Budget Cars: 4 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಕಾರ್ ಖರೀದಿಸಬೇಕೇ? ಈ ಮೂರು ಆಪ್ಶನ್ ಟ್ರೈ ಮಾಡಿ

Budget Cars - ಭಾರತದಲ್ಲಿ ಹ್ಯಾಚ್ ಬ್ಯಾಕ್ ಕಾರುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಏಕೆಂದರೆ, ಅವು ಕೈಗೆಟಗುವ ದರದಲ್ಲಿ ಸಿಗುವುದರ ಜೊತೆಗೆ ಒಂದು ಚಿಕ್ಕ ಕುಟುಂಬಕ್ಕೆ ಪರ್ಫೆಕ್ಟ್ ಆಪ್ಶನ್ ಆಗಿವೆ. ಒಂದು ವೇಳೆ ನೀವೂ ಕೂಡ ಕಡಿಮೆ ಬಜೆಟ್ ನಲ್ಲಿ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಲೇಖನದಲ್ಲಿ ನಾವು ನಿಮಗಾಗಿ 4 ಲಕ್ಷ ರೂ. ಗಿಂತಲೂ ಕಡಿಮೆ ಬಜೆಟ್ ನಲ್ಲಿ ಸಿಗುವ 3 ಕಾರುಗಳ ಮಾಹಿತಿ ನೀಡುತ್ತಿದ್ದೇವೆ.  

Written by - Nitin Tabib | Last Updated : Mar 18, 2022, 03:42 PM IST
  • ಕಡಿಮೆ ಬೆಲೆಗೆ ಒಳ್ಳೆಯ ಮೈಲೇಜ್ ನೀಡುವ ಕಾರು ಖರೀದಿಸಬೇಕೆ?
  • ಇಲ್ಲಿವೆ ಮೂರು ಆಯ್ಕೆಗಳು
  • 4 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ನೀವು ಈ ಕಾರುಗಳನ್ನು ಖರೀದಿಸಬಹುದು
Budget Cars: 4 ಲಕ್ಷಕ್ಕೂ ಕಡಿಮೆ ಬಜೆಟ್ ನಲ್ಲಿ ಕಾರ್ ಖರೀದಿಸಬೇಕೇ? ಈ ಮೂರು ಆಪ್ಶನ್ ಟ್ರೈ ಮಾಡಿ title=
Budget Cars (File Photo)

Budget Cars - ಭಾರತದಲ್ಲಿ ಹ್ಯಾಚ್ ಬ್ಯಾಕ್ ಕಾರುಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಏಕೆಂದರೆ, ಅವು ಕೈಗೆಟಗುವ ದರದಲ್ಲಿ ಸಿಗುವುದರ ಜೊತೆಗೆ ಒಂದು ಚಿಕ್ಕ ಕುಟುಂಬಕ್ಕೆ ಪರ್ಫೆಕ್ಟ್ ಆಪ್ಶನ್ ಆಗಿವೆ. ಒಂದು ವೇಳೆ ನೀವೂ ಕೂಡ ಕಡಿಮೆ ಬಜೆಟ್ ನಲ್ಲಿ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಈ ಲೇಖನದಲ್ಲಿ ನಾವು ನಿಮಗಾಗಿ 4 ಲಕ್ಷ ರೂ. ಗಿಂತಲೂ ಕಡಿಮೆ ಬಜೆಟ್ ನಲ್ಲಿ ಸಿಗುವ 3 ಕಾರುಗಳ ಮಾಹಿತಿ ನೀಡುತ್ತಿದ್ದೇವೆ.

1. Maruti Suzuki Alto (ಬೆಲೆ - 3.25 ಲಕ್ಷ ರೂ.ಗಳು ) - ಈ ವಾಹನವು (Maruti Suzuki India) ಕಳೆದ ಎರಡು ದಶಕಗಳಿಂದ ಭಾರತೀಯ ಮಾರುಕಟ್ಟೆಯಲ್ಲಿದೆ. ಕಾರಿನ ಬೆಲೆ ರೂ. 3.25 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಮಾರುತಿ ಸುಜುಕಿ ಆಲ್ಟೊನಲ್ಲಿ 0.8-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಲಾಗಿದೆ, ಇದು 47bhp ಶಕ್ತಿ ಮತ್ತು 69Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು CNG ಆಯ್ಕೆಯಲ್ಲಿಯೂ ಬರುತ್ತದೆ. CNG ಚಾಲಿತ ಕಾರಿನ ಮೈಲೇಜ್ 31KM ಗಿಂತ ಹೆಚ್ಚು. ಇದು 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್‌, ಮುಂಭಾಗ ಮತ್ತು ಹಿಂಭಾಗದ ಬಾಟಲ್ ಹೋಲ್ಡರ್‌ಗಳು, ಪವರ್ ವಿಂಡೋಗಳು, ರಿಮೋಟ್ ಕೀಲೆಸ್ ಎಂಟ್ರಿ ಮತ್ತು ಮುಂಭಾಗದ ಡ್ಯುಯಲ್ ಏರ್‌ಬ್ಯಾಗ್‌ಗಳೊಂದಿಗೆ ಡ್ಯುಯೆಲ್-ಟೋನ್ ಡ್ಯಾಶ್‌ಬೋರ್ಡ್ ಅನ್ನು ಹೊಂದಿದೆ.

ಇದನ್ನೂ ಓದಿ-ನಿಮ್ಮ NPS ಖಾತೆ ಫ್ರೀಜ್ ಆಗಿದೆಯೇ? ಹಾಗಿದ್ರೆ, ಹೀಗೆ ಮಾಡಿ ಮತ್ತೆ ಓಪನ್ ಆಗುತ್ತೆ!

2. Maruti Suzuki S-Presso (ಬೆಲೆ-3.85 ಲಕ್ಷ ರೂ.ಗಳು) - ಕಾರಿನ ಬೆಲೆ ರೂ.3.85 ಲಕ್ಷದಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದು 67bhp/90Nm ಟಾರ್ಕ್ ಉತ್ಪಾದಿಸುವ 1.0-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ಇದು ನಿಯಂತ್ರಿಸಲ್ಪಡುತ್ತದೆ. ಆಲ್ಟೊದಂತೆಯೇ, ಇದು ಸಿಎನ್‌ಜಿ ಆಯ್ಕೆಯಲ್ಲಿಯೂ ಲಭ್ಯವಿದೆ ಮತ್ತು 31ಕಿಮೀ ಮೈಲೇಜ್ ಅನ್ನು ನೀಡುತ್ತದೆ.  ಸೆಂಟ್ರಲೈಸ್ದ್ ಮೌಂಟೆಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮಾರುತಿ ಸ್ಮಾರ್ಟ್ ಪ್ಲೇ ಸ್ಟುಡಿಯೊದೊಂದಿಗೆ ಟಚ್‌ಸ್ಕ್ರೀನ್ ಸಿಸ್ಟಮ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಯುಎಸ್‌ಬಿ ಮತ್ತು 12-ವೋಲ್ಟ್ ಸ್ವಿಚ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳಂತಹ ವೈಶಿಷ್ಟ್ಯಗಳನ್ನು ಇದು ಒಳಗೊಂಡಿದೆ.

ಇದನ್ನೂ ಓದಿ-Edible Oil Price : ಅಡುಗೆ ಎಣ್ಣೆ ಬೆಲೆ ಏರಿಕೆಯ ಬಗ್ಗೆ ಬಿಗ್ ನ್ಯೂಸ್ : ಸರ್ಕಾರದಿಂದ ಕಠಿಣ ನಿರ್ಧಾರ

3. Datsun redi-GO (ಬೆಲೆ-3.98 ಲಕ್ಷ ರೂ.ಗಳು) - Datsun redi-GO ಹ್ಯಾಚ್‌ಬ್ಯಾಕ್ ಕಾರಿನ ಬೆಲೆ ರೂ 4.52 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ (ಎಕ್ಸ್ ಶೋ ರೂಂ). ಇದಕ್ಕೆ 0.8 ಲೀಟರ್ ಮತ್ತು 1 ಲೀಟರ್ ಪೆಟ್ರೋಲ್ ಎಂಜಿನ್ ನೀಡಲಾಗಿದೆ. ಇದು 22 kmpl ವರೆಗೆ ಮೈಲೇಜ್ ನೀಡುತ್ತದೆ. ಇದು LED DRL ಗಳು, LED ಫ್ರಂಟ್ ಫಾಗ್ ಲ್ಯಾಂಪ್‌ಗಳು, ಡಿಜಿಟಲ್ ಟ್ಯಾಕೋಮೀಟರ್, ಹೊಸ ಡ್ಯುಯಲ್-ಟೋನ್ 14-ಇಂಚಿನ ವೀಲ್ ಕವರ್, Android Auto ಮತ್ತು Apple CarPlay ಜೊತೆಗೆ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಕೀಲೆಸ್ ಎಂಟ್ರಿಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇದನ್ನೂ ಓದಿ-Tax Savings Tips : 10 ಅಲ್ಲ 12 ಲಕ್ಷದವರೆಗಿನ ಸಂಬಳಕ್ಕೂ ಕಟ್ಟಬೇಕಾಗಿಲ್ಲ ತೆರಿಗೆ : ಇಲ್ಲಿದೆ ಲೆಕ್ಕಾಚಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News