಬೆಲೆ ಹೇಗಿದೆ?
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 61,250 ರೂ. ನಿಗದಿಯಾಗಿದೆ.. ಅದೇ ರೀತಿ 24 ಕ್ಯಾರೆಟ್‌ ಚಿನ್ನದ ಬೆಲೆ 66,820 ರೂ. ಆಗಿದೆ.. ಮಂಗಳೂರು, ಬಳ್ಳಾರಿ, ದಾವಣಗೆರೆ,  ಮೈಸೂರು, ಸೇರಿದಂತೆ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದ್ದು.. ಮಜೂರಿ ಮತ್ತು ಇತರೆ ಶುಲ್ಕಗಳಲ್ಲಿ ವ್ಯತ್ಯಾಸ ಕಂಡುಬರಬಹುದು.. 

ಇದನ್ನೂ ಓದಿ-Arecanut Price Today: ದಾವಣಗೆರೆ, ಮಂಗಳೂರು & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ

ಹೊರ ರಾಜ್ಯಗಳಲ್ಲಿ ಚಿನ್ನದ ಬೆಲೆ ಹೀಗಿದೆ: 
ಚೆನ್ನೈನಲ್ಲಿ 24 ಕ್ಯಾರೆಟ್‌ಗೆ 67,470 ರೂ. 22 ಕ್ಯಾರೆಟ್‌ ಚಿನ್ನದ ಬೆಲೆ 61,850 ರೂ. ನಿಗದಿಯಾಗಿದೆ.. ಅದೇ ರೀತಿ ಮುಂಬೈನಲ್ಲಿ 22 ಕ್ಯಾರೆಟ್‌ 61,250 ರೂ. 24 ಕ್ಯಾರೆಟ್‌ಗೆ 66,820 ರೂ. ಇದೆ.. ಕೊಲ್ಕತ್ತಾದಲ್ಲಿ 22 ಕ್ಯಾರೆಟ್‌ 61,250 ರೂ. 24 ಕ್ಯಾರೆಟ್‌ಗೆ 66,820 ರೂ., ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌  61,250 ರೂ. ಇದ್ದರೆ, 24 ಕ್ಯಾರೆಟ್‌ಗೆ 66,820 ರೂ., ದೆಹಲಿಯಲ್ಲಿ 22 ಕ್ಯಾರೆಟ್‌ 61,400 ರೂ. 24 ಕ್ಯಾರೆಟ್‌ಗೆ 66,970 ರೂ. ಕೇರಳದಲ್ಲಿ 22 ಕ್ಯಾರೆಟ್‌ 61,250 ರೂ. 24 ಕ್ಯಾರೆಟ್‌ಗೆ 66,820 ರೂ. ಫಿಕ್ಸ್‌ ಆಗಿದೆ.. 

ಬೆಳ್ಳಿ ಬೆಲೆ: 
ಚಿನ್ನದಂತೆ ಬೆಳ್ಳಿಯ ದರವೂ ಕೊಂಚ ಇಳಿಮುಖವಾಗಿದೆ.. ಒಂದು ಗ್ರಾಂ ಬೆಳ್ಳಿ ಖರೀಸದಿಲು ಬಯಸಿದರೆ  76 ರೂ.. 10 ಗ್ರಾಂಗೆ 760 ರೂ., 100 ಗ್ರಾಂಗೆ 7,600 ರೂ. ಅದೇ ರೀತಿ 1 ಕಿಲೋಗೆ 76,000 ರೂ. ನಿಗದಿಯಾಗಿದೆ.. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News