Ola Cheapest Bike: ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಲಾ, ಕೇವಲ ರೂ.999 ಪಾವತಿಸಿ ಬುಕ್ ಮಾಡಿ

Ola Cheapest Bike: ಓಲಾ ಕಂಪನಿ ತನ್ನ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Ola S1 ಏರ್ ಎಂದು ಹೆಸರಿಸಲಾಗಿದೆ. 999 ರೂಪಾಯಿ ಪಾವತಿಸಿ ನೀವು ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಈ ಸ್ಕೂಟರ್‌ನಲ್ಲಿ ನೀವು 100KM ಗಿಂತ ಹೆಚ್ಚಿನ ರೇಂಜ್ ಪಡೆಯುವಿರಿ.  

Written by - Nitin Tabib | Last Updated : Oct 22, 2022, 03:55 PM IST
  • ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Ola S1 ಏರ್ ಎಂದು ಹೆಸರಿಸಲಾಗಿದೆ.
  • ಇದು Ola S1 ಸ್ಕೂಟರ್‌ ಕಂಪನಿಯ ಅತ್ಯಂತ ಕೈಗೆಟುಕುವ ದರದ ಆವೃತ್ತಿಯಾಗಿದೆ.
  • ಈ ಸ್ಕೂಟರ್‌ನಲ್ಲಿ ನೀವು 100KM ಗಿಂತ ಹೆಚ್ಚಿನ ರೇಂಜ್ ಪಡೆಯುವಿರಿ.
Ola Cheapest Bike: ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಲಾ, ಕೇವಲ ರೂ.999 ಪಾವತಿಸಿ ಬುಕ್ ಮಾಡಿ title=
Cheapest Electric Scooter By Ola

Ola S1 Air Price, Range and Features: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿ ಓಲಾ ಎಲೆಕ್ಟ್ರಿಕ್ ದೀಪಾವಳಿಗೂ ಮುನ್ನವೇ ಮಹತ್ವದ ಘೋಷಣೆ ಮಾಡಿದೆ. ಕಂಪನಿಯು ತನ್ನ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Ola S1 ಏರ್ ಎಂದು ಹೆಸರಿಸಲಾಗಿದೆ. ಇದು Ola S1 ಸ್ಕೂಟರ್‌ ಕಂಪನಿಯ ಅತ್ಯಂತ ಕೈಗೆಟುಕುವ ದರದ ಆವೃತ್ತಿಯಾಗಿದೆ. ಈ ಸ್ಕೂಟರ್‌ನಲ್ಲಿ ನೀವು 100KM ಗಿಂತ ಹೆಚ್ಚಿನ ರೇಂಜ್ ಪಡೆಯುವಿರಿ. ಅಷ್ಟೇ ಅಲ್ಲ ಇದನ್ನು ನೀವು ಕೇವಲ 999 ರೂಪಾಯಿ ಪಾವತಿಸಿ ಸ್ಕೂಟರ್ ಅನ್ನು ಬುಕ್ ಮಾಡಬಹುದು. ವಿಶೇಷವೆಂದರೆ ದೀಪಾವಳಿ ಸಂದರ್ಭದಲ್ಲಿ ಕಂಪನಿಯು ಈ ಸ್ಕೂಟರ್ ಮೇಲೆ 5 ಸಾವಿರ ರೂಪಾಯಿ ರಿಯಾಯಿತಿಯನ್ನೂ ಸಹ ನೀಡುವುದಾಗಿ ಘೋಷಿಸಿದೆ. ಸ್ಕೂಟರ್‌ನ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.

ಬೆಲೆ ಮತ್ತು ಬುಕಿಂಗ್
ಹೊಸ 2022 Ola S1 ಏರ್ ರೂಪಾಂತರದ ಬೆಲೆ 79,999 ರೂ (ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ. ಇದು ಕಂಪನಿಯ OLA S1 ಗಿಂತ 20,000 ರೂ ಅಗ್ಗವಾಗಿದೆ ಮತ್ತು S1 Pro ಗಿಂತ 50,000 ರೂ ಅಗ್ಗವಾಗಿದೆ. ಆದಾಗ್ಯೂ, ಈ ಬೆಲೆಯು ವಿಶೇಷ ದೀಪಾವಳಿಗಾಗಿ ಇರಲಿದ್ದು, ಅಕ್ಟೋಬರ್ 24 ರವರೆಗೆ ಮಾತ್ರ ಮಾನ್ಯವಗಿರಲಿದೆ. ಇದಾದ ನಂತರ ಬೆಲೆ 84,999 ರೂ.ಗೆ ಏರಿಕೆಯಾಗಲಿದೆ. 999 ಟೋಕನ್ ಮೊತ್ತಕ್ಕೆ ಇದನ್ನು ಬುಕ್ ಮಾಡಬಹುದು. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಸ್ಕೂಟರ್‌ನ ವಿತರಣೆ ಆರಂಭವಾಗಲಿದೆ.

ಇದನ್ನೂ ಓದಿ-Top 5 Bikes: ಈ ಅಗ್ಗದ ಬೈಕ್ ಮುಂದೆ ಎಲ್ಲಾ ಬೈಕ್ ಗಳು ಫೇಲ್, ಎಲ್ಲ ಬೈಕ್ ಗಳನ್ನು ಹಿಂದಿಕ್ಕಿ ನಂ.1 ಪಟ್ಟ

ಬ್ಯಾಟರಿ ಮತ್ತು ಶ್ರೇಣಿ
ಹೊಸ Ola S1 ಏರ್ 2.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು 101KM ನ ARAI- ಪ್ರಮಾಣೀಕೃತ ರೇಂಜ್ ನೀಡುತ್ತದೆ. ಆದರೂ ವಾಸ್ತವದಲ್ಲಿ ಇದು 76 ಕಿ.ಮೀ. ವ್ಯಾಪ್ತಿಯನ್ನು ನೀಡುತ್ತಿದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿಮೀ. ಇದು ಕೇವಲ 4.3 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯುತ್ತದೆ. 500W ಪೋರ್ಟಬಲ್ ಚಾರ್ಜರ್ ಅನ್ನು ಸ್ಕೂಟರ್‌ನೊಂದಿಗೆ ನೀಡಲಾಗುತ್ತಿದ್ದು, ಅದರ ಮೂಲಕ 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಬ್ಯಾಟರಿ ಚಾರ್ಜ್ ಮಾಡಬಹುದು.

ಇದನ್ನೂ ಓದಿ-Diwali Gold purchase: ಧನತ್ರಯೋದಶಿ-ದೀಪಾವಳಿಗೆ ಚಿನ್ನ ಖರೀದಿಸಬೇಕೆ? ಮುಂದಿನ ವರ್ಷ ನಿಮಗೆ ಎಷ್ಟು ಲಾಭ?

ವೈಶಿಷ್ಟ್ಯಗಳು
ಈ ಸ್ಕೂಟರ್‌ಗೆ ಕಂಪನಿಯ ಉಳಿದ ಮಾದರಿಗಳಿಗಿಂತ ಸ್ವಲ್ಪ ವಿಭಿನ್ನ ವಿನ್ಯಾಸ ನೀಡಿದೆ. ಇದು ಡ್ಯುಯಲ್-ಟೋನ್ ಪೇಂಟ್ ಫಿನಿಶ್, ಹೊಸ ರಿಯರ್ ಗ್ರಾಬ್ ಹ್ಯಾಂಡಲ್‌ಗಳು ಮತ್ತು ಅಪ್ಡೇಟೆಡ್ ಸಿಂಗಲ್-ಸೀಟ್‌ನೊಂದಿಗೆ ಹೊಸ ಫ್ಲಾಟ್ ಫುಟ್‌ಬೋರ್ಡ್ ಅನ್ನು ಹೊಂದಿದೆ. ಇದಲ್ಲದೆ, ಸ್ಕೂಟರ್ ರಿವರ್ಸ್ ಮೋಡ್, ಸೈಡ್ ಸ್ಟ್ಯಾಂಡ್ ಅಲರ್ಟ್, ಇಕೋ ಮತ್ತು ಸ್ಪೋರ್ಟ್ಸ್ ಮೋಡ್, ಮ್ಯೂಸಿಕ್ ಪ್ಲೇಬ್ಯಾಕ್ ಮತ್ತು 34 ಲೀಟರ್ ಬೂಟ್ ಸ್ಪೇಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News