ಗುಡ್ ನ್ಯೂಸ್! ಜನ ಧನ್ ಖಾತೆಗಳಲ್ಲಿ ಈ ವಹಿವಾಟುಗಳಿಗೆ ಇಲ್ಲ ಶುಲ್ಕ

ಜನ ಧನ್ ಖಾತೆ ಹೊಂದಿರುವವರಿಗೆ ಬ್ಯಾಂಕುಗಳು ಹೆಚ್ಚಿನ ಪರಿಹಾರ ನೀಡಿವೆ. ಜನ ಧನ್ ಖಾತೆದಾರರು ಹಣವನ್ನು ಠೇವಣಿ ಇರಿಸಲು ಅಥವಾ ಹಿಂಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಬ್ಯಾಂಕುಗಳು ಘೋಷಿಸಿವೆ.

Last Updated : Nov 2, 2020, 03:20 PM IST
  • ಜನ ಧನ್ ಖಾತೆ ಹೊಂದಿರುವವರಿಗೆ ಬ್ಯಾಂಕುಗಳು ಹೆಚ್ಚಿನ ಪರಿಹಾರ
  • ಎಲ್ಲಾ ಬ್ಯಾಂಕುಗಳು ಆರ್‌ಬಿಐನ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು ಜನ ಧನ್ ಖಾತೆಗಳಿಗೆ ಶುಲ್ಕ ವಿಧಿಸಲು ಯಾವುದೇ ಸೂಚನೆಗಳನ್ನು ನೀಡಿಲ್ಲ
  • ಜನ ಧನ್ ಖಾತೆದಾರರು ಹಣವನ್ನು ಠೇವಣಿ ಇರಿಸಲು ಅಥವಾ ಹಿಂಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ
ಗುಡ್ ನ್ಯೂಸ್! ಜನ ಧನ್ ಖಾತೆಗಳಲ್ಲಿ ಈ ವಹಿವಾಟುಗಳಿಗೆ ಇಲ್ಲ ಶುಲ್ಕ  title=
File Image

ನವದೆಹಲಿ: ಜನ ಧನ್ ಖಾತೆ ಹೊಂದಿರುವವರಿಗೆ ಬ್ಯಾಂಕುಗಳು ದೊಡ್ಡ ಪರಿಹಾರ ನೀಡಿದ್ದು ಜನ ಧನ್ (Jan Dhan) ಖಾತೆದಾರರು ಹಣವನ್ನು ಠೇವಣಿ ಇರಿಸಲು ಅಥವಾ ಹಿಂಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಬ್ಯಾಂಕುಗಳು ಘೋಷಿಸಿವೆ. ಸಾಮಾನ್ಯ ಠೇವಣಿ ಖಾತೆಗಳಲ್ಲಿ ಅಂತಹ ಯಾವುದೇ ಶುಲ್ಕ ವಿಧಿಸಬಾರದು ಎಂದು ಬ್ಯಾಂಕುಗಳು ಹೇಳಿವೆ.

ಈ ಬ್ಯಾಂಕುಗಳು ಯಾವುದೇ ಶುಲ್ಕ ತೆಗೆದುಕೊಳ್ಳುತ್ತಿಲ್ಲ :
ಐಎಎನ್‌ಎಸ್‌ನ ಸುದ್ದಿಯ ಪ್ರಕಾರ, ಐಸಿಐಸಿಐ ಬ್ಯಾಂಕ್ (ICICI Bank) ತನ್ನ ಎಲ್ಲಾ ಉಳಿತಾಯ ಖಾತೆಗಳು ಮತ್ತು ಜನ ಧನ್ ಖಾತೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸಬಾರದು ಎಂದು ಹೇಳಿದೆ. ಅದೇ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಬಿಒಬಿ (BOB), ಪಿಎನ್‌ಬಿ (PNB) ಸಹ ಜನ ಧನ್ ಖಾತೆಗಳಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಹೇಳಿದೆ. ಅದೇ ರೀತಿ ಜನ ಧನ್ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಉಳಿಸುವ ಬಗ್ಗೆಯೂ ಯಾವುದೇ ನಿಯಮವಿಲ್ಲ. ಆದರೆ ಸಾಮಾನ್ಯ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಇರಿಸುವುದು ಕಡ್ಡಾಯವಾಗಿದೆ.

ಜನ್-ಧನ್, 'ಗೇಮ್ ಚೇಂಜರ್' ಎಂಬ ಮೋದಿ ಟ್ವೀಟ್ ರಹಸ್ಯವೇನು?

ಸರ್ಕಾರದ ಸ್ಪಷ್ಟನೆ:-
ಜನ್ ಧನ್ ಖಾತೆಗಳಿಂದ ಪ್ರತಿ ಬಾರಿ ಹಣ ವಿತ್ ಡ್ರಾ ಮಾಡಿದಾದಗೂ 100 ರೂ.ಗಳನ್ನು ಶುಲ್ಕವಾಗಿ ವಿಧಿಸಲಾಗುವುದು ಎಂದು ಇತ್ತೀಚಿಗೆ ವರದಿಗಳು ಕೇಳಿಬಂದಿತ್ತು. ಆದರೆ ಈ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಸರ್ಕಾರದಿಂದ ಸ್ಪಷ್ಟಪಡಿಸಲಾಗಿದೆ. ಪಿಐಬಿ ನಡೆಸಿದ ಫ್ಯಾಕ್ಟ್ ಚೆಕ್ ನಲ್ಲಿ ಜನ ಧನ್ ಖಾತೆಗಳ ಉಚಿತ ಬ್ಯಾಂಕಿಂಗ್ ಸೇವೆಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿದುಬಂದಿದೆ. ಎಲ್ಲಾ ಬ್ಯಾಂಕುಗಳು ಆರ್‌ಬಿಐನ ಕಠಿಣ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದು ಜನ ಧನ್ ಖಾತೆಗಳಿಗೆ ಶುಲ್ಕ ವಿಧಿಸಲು ಯಾವುದೇ ಸೂಚನೆಗಳನ್ನು ನೀಡಿಲ್ಲ ಎಂಬುದು ಗಮನಾರ್ಹ ಅಂಶವಾಗಿದೆ.

ಜನ ಧನ್ ಖಾತೆದಾರರಿಗೆ ಸಿಗಲಿದೆ ಡಬಲ್ ವಿಮಾ ಸೌಲಭ್ಯ

ಜನ ಧನ್ ಖಾತೆಗಳನ್ನು ತೆರೆಯುವುದರ ಲಾಭ :-
ದೇಶದ ಎಲ್ಲ ಜನರಿಗೆ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಮೊದಲ ಅವಧಿಯ ಮೊದಲ ವರ್ಷದಲ್ಲಿ ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯನ್ನು ಪ್ರಾರಂಭಿಸಿದರು. ಈ ಯೋಜನೆಯ ಉದ್ದೇಶವು ಪ್ರತಿ ಕುಟುಂಬಕ್ಕೂ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕಲ್ಪಿಸುವುದು. ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರದಿಂದ ಸಹಾಯಧನವನ್ನು ನೇರವಾಗಿ ಈ ಖಾತೆಗಳಿಗೆ ಕಳುಹಿಸಲಾಗಿದೆ. ಜನ ಧನ್ ಯೋಜನೆ ಅಡಿಯಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿನ ಖಾತೆಯನ್ನು ಸಹ ತೆರೆಯಬಹುದು. ಈ ಯೋಜನೆಯಡಿ ಖಾತೆ ತೆರೆದಾಗ ನಿಮಗೆ ರೂಪೇ ಎಟಿಎಂ ಕಾರ್ಡ್, 2 ಲಕ್ಷ ರೂ.ಗಳ ಅಪಘಾತ ವಿಮೆ, 30000 ರೂ. ಲೈಫ್ ಕವರ್ ಮತ್ತು ಠೇವಣಿ ಮೊತ್ತದ ಮೇಲೆ ಬಡ್ಡಿ ಸಿಗುತ್ತದೆ.
 

Trending News