Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ

Cheapest MPV: ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನೀವು ಕೂಡ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಹೊಂದಿರುವ 7 ಆಸನಗಳ ಕಾರು (Cheapest Seven Seater Car) ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ. 

Written by - Nitin Tabib | Last Updated : Oct 11, 2021, 01:29 PM IST
  • ಆಗ್ಗದ ದರದಲ್ಲಿ ಹೆಚ್ಚು ಆಸನಗಳಿರುವ ಕಾರು ಖರೀದಿಸಬೇಕೆ?
  • ಉತ್ತಮ ಸ್ಥಳಾವಕಾಶದ ಜೊತೆಗೆ ಉತ್ತಮ ಮೈಲೇಜ್ ಹೊಂದಿರುವ ಕಾರು ಬೇಕೇ?
  • ತಡ ಯಾಕೆ ಬೇಗನೆ ಈ ಸುದ್ದಿ ಓದಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ,
Cheapest MPV:ಕಡಿಮೆ ವೆಚ್ಚದಲ್ಲಿ ಅತ್ಯಂತ ಅಗ್ಗದ 7 ಸೀಟರ್ ಖರೀದಿಸಬೇಕೆ? ಇಲ್ಲಿದೆ ಸುವರ್ಣಾವಕಾಶ title=
Cheapest Seven Seater Car (File Photo)

Cheapest MPV: ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಳಾವಕಾಶ ಮತ್ತು ಹೆಚ್ಚು ಆಸನ ಸಾಮರ್ಥ್ಯವಿರುವ ಕಾರುಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ. ನೀವು ಕೂಡ ಕಡಿಮೆ ಬೆಲೆಗೆ ಉತ್ತಮ ಮೈಲೇಜ್ ಹೊಂದಿರುವ 7 ಆಸನಗಳ ಕಾರು (Cheapest Seven Seater Car) ಖರೀದಿಸಲು ಯೋಚಿಸುತ್ತಿದ್ದರೆ, ಇದು ನಿಮಗೆ ಉತ್ತಮ ಅವಕಾಶ. ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ (Maruti Suzuki) ಈ ಅಕ್ಟೋಬರ್‌ನಲ್ಲಿ ತನ್ನ ಕೈಗೆಟುಕುವ ಎಂಪಿವಿ (Multi Purpose Vehicle) Maruti Eeco ಖರೀದಿಗೆ ಬಂಪರ್ ರಿಯಾಯಿತಿ ನೀಡುತ್ತಿದೆ.

ಈ ವಾಹನವನ್ನು ವಾಣಿಜ್ಯ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ಈ ಕಾರು ಎರಡು ವಿಭಿನ್ನ ವಿನ್ಯಾಸಗಳು ಅನರೆ 5 ಆಸನಗಳು ಮತ್ತು 7 ಆಸನಗಳಲ್ಲಿ ಬರುತ್ತದೆ. ಈ ಕಾರಿನ ಖರೀದಿಗೆ ರೂ. 5,000 ನಗದು ರಿಯಾಯಿತಿ, ರೂ. 10,000 ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿ ರೂ. 2,500 ಇದೆ. ಈ ರಿಯಾಯಿತಿಯನ್ನು ಪೆಟ್ರೋಲ್ ರೂಪಾಂತರಗಳ ಮೇಲೆ ಮಾತ್ರ ನೀಡಲಾಗುತ್ತಿದೆ, CNG ರೂಪಾಂತರಗಳ ಮೇಲೆ ಯಾವುದೇ ರಿಯಾಯಿತಿ ಇಲ್ಲ.

ಇದನ್ನೂ ಓದಿ-Maruti Suzuki : 1.81ಲಕ್ಷ ಕಾರುಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಮಾರುತಿ ಸುಜುಕಿ, ನಿಮ್ಮ ಕಾರು ಇದರಲ್ಲಿದೆಯೇ ಚೆಕ್ ಮಾಡಿಕೊಳ್ಳಿ

ಹೇಗಿದೆ ಈ MPV?
Maruti Eeco ಕಾರಿನಲ್ಲಿ ಕಂಪನಿಯು 1.2-ಲೀಟರ್ ನ್ಯಾಚುರಲ್ ಅಸ್ಪಾಯರ್ಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಿದ್ದು , ಅದು 73 ಪಿಎಸ್ ಪವರ್ ಮತ್ತು 98 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಗೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಕಾರು CNG ರೂಪಾಂತರದಲ್ಲೂ ಲಭ್ಯವಿದೆ, ಇದರ ಎಂಜಿನ್ 63PS ಪವರ್ ಮತ್ತು 85Nm ಟಾರ್ಕ್ ಉತ್ಪಾದಿಸುತ್ತದೆ.

ಇದನ್ನೂ ಓದಿ-Best Selling Maruti Car - Alto ಅಲ್ಲ Marutiಯ ಈ ಕಾರಿಗೆ ಜನರ ಹೆಚ್ಚಿನ ಮನ್ನಣೆ, ಮೈಲೇಜ್ 32 ಕಿ.ಮೀ !

ಇದರ ಪೆಟ್ರೋಲ್ ರೂಪಾಂತರವು 16.11 kmpl ಮತ್ತು CNG ರೂಪಾಂತರವು 20.88 kmpl ವರೆಗೆ ಮೈಲೇಜ್ ನೀಡುತ್ತದೆ. ಇದು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS), ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (EBD), ಡ್ರೈವರ್ ಏರ್‌ಬ್ಯಾಗ್, ಸ್ಪೀಡ್ ಅಲರ್ಟ್, ಹಿಂಭಾಗದ ಪಾರ್ಕಿಂಗ್ ಸೆನ್ಸರ್ ಮತ್ತು ಮ್ಯಾನುಯಲ್ ಏರ್ ಕಂಡೀಷನಿಂಗ್‌ನೊಂದಿಗೆ ಸೀಟ್ ಬೆಲ್ಟ್ ರಿಮೈಂಡರ್ ಗಳಂತಹ ವೈಶಿಷ್ಟ್ಯಗಳಿವೆ.

ಇದನ್ನೂ ಓದಿ-Hyundai Casper: ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಅತ್ಯಂತ ಅಗ್ಗದ ಬೆಲೆಯ ಮೈಕ್ರೋ SUV, ಬೆಲೆ ಎಷ್ಟಿರಲಿದೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News