Mobile ನಂಬರ್ ಇಲ್ಲದೆ Aadhar ಕಾರ್ಡ್ 'ಡೌನ್‌ಲೋಡ್' ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಮೊಬೈಲ್ ಸಂಖ್ಯೆ ಹೊಂದುವುದು ಕಡ್ಡಾಯವಲ್ಲ.

Last Updated : Jun 3, 2021, 04:31 PM IST
  • ಆಧಾರ್ ಕಾರ್ಡ್‌ ಒಂದು ಪ್ರಮುಖ ಗುರುತಿನ ಆಧಾರವಾಗಿದ್ದು
  • ಯುಐಡಿಎಐ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಲಭ್ಯವನ್ನ ನೀಡಿದೆ
  • ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಮೊಬೈಲ್ ಸಂಖ್ಯೆ ಹೊಂದುವುದು ಕಡ್ಡಾಯವಲ್ಲ.
Mobile ನಂಬರ್ ಇಲ್ಲದೆ Aadhar ಕಾರ್ಡ್ 'ಡೌನ್‌ಲೋಡ್' ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ title=

ನವದೆಹಲಿ : ಆಧಾರ್ ಕಾರ್ಡ್‌ ಒಂದು ಪ್ರಮುಖ ಗುರುತಿನ ಆಧಾರವಾಗಿದ್ದು, ಸರ್ಕಾರ ಯೋಜನೆಗಳಿಂದ ಹಿಡಿದು ಹಲವು ಪ್ರಯೋಜನೆ ಪಡೆಯಲು ಆಧಾರ್‌ ಅತ್ಯವಶ್ಯಕ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಆಧಾರ್ ಕಾರ್ಡ್ ಎಲ್ಲೋ ಕಳೆದುಹೋದರೆ, ದೊಡ್ಡ ಸಮಸ್ಯೆಯಾಗೋದು ಆಗುತ್ತೆ. ವಿಶೇಷವಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನ ನೀವು ನೆನಪಿಸಿಕೊಳ್ಳದಿದ್ದಾಗ. ಇದನ್ನು ಗಮನದಲ್ಲಿಟ್ಟುಕೊಂಡು ಯುಐಡಿಎಐ ಗ್ರಾಹಕರಿಗೆ ಮತ್ತೊಂದು ವಿಶೇಷ ಸೌಲಭ್ಯವನ್ನ ನೀಡಿದೆ. ನಿಮ್ಮ ಮೊಬೈಲ್ ಸಂಖ್ಯೆ ಇಲ್ಲದೆ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಸಾಧ್ಯವಿದೆ. ಅದ್ಹೇಗೆ ತಿಳಿಯೋಣಾ ಬನ್ನಿ.

ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಪ್ರಕಾರ, ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಲ್ಲ. ತಮ್ಮ ಮೊಬೈಲ್ ಸಂಖ್ಯೆಯನ್ನ ತಮ್ಮ ಆಧಾರ್ ಕಾರ್ಡ್‌ನಲ್ಲಿ ನೋಂದಾಯಿಸದವರು ಯುಐಡಿಎಐ ವೆಬ್‌ಸೈಟ್ - uidai.gov.in ಗೆ ಲಾಗ್ ಇನ್ ಮಾಡುವ ಮೂಲಕ ತಮ್ಮ ಅನನ್ಯ 12 ಅಂಕಿಯ ಗುರುತಿನ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನೂ ಓದಿ : 'SBI ಗ್ರಾಹಕ'ರಿಗೆ ಸಿಹಿ ಸುದ್ದಿ : 'ಮನೆ ಬಾಗಿಲಿಗೆ ಬ್ಯಾಂಕ್ ಸೇವೆ'

ಮೊಬೈಲ್ ನಂಬರ್ ಇಲ್ಲದೆ ಆಧಾರ್ ಕಾರ್ಡ್ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವ ವಿಧಾನ :

1. ಯುಐಡಿಎಐ ಅಧಿಕೃತ ವೆಬ್‌ಸೈಟ್‌ uidai.gov.in ಗೆ ಲಾಗಿನ್ ಮಾಡಿ

2. ನಂತ್ರ 'my Aadhar ' ಆಯ್ಕೆಯನ್ನ ಆರಿಸಿ

3. ಈಗ ಆರ್ಡರ್ ಆಧಾರ್ ʼReprintʼ

ಇದನ್ನೂ ಓದಿ : Lost Documents : ನಿಮ್ಮ ದಾಖಲೆಗಳು ಕಳೆದು ಹೋದ್ರೆ ಈ ರೀತಿ ಪತ್ತೆ ಮಾಡಿ!

4. ನಂತ್ರ 12 ಅಂಕೆ ಆಧಾರ್ ಸಂಖ್ಯೆ ಅಥವಾ 16 ಅಂಕಿಯ ವಿಐಡಿ ಸಂಖ್ಯೆ(VID Number)ಯನ್ನ ನಮೂದಿಸಿ, ನಂತ್ರ ಸೆಕ್ಯೂರಿಟಿ ಕೋಡ್ ನಮೂದಿಸಿ

5. ಈ ಕ್ಲಿಕ್ ನಂತ್ರ 'ನನ್ನ ಮೊಬೈಲ್ ಸಂಖ್ಯೆ ನೋಂದಾಯಿಸಲಾಗಿಲ್ಲ' ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

6. ಈಗ ನೀವು ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಇಲ್ಲದ (Registered) ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಇದನ್ನೂ ಓದಿ : Petrol-Diesel Price : ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ : ಪೆಟ್ರೋಲ್ ₹ 3 ದುಬಾರಿ!

7. ನಮೂದಿಸಿದ ಮೊಬೈಲ್ ನಂಬರ್ ಗೆ  ಒಟಿಪಿ ಬರುತ್ತದೆ.

8. ನಿಯಮಗಳು ಮತ್ತು ಷರತ್ತುಗಳ ಆಯ್ಕೆಯ ಪಕ್ಕದಲ್ಲಿರುವ ಪೆಟ್ಟಿಗೆಯನ್ನು ಪರಿಶೀಲಿಸಿ

9. ಈಗ ಸಬ್ ಮೀಟ್ ಬಟನ್ ಒತ್ತಿ

ಇದನ್ನೂ ಓದಿ : New Wage Code 2021 : ಉದ್ಯೋಗಿಗಳಿಗೆ ಸಿಹಿ ಸುದ್ದಿ : ಜುಲೈನಿಂದ ಅನ್ವಯವಾಗಲಿದೆ 'ಹೊಸ ವೇತನ ಸಂಹಿತೆ'..! 

10. ದೃಢೀಕರಣದ ನಂತರ, ನಿಮ್ಮ ಕಂಪ್ಯೂಟರ್(Computer) ಮಾನಿಟರ್‌ನಲ್ಲಿ 'ಪೂರ್ವವೀಕ್ಷಣೆ ಆಧಾರ್ ಪತ್ರ' ಕಾಣಿಸುತ್ತದೆ

11. ಅದರ ನಂತರ ಇ-ಆಧಾರ್ ಡೌನ್‌ಲೋಡ್‌ಗೆ ಪಾವತಿ ಮಾಡಿ

12. ನಿಮ್ಮ ಇ-ಆಧಾರ್‌ನ ಪಿಡಿಎಫ್ ಡೌನ್‌ಲೋಡ್ ಮಾಡಿ

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರೆ ಗಮನಿಸಿ : ಇಂದು 10 ಗ್ರಾಂ ಚಿನ್ನಕ್ಕೆ ₹ 1,330 ಏರಿಕೆ!

PVC ಕಾರ್ಡ್ ಪಡೆಯುವುದು ಹೇಗೆ?

ಕಾರ್ಡಿನ ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಂಡು ಯುಐಡಿಎಐ ಇತ್ತೀಚೆಗೆ ಆಧಾರ್ PVC ಕಾರ್ಡ್ ಅನ್ನು ಪರಿಚಯಿಸಿದೆ. ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ಯುಐಡಿಎಐ ವೆಬ್‌ಸೈಟ್‌ನಿಂದ ಹೊಸ ಪಿವಿಸಿ ಕಾರ್ಡ್ ಅನ್ನು ಆದೇಶಿಸಬಹುದು. ಹೊಸ ಪಾಲಿವಿನೈಲ್ ಕ್ಲೋರೈಡ್ (PVC) ಆಧಾರ್ ಕಾರ್ಡ್ ಅನ್ನು ಸಾಗಿಸುವುದು ತುಂಬಾ ಸುಲಭ ಎಂದು ಯುಐಡಿಎಐ ಹೇಳಿದೆ. ಇದರ ಗಾತ್ರವು ತುಂಬಾ ಚಿಕ್ಕದಾಗಿರೋದ್ರಿಂದ ಸುಲಭವಾಗಿ ಕ್ಯಾರಿ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News