Gold Price Today: ಚಿನ್ನ ಖರೀದಿಗೆ ಇದುವೇ ಸುರ್ವಣಾವಕಾಶ; ನಿಮ್ಮ ನಗರದ ದರ ಪರಿಶೀಲಿಸಿರಿ

ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಸೋಮವಾರ 10 ಗ್ರಾಂಗೆ ಚಿನ್ನದ ಬೆಲೆ ಶೇ.0.13ರಷ್ಟು ಕಡಿಮೆಯಾಗಿದೆ.

Written by - Puttaraj K Alur | Last Updated : Sep 27, 2021, 01:54 PM IST
  • ಸೋಮವಾರವೂ ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರದಲ್ಲಿ ಯಾವುದೇ ಏರಿಳಿತವಾಗಿಲ್ಲ
  • ಮುಂಬರುವ ಹಬ್ಬದ ಋತುವಿನಲ್ಲಿ ಚಿನ್ನದ ದರದಲ್ಲಿ ಹೆಚ್ಚಳವಾಗುವುದಿಲ್ಲವೆಂದು ಹೇಳಲಾಗುತ್ತಿದೆ
  • ಚಿನ್ನದ ದರದಲ್ಲಿ ಇಳಿಕೆಯಾಗುತ್ತಿರುವುದು ಖರೀದಿದಾರರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ
Gold Price Today: ಚಿನ್ನ ಖರೀದಿಗೆ ಇದುವೇ ಸುರ್ವಣಾವಕಾಶ; ನಿಮ್ಮ ನಗರದ ದರ ಪರಿಶೀಲಿಸಿರಿ  title=
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ(Photo Courtesy:@India.com)

ನವದೆಹಲಿ: ಇಂದೂ ಕೂಡ(ಸೆ.27) ದೇಶದಲ್ಲಿ ಚಿನ್ನದ ಬೆಲೆಯು ಸ್ಥಿರವಾಗಿದೆ. ಈ ಮಧ್ಯೆ ಮುಂಬರುವ ಹಬ್ಬದ ಸೀಸನ್ ನಲ್ಲಿ ಚಿನ್ನದ ದರವು ಹೆಚ್ಚಾಗುವುದಿಲ್ಲವೆಂದು ತಿಳಿದುಬಂದಿದೆ. ಏಕೆಂದರೆ ಜಾಗತಿಕ ಚಿನ್ನದ ಮಾರುಕಟ್ಟೆಗಳಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿಯೂ ಚಿನ್ನದ ದರದಲ್ಲಿ ಹೆಚ್ಚಳವಾಗದಿದ್ದರೆ, ಇದು ದೇಶದ ಸಾಮಾನ್ಯ ಖರೀದಿದಾರರಿಗೆ ಮತ್ತಷ್ಟು ಖುಷಿ ತರುತ್ತದೆ.

ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಸೋಮವಾರ 10 ಗ್ರಾಂಗೆ ಚಿನ್ನದ ಬೆಲೆ ಶೇ.0.13ರಷ್ಟು ಕಡಿಮೆಯಾಗಿದೆ. ಹಳದಿ ಲೋಹದ ದರವು ಈಗಾಗಲೇ ದಾಖಲೆಯ ಗರಿಷ್ಠ ಮಟ್ಟದಿಂದ ಬರೋಬ್ಬರಿ 10 ಸಾವಿರ ರೂ.ನಷ್ಟು ಕುಸಿತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಬಂಗಾರದ ಬೆಲೆಯಲ್ಲಿ ನಿರಂತರವಾಗಿ ಇಳಿಮುಖವಾಗುತ್ತಿದೆ.

ಇದನ್ನೂ ಓದಿ: EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ

ಅಮೆರಿಕದ ಬಾಳಿಕೆ ಬರುವ ಸರಕುಗಳ ಕುರಿತ ಆದೇಶಗಳು, ವೈಯಕ್ತಿಕ ಬಳಕೆ ವೆಚ್ಚಗಳ (ಪಿಸಿಇ) ಬೆಲೆ ಸೂಚ್ಯಂಕ ಮತ್ತು ಜಿಡಿಪಿ ಕ್ಯೂ 2 ವರದಿಯಂತಹ ನಿರ್ಣಾಯಕ ಡೇಟಾವನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು. ಇವು ಜಾಗತಿಕ ಚಿನ್ನದ ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರುತ್ತವೆ. ಭಾರತದಲ್ಲಿ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿರುತ್ತದೆ ಏಕೆಂದರೆ ಕೇಂದ್ರ ಸರ್ಕಾರವು ಸಾಗರೋತ್ತರ ಮಾರುಕಟ್ಟೆಗಳಿಂದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ.   

ಈ ಮಧ್ಯೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಗೆ ಸಾಕ್ಷಿಯಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ ಶೇ.0.5 ರಷ್ಟು ಏರಿಕೆಯಾಗಿದ್ದು, 1,757.79 ಡಾಲರ್‌ಗೆ ತಲುಪಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ.

ಇದನ್ನೂ ಓದಿ: ಅಂಚೆ ಇಲಾಖೆಯ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹಣದ ಹೊಳೆ ಖಂಡಿತಾ..! ಶೀಘ್ರ ದುಪ್ಪಟ್ಟಾಗಲಿದೆ ಮೊತ್ತ

ಪ್ರಮುಖ ನಗರಗಳಲ್ಲಿ ಚಿನ್ನದ ದರ ಹೀಗಿದೆ ನೋಡಿ...

ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,200 ರೂ. 47,290 ರೂ.

ದೆಹಲಿ

45,350 ರೂ. 49,480 ರೂ.

ಮುಂಬೈ

45,240 ರೂ. 46,240 ರೂ.

ಚೆನ್ನೈ

Rs 43,570 ರೂ.  47,660 ರೂ.

ಕೋಲ್ಕತ್ತಾ

45,900 ರೂ.  48,600 ರೂ.

ಹೈದರಾಬಾದ್

43,200 ರೂ. 47,290 ರೂ.

ಅಹಮದಾಬಾದ್

44,480 ರೂ. 47,710 ರೂ.

ಲಕ್ನೋ

44,300 ರೂ. 47,100 ರೂ.

ಕೇರಳ

43,2000 ರೂ. 47,290 ರೂ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News