ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ !

Honda Best Selling Bike: ಬೈಕ್ ಹಾಗೂ ಸ್ಕೂಟರ್ ಗಳ ಸಾಕಷ್ಟು ರೇಂಜ್ ಹೊಂಡಾ ಬಳಿ ಇವೆ. ಇವುಗಳಲ್ಲಿ ಹೊಂಡಾ ಸಿಬಿ ಶೈನ್ ಅತಿ ಹೆಚ್ಚು ಮಾರಾಟಗೊಳ್ಳುವ ಮೋಟರ್ ಸೈಕಲ್ ಆಗಿದೆ.  

Written by - Nitin Tabib | Last Updated : Jan 29, 2023, 08:38 AM IST
  • ಹೋಂಡಾ ಸಿಬಿ ಶೈನ್‌ನ ಕೆಲ ಪರ್ಯಾಯಗಳನ್ನು ನಾವು ನಿಮಗಾಗಿ ತಂದಿದ್ದೇವೆ, ಇವುಗಳ ಬೆಲೆ 30 ಸಾವಿರ ರೂಪಾಯಿಗಳು.
  • ನಾವು ಇವುಗಳನ್ನು OLX ನಲ್ಲಿ ಗಮನಿಸಿದ್ದೇವೆ ಮತ್ತು ಈ ಎಲ್ಲಾ ಬೈಕ್‌ಗಳು ದೆಹಲಿ ನೊಂದಾಯಿತ ಬೈಕ್ ಗಳಾಗಿವೆ.
ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ ! title=
ಹೊಂಡಾ ಸಿಬಿ ಶೈನ್

Second Hand Bike: ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ಸ್ ದೇಶದಲ್ಲಿ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪನಿಯಾಗಿದೆ. ಹೋಂಡಾ ಬೃಹತ್ ಶ್ರೇಣಿಯ ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಹೊಂದಿದೆ, ಆದರೆ ಇವುಗಳಲ್ಲಿ ಅತಿ ಹೆಚ್ಚು ಮಾರಾತಗೊಳ್ಳುವ ಬೈಕ್ ಎಂದರೆ ಕಂಪನಿಯ ಹೋಂಡಾ ಸಿಬಿ ಶೈನ್ ಮೋಟಾರ್‌ಸೈಕಲ್ ಆಗಿದೆ. ಹೋಂಡಾ ಶೈನ್ 125,  124cc, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ, ಇದು 10.7PS ಪವರ್ ಮತ್ತು 11Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಹೋಂಡಾದ ACG (ಆಲ್ಟರ್ನೇಟರ್ ಕರೆಂಟ್ ಜನರೇಟರ್) ಸೈಲೆಂಟ್ ಸ್ಟಾರ್ಟರ್ ಆಯ್ಕೆಯ ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಹೊಂದಿದೆ.

ಶೋರೂಂನಿಂದ ಈ ಬೈಕ್ ಖರೀದಿಸಿದರೆ ಕನಿಷ್ಠ ₹ 90,000 ಪಾವತಿಸಬೇಕಾಗುತ್ತದೆ. ಆದರೆ, ನೀವು ಇದನ್ನು ಕೇವಲ ₹ 30,000 ಕ್ಕೆ ಖರೀದಿಸಬಹುದು. ವಾಸ್ತವದಲ್ಲಿ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ತಮ್ಮ ಹಳೆಯ ಹೋಂಡಾ ಸಿಬಿ ಶೈನ್ ಬೈಕ್‌ಗಳನ್ನು ಮಾರಾಟ ಮಾಡುವ ಹೆಚ್ಚಿನ ಸಂಖ್ಯೆಯ ಜನರಿದ್ದಾರೆ. ಇವುಗಳಲ್ಲಿ ಕೆಲವು ಬೈಕ್‌ಗಳು ಹೆಚ್ಚಾಗಿ ಬಳಕೆಯಾಗಿಲ್ಲ. ಹೋಂಡಾ ಸಿಬಿ ಶೈನ್‌ನ ಕೆಲ ಪರ್ಯಾಯಗಳನ್ನು ನಾವು ನಿಮಗಾಗಿ ತಂದಿದ್ದೇವೆ, ಇವುಗಳ ಬೆಲೆ 30 ಸಾವಿರ ರೂಪಾಯಿಗಳು. ನಾವು ಇವುಗಳನ್ನು OLX ನಲ್ಲಿ ಗಮನಿಸಿದ್ದೇವೆ ಮತ್ತು ಈ ಎಲ್ಲಾ ಬೈಕ್‌ಗಳು ದೆಹಲಿ ನೊಂದಾಯಿತ ಬೈಕ್ ಗಳಾಗಿವೆ.

1. ಮೊದಲ ಹೋಂಡಾ ಶೈನ್ 2015 ರ ಮಾಡೆಲ್ ಆಗಿದೆ. ಇದುವರೆಗೆ ಅದು ಕೇವಲ 28,000 ಕಿಮೀ ಚಲಿಸಿದೆ. ಬೈಕ್ ಗೆ 30 ಸಾವಿರ ರೂಪಾಯಿ ಬೇಡಿಕೆ ಇಡಲಾಗಿದೆ. ಇದರ ಸ್ಥಳ ದ್ವಾರಕಾ ಸೆಕ್ಟರ್ 2. ಬೈಕ್‌ನ ಎರಡೂ ಟೈರ್‌ಗಳು ಹೊಸ ಟೈರ್ ಗಳಾಗಿವೆ ಎಂದು ಹಾನರ್ ಹೇಳಿಕೊಂಡಿದೆ. ಇದು ಪ್ರತಿ ಲೀಟರ್‌ಗೆ 55ಕಿಮೀ ಮೈಲೇಜ್ ಕೊಡುತ್ತದೆ.

ಇದನ್ನೂ ಓದಿ-Budget 2023: ಈ ಮೂರು ಮಹತ್ವದ ಘೋಷಣೆಗಳ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ!

2. ಎರಡನೇ ಬೈಕ್ ಕೂಡ 2015 ರ ಮಾಡೆಲ್ ಬೈಕ್ ಆಗಿದೆ, ಇದು ಕೇವಲ 126,500 ಕಿಮೀ ಚಲಿಸಿದೆ. ಬೈಕ್ ಗೆ 30 ಸಾವಿರ ರೂಪಾಯಿ ಬೇಡಿಕೆ ಇಡಲಾಗಿದೆ. ಇದರ ಸ್ಥಳ ಪ್ರತಾಪ್ ವಿಹಾರ್, ದೆಹಲಿ.

ಇದನ್ನೂ ಓದಿ-Budget 2023: ಪಿಎಂ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಸಿಗುತ್ತಾ ಈ ಸಂತಸದ ಸುದ್ದಿ!

3. ಮೂರನೇ ಹೋಂಡಾ ಶೈನ್ ಇದುವರೆಗೆ ಕೇವಲ 45 ಸಾವಿರ ಕಿಮೀ ಚಲಿಸಿದೆ. ಬೈಕ್‌ನ ಎಂಜಿನ್‌ನಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹಾನರ್ ಹೇಳಿಕೊಂಡಿದೆ. ಇದು 55 ರಿಂದ 60kmpl ಮೈಲೇಜ್ ನೀಡುತ್ತದೆ. ಎರಡೂ ಟೈರ್‌ಗಳು ಹೊಸ ಮತ್ತು ಟ್ಯೂಬ್‌ಲೆಸ್ ಆಗಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News