Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ!

BSNL Best Prepaid Plans: BSNL ಗ್ರಾಹಕರಿಗೆ ಅಥವಾ BSNLಗೆ ಬದಲಾಯಿಸಲು (MNP) ಪರಿಗಣಿಸುವವರಿಗೆ, ಅದ್ಭುತ 4G ರೀಚಾರ್ಜ್ ಪ್ಲಾನ್ ಇದೆ. ಇದು 2GB ದೈನಂದಿನ ಡೇಟಾವನ್ನು 75 ದಿನಗಳವರೆಗೆ ದಿನಕ್ಕೆ 7 ರೂ.ಗಿಂತ ಕಡಿಮೆ ಬೆಲೆಗೆ ನೀಡುತ್ತದೆ. ಇ 

Written by - Puttaraj K Alur | Last Updated : Sep 17, 2024, 04:40 PM IST
  • BSNL ಆದಷ್ಟು ಬೇಗ ದೇಶದಾದ್ಯಂತ 4G ಸೇವೆಯನ್ನು ಹೊರತರಲಿದೆ
  • 2025ರ ಮಧ್ಯದಲ್ಲಿ 4G ಸೇವೆ ಪರಿಚಯಿಸಲಿದೆ ಎಂದು ವರದಿಯಾಗಿದೆ
  • BSNLನ 499 ರೂ. ರೀಚಾರ್ಜ್ ಪ್ಲ್ಯಾನ್ ಗ್ರಾಹಕರಿಗೆ ಅದ್ಭುತವಾಗಿದೆ
Best Prepaid Plans: ಕೇವಲ 7 ರೂಪಾಯಿ ಪಾವತಿಸಿ ಪ್ರತಿದಿನ 2GB ಡೇಟಾವನ್ನು ಪಡೆಯಿರಿ! title=
BSNLನ 499 ರೂ. ರೀಚಾರ್ಜ್ ಪ್ಲ್ಯಾನ್

BSNL Best Prepaid Plans: ರಿಲಯನ್ಸ್ ಜಿಯೋ ಟೆಲಿಕಾಂ ಉದ್ಯಮವನ್ನು ಪ್ರವೇಶಿಸಿದಾಗ, ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆಗಳನ್ನು ನೋಡಿದ ನಂತರ ಕೋಟಿಗಟ್ಟಲೆ ಬಳಕೆದಾರರು ಜಿಯೋಗೆ ವಲಸೆ ಹೋದರು. ಇದರಿಂದ ಬಿಎಸ್‌ಎನ್‌ಎಲ್‌ ಭಾರೀ ನಷ್ಟ ಅನುಭವಿಸಿತು. ಈಗ ಜಿಯೋದ ಯೋಜನೆಗಳು ದುಬಾರಿಯಾಗಿದ್ದು, BSNL ಬಲವಾದ ಪುನರಾಗಮನ ಮಾಡಿದೆ. BSNL ಆದಷ್ಟು ಬೇಗ ದೇಶದಾದ್ಯಂತ 4G ಸೇವೆಯನ್ನು ಹೊರತರಲಿದೆ. 2025ರ ಮಧ್ಯದಲ್ಲಿ 4G ಸೇವೆಯನ್ನು ಹೊರತರಲಿದೆ ಎಂದು ವರದಿಯಾಗಿದೆ.

7 ರೂ. ಪಾವತಿಸಿ ಪ್ರತಿದಿನ 2GB ಡೇಟಾ ಪಡೆಯಿರಿ

BSNL ಗ್ರಾಹಕರಿಗೆ ಅಥವಾ BSNLಗೆ ಬದಲಾಯಿಸಲು (MNP) ಪರಿಗಣಿಸುವವರಿಗೆ, ಅದ್ಭುತ 4G ರೀಚಾರ್ಜ್ ಪ್ಲಾನ್ ಇದೆ. ಇದು 2GB ದೈನಂದಿನ ಡೇಟಾವನ್ನು 75 ದಿನಗಳವರೆಗೆ ದಿನಕ್ಕೆ 7 ರೂ.ಗಿಂತ ಕಡಿಮೆ ಬೆಲೆಗೆ ನೀಡುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ..

ಇದನ್ನೂ ಓದಿಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..!

BSNL 499 ರೂ. ರೀಚಾರ್ಜ್ ಪ್ಲ್ಯಾನ್ 

ಈ ರೀಚಾರ್ಜ್ ಪ್ಲಾನ್ 499‌ ರೂ. ಮತ್ತು 75 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ನೀವು ದಿನಕ್ಕೆ 100 ಉಚಿತ SMS ಪಡೆಯುತ್ತೀರಿ. ಯಾವುದೇ ಮಿತಿಯಿಲ್ಲದೆ ಸ್ಥಳೀಯ ಮತ್ತು STD ಕರೆಗಳನ್ನು ಮಾಡಬಹುದು. ಈ ರೀಚಾರ್ಜ್ ಯೋಜನೆಯೊಂದಿಗೆ ನೀವು ಪ್ರತಿದಿನ 2GB ಡೇಟಾ ಸಹ ಪಡೆಯುತ್ತೀರಿ. ಇದಲ್ಲದೆ ಈ ರೀಚಾರ್ಜ್ ಯೋಜನೆಯೊಂದಿಗೆ ನೀವು 3GB ಹೆಚ್ಚುವರಿ ಡೇಟಾವನ್ನು ಸಹ ಪಡೆಯುತ್ತೀರಿ.

ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾತನಾಡಿದ್ದು, 2025ರ ಮಧ್ಯದಲ್ಲಿ ಬಿಎಸ್‌ಎನ್‌ಎಲ್‌ನ 1 ಲಕ್ಷ ಟವರ್‌ಗಳನ್ನು ಸ್ಥಾಪಿಸಲಾಗುವುದು, ಈ ಪೈಕಿ 25 ಸಾವಿರ ಟವರ್‌ಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ. ದೀಪಾವಳಿ ವೇಳೆಗೆ 75 ಸಾವಿರ ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಬಿಎಸ್‌ಎನ್‌ಎಲ್ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.  

ಇದನ್ನೂ ಓದಿ₹3,337 ಕೋಟಿಯ ಒಡೆಯ ಎನಿಸಿಕೊಂಡಿರುವ ದೇಶದ ಶ್ರೀಮಂತ ರೈಲು ನಿಲ್ದಾಣ; ಆದಾಯದ ಮೂಲ ಯಾವುದು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News