Budget 2023: ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಹತ್ವದ ಘೋಷಣೆ, 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಇಲ್ಲ

Income Tax: ಐದನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದ್ದಾರೆ. ಈಗ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವರು ಘೋಷಿಸಿದ್ದಾರೆ. 

Written by - Yashaswini V | Last Updated : Feb 1, 2023, 01:47 PM IST
  • ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ಮಾಡಲಾಗಿದೆ.
  • ಹೊಸ ತೆರಿಗೆ ರಚನೆಯನ್ನು ಡೀಫಾಲ್ಟ್ ತೆರಿಗೆ ಆಯ್ಕೆಯನ್ನಾಗಿ ಮಾಡಲು ಸರ್ಕಾರ ಪ್ರಸ್ತಾಪಿಸಿದೆ.
  • ಹೊಸ ಆದಾಯ ಪದ್ಧತಿಯ ಸೆಕ್ಷನ್ 87ಎ ಅಡಿಯಲ್ಲಿ ರಿಯಾಯಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ
Budget 2023:  ಆದಾಯ ತೆರಿಗೆ ಸ್ಲ್ಯಾಬ್‌ನಲ್ಲಿ ಮಹತ್ವದ ಘೋಷಣೆ, 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಇಲ್ಲ  title=
Budget 2023 income tax changes

Income Tax: ಈ ಬಾರಿ ಯುನಿಯನ್​ ಬಜೆಟ್​ನಲ್ಲಿ ಆದಾಯ ತೆರಿಗೆ ಪಾವತಿಸುವವರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದ್ದಾರೆ. 

7 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ: ವಿತ್ತ ಸಚಿವೆ
2023ರ ಬಜೆಟ್​ನಲ್ಲಿ ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈಗ ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯದವರೆಗೆ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಘೋಷಿಸಿದರು. ಗಮನಾರ್ಹವಾಗಿ, ಈ ಮಿತಿ ಮೊದಲು ಐದು ಲಕ್ಷ ರೂಪಾಯಿಗಳಷ್ಟಿತ್ತು. 

ಇದನ್ನೂ ಓದಿ- budget 2023 : ಬಜೆಟ್‌ನಲ್ಲಿ ರೈತರಿಗೆ  ಭರ್ಜರಿ ಗಿಫ್ಟ್!  ಅನ್ನ ಯೋಜನೆ ಘೋಷಿಸಿದ ವಿತ್ತ ಮಂತ್ರಿ 

ಇದಲ್ಲದೆ, ಹೊಸ ತೆರಿಗೆ ರಚನೆಯನ್ನು ಡೀಫಾಲ್ಟ್ ತೆರಿಗೆ ಆಯ್ಕೆಯನ್ನಾಗಿ ಮಾಡಲು ಸರ್ಕಾರ ಪ್ರಸ್ತಾಪಿಸಿದೆ.  ಹೊಸ ಆದಾಯ ಪದ್ಧತಿಯ ಸೆಕ್ಷನ್ 87ಎ ಅಡಿಯಲ್ಲಿ ರಿಯಾಯಿತಿಯನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 

ಅದೇ ಸಮಯದಲ್ಲಿ, ಈ ಬಾರಿಯ ಬಜೆಟ್‌ನಲ್ಲಿ  ತೆರಿಗೆ ಸ್ಲ್ಯಾಬ್ ಅನ್ನು ಕಡಿಮೆ ಮಾಡಲಾಗಿದೆ. ಮೊದಲು ಏಳು ತೆರಿಗೆ ಸ್ಲ್ಯಾಬ್‌ಗಳಿದ್ದವು. ಈಗ ಐದು ಸ್ಲ್ಯಾಬ್‌ಗಳು ಮಾತ್ರ ಇರುತ್ತವೆ. 

ಇದನ್ನೂ ಓದಿ- Health Budget 2023: ಆರೋಗ್ಯ ಕ್ಷೇತ್ರಕ್ಕೆ ಬೂಸ್ಟರ್ ಡೋಸ್ ನೀಡಿದ ವಿತ್ತ ಸಚಿವೆ

ಹೊಸ ತೆರಿಗೆ ಸ್ಲ್ಯಾಬ್  
ಆದಾಯ ತೆರಿಗೆ %
0 ರಿಂದ 3 ಲಕ್ಷ 0%
3 ರಿಂದ 6 ಲಕ್ಷ 5%
6 ರಿಂದ 9 ಲಕ್ಷ 10%
9 ರಿಂದ 12 ಲಕ್ಷ 15%
12 ರಿಂದ 15 ಲಕ್ಷ 20%
ಹೆಚ್ಚು 15 ಲಕ್ಷ 30%

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News