Income Tax Forms 15CA/15CB Deadline Extended: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕೃತ ವಿತರಕರಿಗೆ ಆದಾಯ ತೆರಿಗೆ ಫಾರ್ಮ್ 15 ಸಿಎ ಮತ್ತು 15 ಸಿಬಿ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಈ ನಿರ್ಧಾರವನ್ನು ಕೈಗೊಂಡಿದೆ. ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಈ ಎರಡೂ ನಮೂನೆಗಳನ್ನು ವಿದ್ಯುನ್ಮಾನವಾಗಿ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಪೋರ್ಟಲ್ www.incometax.gov.in ನಲ್ಲಿ ಆದಾಯ ತೆರಿಗೆ ಫಾರ್ಮ್ 15 ಸಿಎ / 15 ಸಿಬಿಯ ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿನ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು CBDT ಈ ನಿರ್ಧಾರವನ್ನು ತೆಗೆದುಕೊಂಡಿದೆ.
15 ಜುಲೈ ಹೊಸ ಡೆಡ್ ಲೈನ್
ಹಣಕಾಸು ಸಚಿವಾಲಯ (Finance Ministry) ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಸಿಬಿಡಿಟಿ ಈಗ ಈ ಫಾರ್ಮ್‌ಗಳನ್ನು ವಿದ್ಯುನ್ಮಾನವಾಗಿ ಸಲ್ಲಿಸುವ ಗಡುವನ್ನು 2021 ರ ಜುಲೈ 15 ರವರೆಗೆ ವಿಸ್ತರಿಸಿದೆ. ಹೀಗಾಗಿ ಇದೀಗ ತೆರಿಗೆದಾರರು ಎರಡೂ ಫಾರ್ಮ್‌ಗಳನ್ನು ಖುದ್ದಾಗಿ ಅಧಿಕೃತ ವಿತರಕರಿಗೆ ಜುಲೈ 15, 2021 ರವರೆಗೆ ಸಲ್ಲಿಸಬಹುದು. ಅಧಿಕೃತ ವಿತರಕರು ಜುಲೈ 15, 2021 ರೊಳಗೆ ಎರಡೂ ನಮೂನೆಗಳನ್ನು ಸ್ವೀಕರಿಸಲು ಕೋರಲಾಗಿದೆ. ಡಾಕ್ಯುಮೆಂಟ್ ಗುರುತಿನ ಸಂಖ್ಯೆ (DIN) ಜನರೇಟ್ ಮಾಡಲು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಎರಡೂ ಫಾರ್ಮ್‌ಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯವನ್ನು ನಂತರ ಕಲ್ಪಿಸಲಾಗುವುದು ಎಂದು ಸಿಬಿಡಿಟಿ ಹೇಳಿದೆ.
CBDT grants further relaxation in electronic filing of forms 15CA & 15CB in view of difficulties reported by taxpayers in filing of the forms online on https://t.co/GYvO3n9wMf. Date for submission of forms in manual format to the authorised dealers is extended to 15th July, 2021. pic.twitter.com/gQLRJsnlBu
— Income Tax India (@IncomeTaxIndia) July 5, 2021
ಯಾರು ಈ ಫಾರ್ಮ್ ಭರ್ತಿ ಮಾಡಬೇಕು
ವಿದೇಶಗಳಿಂದ ಬಂದ ಯಾವುದೇ ರೀತಿಯ ಹಣಕ್ಕೆ ಅಥರೈಸ್ದ್ ಕಾಪಿ ಕೊಡುವ ಮೊದಲು ತೆರಿಗೆ ಪಾವತಿದಾರರು 15 CB ಫಾರ್ಮ್ ಅನ್ನು CA ಸರ್ಟಿಫಿಕೆಟ್ ಜೊತೆಗೆ ಫಾರ್ಮ್ 15CA ಇ-ಫೈಲಿಂಗ್ ಪೋರ್ಟಲ್ ಮೇಲೆ ಅಪ್ಲೋಡ್ ಮಾಡಬೇಕು. ಇದಕ್ಕೂ ಮೊದಲು ಆದಾಯ ತೆರಿಗೆಯ ಇ-ಫೈಲಿಂಗ್ ಗಾಗಿ ಆರಂಭಿಸಲಾಗಿದ್ದ ಹೊಸ ಪೋರ್ಟಲ್ ನಲ್ಲಿನ ತಾಂತ್ರಿಕ ತೊಂದರೆಗಳ ಹಿನ್ನೆಲೆ, 15CA/15CB ಅನ್ನು ಮ್ಯಾನುವಲ್ ಫಾರ್ಮ್ಯಾಟ್ ನಲ್ಲಿ ಸಲ್ಲಿಸುವ ಡೆಡ್ ಲೈನ್ ಅನ್ನು ಜೂನ್ 30, 2021ರವರೆಗೆ ವಿಸ್ತರಿಸಲಾಗಿತ್ತು.
ಇದನ್ನೂ ಓದಿ-Inflation: ಶ್ರೀಸಾಮಾನ್ಯರ ಮೇಲೆ ಹಣದುಬ್ಬರದ ಹೊಡೆತ, ಗಗನಮುಖಿಯಾದ ಅಗತ್ಯ ವಸ್ತುಗಳ ಬೆಲೆ
ಜೂನ್ 1 ರಂದು ಬಿಡುಗಡೆಯಾಗಿತ್ತು ಹೊಸ ಇ-ಫೈಲಿಂಗ್ ಪೋರ್ಟಲ್
ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್ (IT Department New e-Filing Portal) ಜೂನ್ 7, 2021ರಂದು ಬಿಡುಗಡೆಯಾಗಿತ್ತು. ಆದರೆ, ಅದಾದ ಬಳಿಕ ಬಳಕೆದಾರರು ನಿರಂತರವಾಗಿ ತಾಂತ್ರಿಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಲಾಗಿನ್ ಗಾಗಿ ತುಂಬಾ ಕಾಯಬೇಕಾಗುತ್ತಿದೆ. ಈ ಹಿನ್ನೆಲೆ ನೋಟಿಸ್ ಗಳ ಮೂಲಕ ಸೂಚನೆ ನೀಡುವುದು ಕೂಡ ಸಾಧ್ಯವಾಗುತ್ತಿಲ್ಲ ಹಾಗೂ ಎಲ್ಲಾ ವೈಶಿಷ್ಟ್ಯಗಳು ಸದ್ಯಕ್ಕೆ ಕಾರ್ಯನಿರ್ವಹಿಸುತ್ತಿಲ್ಲ. ತೆರಿಗೆ ಪಾವತಿದಾರರ ಇ-ಫೈಲಿಂಗ್ ಅನ್ನು ಸುಲಭಗೊಳಿಸಲು ಈ ಹೊಸ ಪೋರ್ಟಲ್ ಅನ್ನು ಇಲಾಖೆ ಆರಂಭಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.