Gold Silver Price Today: 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿಯೂ ಇಳಿಕೆ

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ, ಹಬ್ಬದ ದಿನಗಳಲ್ಲಿ ಖರೀದಿ ಜೋರಾಗಿದೆ.

Written by - Puttaraj K Alur | Last Updated : Sep 20, 2021, 03:52 PM IST
  • ವಿವಿಧ ರಾಜ್ಯಗಳಲ್ಲಿ 100 ರೂ. ನಿಂದ 300 ರೂ.ವರೆಗೂ ಕುಸಿತ ಕಂಡಿರುವ ಚಿನ್ನದ ಬೆಲೆ
  • ಬೆಳ್ಳಿಯ ಬೆಲೆಯಲ್ಲಿಯೂ ಭಾರೀ ಕುಸಿತ ಕಂಡಿದ್ದು, ಪ್ರತಿ ಕೆಜಿಗೆ 59,531 ರೂ. ನಂತೆ ವಹಿವಾಟು ನಡೆಸುತ್ತಿದೆ
  • ಜಾಗತಿಕವಾಗಿ ಚಿನ್ನದ ಬೆಲೆ ಸೋಮವಾರ 5 ವಾರಗಳಿಗಿಂತಲೂ ಕಡಿಮೆ ಮಟ್ಟ ತಲುಪಿದೆ
Gold Silver Price Today: 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿಯೂ ಇಳಿಕೆ title=
ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಂಡಿದೆ(Photo Courtesy:@India.com)

ನವದೆಹಲಿ: ಭಾರತದ ಬಹು ಸರಕು ವಿನಿಮಯ ಕೇಂದ್ರ(Multi Commodity Exchange of India)ದಲ್ಲಿ ಚಿನ್ನ ಮತ್ತು ಬೆಳ್ಳಿ ಎರಡೂ ಇಂದು ಕೆಳಮಟ್ಟದಲ್ಲಿಯೇ ವಹಿವಾಟು ನಡೆಸುತ್ತಿವೆ. ಚಿನ್ನದ ಬೆಲೆಯಲ್ಲಿ 41 ರೂ. ಅಥವಾ ಶೇ.0.09 ರಷ್ಟು ಇಳಿಕೆಯಾಗಿದೆ. ಸೋಮವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 45,930 ರೂ. ಇದೆ. ಭವಿಷ್ಯದಲ್ಲಿ ಅಂದರೆ ಅಕ್ಟೋಬರ್ 5ರ ಹೊತ್ತಿಗೆ ಬಂಗಾರದ ಬೆಲೆ ಪಕ್ವವಾಗುವುದು ಎಂದು ಹೇಳಲಾಗುತ್ತಿದೆ.

ಈ ಮಧ್ಯೆ ಬೆಳ್ಳಿಯ ಬೆಲೆ(Silver Price)ಯಲ್ಲಿಯೂ ಇಳಿಕೆ ಕಾಣುತ್ತಿದ್ದು, ಪ್ರತಿ ಕೆಜಿಗೆ 59,531 ರೂ. ನಂತೆ ವಹಿವಾಟು ನಡೆಸುತ್ತಿದೆ. ಇಂದು(ಸೆ.20) 590 ರೂ. ಅಥವಾ ಶೇ.0.98 ರಷ್ಟು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.  ಶುಕ್ರವಾರ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,100 ರೂ.ನಷ್ಟಿತ್ತು. ಇದೇ ವೇಳೆ ಬೆಳ್ಳಿ ಪ್ರತಿ ಕೆಜಿಗೆ  61,168 ರೂ.ನಷ್ಟು ಇತ್ತು. ಇದು 162 ರೂ. ಅಥವಾ ಶೇ.0.27ರಷ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿತ್ತು.

ಇದನ್ನೂ ಓದಿ: EPFO Alert! ನೌಕರ ವರ್ಗದವರಿಗೆ ಅಲರ್ಟ್ ಜಾರಿಗೊಳಿಸಿದ EPFO, ಸಲಹೆ ಅನುಸರಿಸದೆ ಹೋದರೆ ಖಾತೆ ಖಾಲಿ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು:

ಸೋಮವಾರದಂದು ಚಿನ್ನದ ಬೆಲೆ(Gold price) 5 ವಾರಗಳಿಗಿಂತಲೂ ಕಡಿಮೆ ಮಟ್ಟ ತಲುಪಿದೆ. ಡಾಲರ್ ಮಾರುಕಟ್ಟೆಯೊಂದಿಗೆ ಯುಎಸ್ ಫೆಡರಲ್ ರಿಸರ್ವ್ ಸಭೆ ಸಮೀಪಿಸುತ್ತಿರುವ ಹಿನ್ನೆಲೆ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಏರಿಳಿಕೆಯಾಗುತ್ತಿದೆ. ಈ ಮಧ್ಯೆ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ ಗೆ ಶೇ.0.3ರಷ್ಟು ಇಳಿಕೆಯಾಗಿ 1,748.69 ಡಾಲರ್‌ ತಲುಪಿದೆ. ಅಮೆರಿಕನ್ ಡಾಲರ್ ಸ್ಥಿರವಾಗಿದ್ದರೂ ಯುಎಸ್ ಚಿನ್ನದ ಫ್ಯೂಚರ್ಸ್ ಶೇ.0.1ರಷ್ಟು ಕುಸಿತ ಕಂಡು 1,749.00 ಡಾಲರ್‌ಗೆ ತಲುಪಿದೆ.

ಡಾಲರ್ ಸೂಚ್ಯಂಕವು 1 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಇತರ ಕರೆನ್ಸಿಗಳನ್ನು ಹೊಂದಿರುವವರಿಗೆ ಚಿನ್ನದ ಆಕರ್ಷಣೆಯನ್ನು ಹಾನಿಗೊಳಿಸಿದೆ. ಇದಲ್ಲದೆ ಬೆಳ್ಳಿ ಪ್ರತಿ ಔನ್ಸ್‌ ಗೆ ಶೇ.1.2ರಷ್ಟು ಕುಸಿದಿದ್ದು, 22.13 ಡಾಲರ್‌ಗೆ ತಲುಪಿದೆ, ಈ ಮೊದಲು ನವೆಂಬರ್ 2020ರ ನಂತರ ಅದರ ಕನಿಷ್ಠ ಮಟ್ಟ  22.01 ಡಾಲರ್‌ಗೆ ತಲುಪಿದೆ.

ಇದನ್ನೂ ಓದಿ: Arecanut Price: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ದರ ಎಷ್ಟಿದೆ ನೋಡಿ…

ನಗರ

22K Gold (Per 10gm) 24K Gold (Per 10gm)

ಬೆಂಗಳೂರು

43,300 ರೂ. 47,230 ರೂ.

ದೆಹಲಿ

45,450 ರೂ. 49,580 ರೂ.

ಮುಂಬೈ

45,130 ರೂ. 46,130 ರೂ.

ಚೆನ್ನೈ

Rs 43,600 ರೂ.  47,560 ರೂ.

ಕೋಲ್ಕತ್ತಾ

45,550 ರೂ.  48,250 ರೂ.

ಹೈದರಾಬಾದ್

43,300 ರೂ. 47,230 ರೂ.

ಅಹಮದಾಬಾದ್

44,380 ರೂ. 47,900 ರೂ.

ಲಕ್ನೋ

45,450 ರೂ. 49,580 ರೂ.

ಕೇರಳ

43,300 ರೂ. 47,230 ರೂ.

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿರುವುದು ಖರೀದಿದಾರರಿಗೆ ಖುಷಿ ನೀಡುತ್ತಿದೆ. ಕಡಿಮೆ ಬೆಲೆಯಲ್ಲಿ ಹಳದಿ ಲೋಹ ಲಭ್ಯವಾಗುತ್ತಿರುವುದರಿಂದ ಹಬ್ಬದ ದಿನಗಳಲ್ಲಿ ಚಿನ್ನ ಖರೀದಿ ಜೋರಾಗಿದೆ.

ಮೇಲೆ ಉಲ್ಲೇಖಿಸಿರುವ ಚಿನ್ನದ ಬೆಲೆ ಸರಕು ಮತ್ತು ಸೇವಾ ತೆರಿಗೆ (GST) ಇಲ್ಲದಿದ್ದು ಮತ್ತು ಆಭರಣ ಅಂಗಡಿಗಳಲ್ಲಿನ ದರಕ್ಕೆ ಹೊಂದಿಕೆಯಾಗದೇ ಇರಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News