ನವದೆಹಲಿ: ಟಾಟಾ ಮೋಟಾರ್ಸ್‌ನ ಕೈಗೆಟುಕುವ ಎಸ್‌ಯುವಿ ಟಾಟಾ ಪಂಚ್ ಖರೀದಿಸಲು ಗ್ರಾಹಕರು ಸಾಲುಗಟ್ಟಿ ನಿಂತಿದ್ದಾರೆ. ಈ ಕಾರು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಇದು ನಿರಂತರವಾಗಿ ದೇಶದ ಟಾಪ್ 10 ವಾಹನಗಳಲ್ಲಿ ಒಂದಾಗಿದೆ. ಏಪ್ರಿಲ್ ತಿಂಗಳಿನಲ್ಲಿಯೂ ಈ ಕಾರಿನ ಸುಮಾರು 11 ಸಾವಿರ ಯುನಿಟ್‌ಗಳು ಮಾರಾಟವಾಗಿವೆ. ಇದೀಗ ದೇಶದ ಅತ್ಯಂತ ಸುರಕ್ಷಿತ ಎಸ್‍ಯುವಿ ಟಾಟಾ ಪಂಚ್ ಹೊಸ ದಾಖಲೆ ನಿರ್ಮಿಸಿದೆ. ಇದು ಕೇವಲ 19 ತಿಂಗಳಲ್ಲಿ 2 ಲಕ್ಷ ಯುನಿಟ್ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ.
ಟಾಟಾ ಪಂಚ್ ಈ ಮೈಲಿಗಲ್ಲನ್ನು ಸಾಧಿಸಿದ ಅತ್ಯಂತ ವೇಗದ SUV ಎನಿಸಿಕೊಂಡಿದೆ. ಈ ಕಾರುಗಳಿಗೆ ನಿರಂತರ ಬುಕಿಂಗ್ ಇರುವುದರಿಂದ, 2 ಲಕ್ಷ ಯೂನಿಟ್ ಶೋರೂಂಗಳಿಗೆ ಬಂದ ತಕ್ಷಣವೇ ವಿತರಣೆಯಾಗಲಿವೆ. ಇದಕ್ಕೂ ಮೊದಲು ಟಾಟಾ ಪಂಚ್ ಕೇವಲ 10 ತಿಂಗಳಲ್ಲಿ 1 ಲಕ್ಷ ಯುನಿಟ್‌ಗಳ ಮಾರಾಟದ ಅಂಕಿಅಂಶವನ್ನು ದಾಟಿತ್ತು.
ಇದನ್ನೂ ಓದಿ: Gold Price 12th May:ಬಹಳ ದಿನಗಳ ನಂತರ ಇಷ್ಟು ಕುಸಿತ ಕಂಡ ಬಂಗಾರದ ಬೆಲೆ !
ಟಾಟಾ ಪಂಚ್ ಬೆಲೆ: ಟಾಟಾ ಪಂಚ್ ಬೆಲೆ 6 ಲಕ್ಷ ರೂ.ದಿಂದ ಪ್ರಾರಂಭವಾಗಿ 9.52 ಲಕ್ಷ ರೂ.ವರೆಗೆ (ಎಕ್ಸ್ ಶೋ ರೂಂ ದೆಹಲಿ)ಇದೆ. ಇದು ಮಹೀಂದ್ರಾ KUV100 NXT ಮತ್ತು ಮಾರುತಿ ಇಗ್ನಿಸ್‌ಗೆ ಪ್ರತಿಸ್ಪರ್ಧಿಯಾಗಿದೆ. ಇದರ ಹೊರತಾಗಿಯೂ ಬೆಲೆಯ ಬಗ್ಗೆ ಹೇಳುವುದಾದರೆ ಇದು ನಿಸ್ಸಾನ್ ಮ್ಯಾಗ್ನೈಟ್ ಮತ್ತು ರೆನಾಲ್ಟ್ ಕಿಗರ್‌ಗಳೊಂದಿಗೆ ಸ್ಪರ್ಧಿಸುತ್ತಿದೆ.
ಇಂಜಿನ್ ಮತ್ತು ಟ್ರಾನ್ಸ್ಮಿಷನ್: ಟಾಟಾ ಪಂಚ್ 1.2-ಲೀಟರ್ ಪೆಟ್ರೋಲ್ ಎಂಜಿನ್ (86PS/113Nm) ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ AMT ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಈ ಎಂಜಿನ್‌ನ ಮೈಲೇಜ್ ಮ್ಯಾನುವಲ್ ಗೇರ್‌ಬಾಕ್ಸ್‌ನಲ್ಲಿ 18.82 kmpl ಮತ್ತು AMTಯೊಂದಿಗೆ 18.97kmplವರೆಗೆ ಹೋಗುತ್ತದೆ.
ಇದನ್ನೂ ಓದಿ: ನಿಮ್ಮ ಈ ಒಂದು ಸಣ್ಣ ತಪ್ಪಿನಿಂದ ಫ್ರೀ- ರೇಷನ್ ಕೈ ತಪ್ಪಬಹುದು ಎಚ್ಚರ!
5 ಸ್ಟಾರ್ ಸುರಕ್ಷತಾ ರೇಟಿಂಗ್: ಟಾಟಾ ಪಂಚ್ 7 ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಎಸಿ, ಸ್ವಯಂಚಾಲಿತ ಹೆಡ್‌ಲೈಟ್‌ಗಳು, ಸಂಪರ್ಕಿತ ಕಾರ್ ಟೆಕ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಈ ಕಾರು ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದುಕೊಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.